ಶ್ರೀಗಳು
ಸದ್ಗುರು ಶ್ರೀ ರಾಮಾನಂದಾವಧೂತ ಸ್ವಾಮೀಜಿಗಳು
ಸದ್ಗುರು ಶ್ರೀ ರಾಮಾನಂದಾವಧೂತ ಸ್ವಾಮೀಜಿಯವರ ಮಹಿಮೆ ಅಪಾರ. ತಮ್ಮ ಜೀವನದಲ್ಲಿ ಅನುಗ್ರಹ ಹೊಂದಿದವರು ಒಮ್ಮೆ ಸ್ವಾಮಿಯ ಪಾದಕಮಲಗಳಲ್ಲಿ ಬಿದ್ದು ಬೇಡಿದವನು ತನ್ನ ಜೀವನದಲ್ಲಾದ ಅತಿಶಯವಾದ ಪರಿವರ್ತನೆ ಸಂತಸವನ್ನು ಎಂದೂ ಮರೆಯದಿರುವನು. ಆಗಾಗ ಸ್ವಾಮೀಜಿಯವರನ್ನು ಕಾಣಲು ಪ್ರಸಾದ ಕೃಪೆ ಪಡೆಯಲು ಬಂದು ಶ್ರೇಯೋಭಾಗಿಗಳಾಗುತ್ತಿ ದ್ದಾರೆ. ಶರಣನ ಒಳ್ಳೆಯ ನಡಾವಳಿ ಆಚರಣೆಗೆ ಪ್ರೇರಕನು ಸ್ವಾಮೀಜಿ. ತನ್ನ ಜೀವನದಲ್ಲಿ ಮೋಕ್ಷ ಪಡೆಯಲು (ಭವರೋಗ ಪರಿಹಾರ) ಮನಸ್ಸಿ ನಲ್ಲಿ ಅಭೀಪ್ಸೆ ಉಂಟಾಗಲು ಗುರುವೇ ಕಾರಣ. ಸಕಲ ಜನರಿಗೂ ಸನ್ಮಂಗಲವನ್ನು ಉಂಟು ಮಾಡುವ ಶುಭ ಚರಣಗಳನ್ನು ಭಕ್ತನು ಎಂದೂ ಮರೆಯಲಾರನು. ಕಲಿಕಾಲದ ದೋಷವನ್ನು ನಿವಾರಿಸಲು ದೀನರನ್ನು ಉದ್ಧ ರಿಸಿ ಮೇಲೆತ್ತಲು, ಪಾಪದ ಲೇಪಗಳನ್ನು ಹರಿದೊಗೆದು ಪರತತ್ವ ವಾದ ಮುಕ್ತಿಯನ್ನು ತನ್ನ ಕೃಪಾಶೀರ್ವಾದದಿಂದ ರಚನಾತ್ಮಕವಾಗಿ ನೀಡುವ ಪರಮಹಂಸರ ಮಹಿಮೆ ವಿಶೇಷವಾದುದು.
ಮಾರುತಿಯನ್ನು ಅನುದಿನವೂ ಪೂಜಿಸಿ, ಸೇವಿಸುತ್ತಾ ಶ್ರೀಧರರ ಪಾದುಕೆಗಳನ್ನು ಪ್ರೀತ್ಯಾದರಗಳಿಂದ ಸೇವಿಸಿ, ತಮ್ಮೆಡೆಗೆ ಬಂದ ಭಕ್ತರನ್ನು ಉದ್ದರಿಸುತ್ತ ಭಕ್ತರು ನೀಡಿದ ಭಿಕ್ಷಗಳನ್ನು ಪಡೆಯುತ್ತ ದೀಪಿಕಾಪುರದ ದೀಪಕನಾಗಿ' ಗುರು ಶೋಭಿಸುತ್ತಿದ್ದಾರೆ. ಸದ್ಗುರು ರಾಮಾನಂದರು ಬರುವ ಭಕ್ತರನ್ನು ಪ್ರೀತಿಯಿಂದ ಬರಮಾಡಿಕೊಂಡು, ಅವರ ಸಂಕಷ್ಟ ನಿವಾರಣೆಗೆ ಎಂದಿನಂತೆ ತೊಡಗಿಕೊಂಡಿದ್ದರು. ಗುರುವು ಮಂದಸ್ಥಿ ತರಾಗಿ ಒಮ್ಮೆ ಭಕ್ತನ ಕಡೆ ನೋಡಿದರೆ ಸಾಕು, ಅದು ಆತನ ಬಾಳಿನುದ್ದಕ್ಕೂ ಕರುಣಾ ಶರಧಿಯಾಗಿ ಕಾಯುವುದು. ಸರ್ವ ಸಂಪದವೂ ಅಲ್ಲಿ ಸಾಕಾರವಾಗುವುದು. ಸದ್ಗುರು ಶ್ರೀ ರಾಮಾನಂದಾವಧೂತ ಸ್ವಾಮೀಜಿಯವರ ಮಹಿಮೆ ಅಪಾರ. ತಮ್ಮ ಜೀವನದಲ್ಲಿ ಅನುಗ್ರಹ ಹೊಂದಿದವರು ಒಮ್ಮೆ ಸ್ವಾಮಿಯ ಪಾದಕಮಲಗಳಲ್ಲಿ ಬಿದ್ದು ಬೇಡಿದವನು ತನ್ನ ಜೀವನದಲ್ಲಾದ ಅತಿಶಯವಾದ ಪರಿವರ್ತನೆ ಸಂತಸವನ್ನು ಎಂದೂ ಮರೆಯದಿರುವನು. ಆಗಾಗ ಸ್ವಾಮೀಜಿಯವರನ್ನು ಕಾಣಲು ಪ್ರಸಾದ ಕೃಪೆ ಪಡೆಯಲು ಬಂದು ಶ್ರೇಯೋಭಾಗಿಗಳಾಗುತ್ತಿದ್ದಾರೆ. ಭಕ್ತರ ಭವತಾಪವನ್ನು ಹರಿದೊಗೆದ ಮಹಿಮಾ ಸಂಪನ್ನರಾದ ಗುರುವು ಸ್ವತಃ ಕವಿಯೂ ಕವಿಗಳಿಗೆ ಕಾಮಧೇನುವೂ ಆಗಿದ್ದಾರೆ. ಸಕಲ ಪತಿತರನ್ನು ಪಾವನಗೊಳಿಸಿದ ದತ್ತಾತ್ರೇಯನ ಅವತಾರವೇ ಆದ ಶ್ರೀಧರಸ್ವಾಮಿಗಳ ಶಿಷ್ಯೋತ್ತಮರಾದ ರಾಮಾನಂದಸ್ವಾಮಿಗಳು ಐವತ್ನೂರು ಅಧ್ಯಾಯಗಳಿರುವ ಶ್ರೀ ದತ್ತಗುರು ಚರಿತ್ರೆಯನ್ನು ಮುಮುಕ್ಷುಗಳಿಗೆ ಅನುಕೂಲವಾಗುವಂತೆ ಸಂಕ್ಷಿಪ್ತವಾಗಿ ಐವತ್ತ್ಮೂರು ಷಟ್ಪದಿಯಲ್ಲಿ (ಭಾಮಿನಿ) ಬರೆದು ಭಕ್ತರಿಗೆ ನೀಡಿದ್ದಾರೆ. ಈವತ್ತಿನ ಅವಸರದ ದಿನದಲ್ಲಿ ದೊಡ್ಡ ಗಾತ್ರದ ಪುಸ್ತಕ ಪಠಣ ಮಾಡಲು ಜನರಿಗೆ ಪುರುಸೊತ್ತೆಲ್ಲಿ? ಹೀಗಾಗಿ ಸಂಕ್ಸಿಪ್ತ ಗುರುಚರಿತ್ರೆ, ನಿತ್ಯಪಠಣಕ್ಕೂ ಅನುಕೂಲವಾಗಿದೆ.
ಅಂದು ಕೌಶಿಕಮುನಿ (ವಿಶ್ವಾಮಿತ್ರ) ತಾನು ಭಕ್ತಿಪೂರ್ವಕವಾಗಿ ಶ್ರೀರಾಮನನ್ನು ಪರಮಪುರುಷ ಪರಬ್ರಹ್ಮನೆಂದು ಕೊಂಡಾಡಿದ. ಅದರಿಂದಲೇ ಇಂದು ನಮಗೆಲ್ಲ ಶ್ರೀ ರಾಮನನ್ನು ನೆನೆಯುವಂತೆ ಮಾಡಿದ. (ಅಂತಹ ವಿಶ್ವಾಮಿತ್ರ ಗೋತ್ರದಲ್ಲಿ ಜನಿಸಿದವರು ರಾಮಾನಂದಸ್ವಾಮೀಜಿ) ವಿಶ್ವಾಮಿತ್ರ ಋಷಿ ವಿಭಕ್ತಿಯೆಲ್ಲವನ್ನೂ ಸ್ವಾಮಿಯಲ್ಲಿ ಆರೋಪಿಸಿ, ಭಕ್ತಿಯನ್ನು ತಾನು ಇರಿಸಿಕೊಂಡು “ರಾಮೋ ರಾಜಮಣಿಸ್ಸದಾ ವಿಜಯತೇ...” ಎಂದು ಸ್ತುತಿಸಿದ್ದು. ರಾಮನು ರಾಜಶ್ರೇಷ್ಠನು. ಅವನನ್ನು ನುತಿಸಿದವರಿಗೆ ಯಾವಾಗಲೂ ಜಯವುಂಟು. ಸೀತೆಯ ಪತಿಯಾದ (ಒಡೆಯನಾದ) ಅಂತಹ ರಾಮನನ್ನು ಭಜಿಸುವೆನು. ರಾಕ್ಷಸ ಸೈನ್ಯವು ರಾಮನಿಂದ ಕೊಲ್ಲಲ್ಪಟ್ಟಿತು. (ಅಂತಹ) ರಾಮನಿಗೆ ನಮಸ್ಕಾರವು. ನನಗೆ ಶ್ರೀ ರಾಮನ ಹೊರತು ಎರಡನೆಯ ದೊಡ್ಡ ಪರಾಯಣ ವಸ್ತುವಿಲ್ಲ. (ಅವನ ಸ್ಮರಣೆಯಿಂದ ಪರದೊಂದಿಗೆ ಏಕತ್ವವನ್ನು ಹೊಂದುತ್ತೇನೆ) ನಾನು ರಾಮನ ದಾಸನು. ಯಾವಾಗಲೂ ನನ್ನ ಚಿತ್ತವು ರಾಮನಲ್ಲಿ ಲಯಗೊಳ್ಳಲಿ. ಎಲೈ ರಾಮನೇ ನನ್ನನ್ನು ಉದ್ದರಿಸು ಎಂಬುದಾಗಿ ನುತಿಸಿ ಶ್ರೀರಾಮನಲ್ಲಿ ರಮಮಾಣನಾದನು. ಪ್ರತಿಸ್ವರ್ಗವನ್ನೇ ನಿರ್ಮಿಸುವ ಶಕ್ತಿಯನ್ನು ಹೊಂದಿದ (ವಿಶ್ವಾಮಿತ್ರ)ರಾಮಾನಂದಾವಧೂತ ಸ್ವಾಮೀಜಿ ಇಲ್ಲಿ ನೆಲೆ ನಿಂತ ಕೆಲ ಸಮಯದಲ್ಲೇ ಮಾರುತಿರಾಯ ಈ ಅಘನಾಶಿನಿ ತೀರದಲ್ಲಿ ಸ್ವಾಮೀಜಿಯವರೊಂದಿಗೆ ತಾನೂ ಒಂದಾಗಿಬಿಟ್ಟ. ಅಲ್ಲದೇ ತನ್ನೆಲ್ಲ ಕಾರ್ಯಗಳನ್ನೂ ಶ್ರೀ ರಾಮಾನಂದರ ಮುಖೇನ ಮಾಡಿಸುತ್ತಿದ್ದಾ ನೆ ಶ್ರೀ ರಾಘವೇಶ್ವರರು “ 'ಶ್ರೀ ರಾಮನೊಂದಿಗೆ ಮಾರುತಿಯು ಸಕಲರನ್ನೂ ಕಾಯುವ ಎಂದಿದ್ದಾರೆ. ಇಲ್ಲಿ ಮಾರುತಿಯೊಂದಿಗಿರುವ ಶ್ರೀ ರಾಮಾನಂದ ಸ್ವಾಮೀಜಿ ಶ್ರೀ ರಾಮನೇ ಎಂಬುದು ಉಕ್ತವಾಗುತ್ತದೆ. (ಸ್ವಾಮೀಜಿಯವರಿಗೆ ತಂದೆ ನಾಮಕರಣ ಮಾಡಿದ್ದು ರಾಮಚಂದ್ರನೆಂತಲೇ, ಇಂದು ರಾಮಾನಂದ ಸ್ವಾಮೀಜಿಯಾಗಿದ್ದಾ ರೆ. ರಾಮ ರಾಜಮಣಿಯಾದರೆ ಸ್ವಾಮೀಜಿ ಯೋಗಿರಾಜಮಣಿ.) ಹೀಗೆ ಅಘನಾಶಿನಿ ತೀರದಲ್ಲಿ ಭಕ್ತಜನರ ಅಘನಿವಾರಕನಾದ ಸ್ವಾಮೀಜಿ ಶರಣ ಜನರನ್ನು ಉದ್ದರಿಸುತ್ತ ತಮ್ಮ ದಿವ್ಯವಾದ ತೀರ್ಥ, ಮಂತ್ರಾಕ್ಷತೆಗಳನ್ನು ನೀಡಿ, ಪತಿತರನ್ನು ಭವಜಲಧಿಯಿಂದ ದಾಟಿಸುತ್ತ ಆನಂದ ತುಂದಿಲರಾಗಿ ನಿಂತಿದ್ಧಾರೆ. ಜಯ ನಮೋ ಶ್ರೀ ರಾಮಾನಂದಾವಧೂತ ಸ್ವಾಮೀಜಿ.
ಇನ್ನಷ್ಟು ಸವಿಸ್ತಾರವಾಗಿ ಓದಿಶ್ರೀ ಮಠ
ಅಘನಾಶಿನಿ ನದಿತೀರ
ಎಷ್ಟೋ ಜನವಸತಿಗಳು, ಗ್ರಾಮಗಳು ಹಾಗೂ ಅಗ್ರಹಾರಗಳನ್ನು ನಿರ್ಮಿಸಿದ ಅಘನಾಶಿನಿ ನದಿತೀರದ ಪುಣ್ಯಸ್ಥ ಸ್ಥಳ ದೀವಿಗಿ. ಅಘನಾಶಿನಿಯು ಸಹ್ಯಾದ್ರಿಪರ್ವತದ ಭಾಗ. ಘಟ್ಟದ ಪ್ರದೇಶದಲ್ಲಿ ಶಂಕರಲಿಂಗ ಎಂಬಲ್ಲಿ ಉಗಮವಾಗಿ, ಎತ್ತರದ ಸಿದ್ಧಾಪುರ ತಾಲೂಕಿನ ಭಾಗದಿಂದ ಹರಿದು ಬಂದಿದೆ. ಸಹ್ಯ ಪರ್ವತದಲ್ಲಿ ಜನಿಸಿ, ಪರ್ವತದ ಎತ್ತರ ಭಾಗದಿಂದ ದಕ್ಷಿಣ ದಿಶೆಯಲ್ಲಿ ಹರಿದು ಬಂದು ತನ್ನ ಎರಡೂ ದಡಗಳಲ್ಲಿ ಸಹಸ್ರಾರು ವರ್ಷಗಳಿಂದಲೂ ಜನರ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಟ್ಟಿದೆ. ಉಪ್ಪಿನ ಪಟ್ಟಣ, ಬೊಗ್ರಿಬೈಲು, ಕಲ್ಲಬ್ಬೆ. ಗರಿಕೆಮಕ್ಕಿ, ಮುಸುಗುಪ್ಪೆ ಹರಕಡೆ, ಹೊಂಡದ ಹಕ್ಕಲು, ದೀವಿಗಿ, ಮಿರ್ಜಾನ್, ಅಘನಾಶಿನಿ ಎಂಬ ಎಷ್ಟೋ ಗ್ರಾಮಗಳ ನಿರ್ಮಾಣಕ್ಕೆ ತನ್ನನ್ನು ತೊಡಗಿಸಿಕೊಂಡಿದೆ. ಕೆಳದಿ ನೃಪರ ಕಾಲದಲ್ಲಿ ಸಹ ವಾಣಿಜ್ಯ ವ್ಯವಹಾರಕ್ಕೆ ಅನುಕೂಲ ಮಾಡಿಕೊಟ್ಟ ನದಿಯಿದು. ಇಂತಹ ನದಿಯ ಉತ್ತರ ತಟಾಕದಲ್ಲಿ ದೀವಿಗಿ ನಿಂತಿದೆ. ಮಿರ್ಜಾನ ರಾಜರ ಆಳ್ವಿಕೆಯ ಕಾಲದಲ್ಲಿ ಅವರ ಕೃಪೆಗೆ ಪಾತ್ರವಾದ ತಾಣವು ಅಂದು “ದೀಪಿಕಾ ವಿಷಯಂ' ಎಂಬುದಾಗಿ ನಾಮಕರಣ ಹೊಂದಿತ್ತು.
ಸುಂದರವಾಗಿ ಗೋಚರಿಸುವ ವನರಾಜಿಯ ನಡುವೆ, ಒಂದೆಡೆ ಪರ್ವತ, ದಕ್ಷಿಣದ ದಿಶೆಗೆ ಅಘನಾಶಿನೀ ನದಿ ಇವುಗಳ ನಡುವೆ, ನದಿಯ ಮುಖಜ ಪ್ರದೇಶದಲ್ಲಿ ಭತ್ತ, ಕಬ್ಬು. ಬಾಳೆ, ತೆಂಗು ವೀಳ್ಯದೆಲೆ ಕಾಳುಮೆಣಸು ಇವುಗಳನ್ನು ಬೆಳೆಯುವ ತಾಣವಿದು. ಮಲ್ಲಿಕಾರ್ಜುನ, ಕಾಲಭೈರವ, ಶಾಂತಿಕಾಪರಮೇಶ್ವರಿ ಮೊದಲಾದ ದೇವ-ದೇವತೆಗಳು ಅನಾದಿಕಾಲದಿಂದ ಇಲ್ಲಿ ಇರುವುದು ಕಂಡುಬರುತ್ತದೆ. ಮಾರುತೀಗುಡಿಯಂತೂ ಭಗವಾನ್ ಶ್ರೀ ಅವಧೂತ-ರಾಮಾನಂದ ಸ್ವಾಮೀಜಿಯವರಿಂದಲೇ ರಚಿತವಾಯಿತು. ಎಲ್ಲ ವರ್ಗದ ಜನರೂ ಭ್ರಾತೃಭಾವದಿಂದಿರುವ ಈ ಸ್ಥಳ ಈಗ ಸಜ್ಜನರನ್ನೆಲ್ಲ ತನ್ನೆಡೆಗೆ ಕೈಬೀಸಿ ಕರೆಯುತ್ತಿದೆ. ಜುಳುಜುಳು ನಿನಾದದಿಂದ ಶೋಭಾಯಮಾನವಾಗಿ ಹರಿದು ನೆಲವನ್ನೆಲ್ಲ ಹಸಿರು ಪರಿಸರದಿಂದ ನಿರ್ಮಿಸಿದ, ಪಾಪನಾಶಿನೀ ನದಿಯ ಉತ್ತರ ತಟಾಕದಲ್ಲಿ ನೆಲೆನಿಂತಿದೆ. ಇಲ್ಲಿ ಮಾರುತಿಯೊಂದಿಗೆ ಒಂದಾಗಿ (ಅದ್ವೈತ) ನೆಲೆನಿಂತಿರುವ ಯೋಗಿವರೇಣ್ಕರು ಪರಮಹಂಸ ರಾಮಾನಂದ ಸ್ವಾಮೀಜಿ. ಶರಣಜನ ಚಿಂತಾಮಣಿ, ಭಕ್ತ ರಕ್ಷಕ್ತ ಮಹಿಮಾ ಪೂರ್ಣ, ಸದ್ಗುರು ಮೊದಲಾದ ಬಿರುದಾಂಕಿತ ಸ್ವಾಮೀಜಿಯವರು ತಮ್ಮ ಶುಭಾಶಂಸನೆಯಿಂದ ಶರಣ ಜನರಿಗೆ ಪರಮ ಭಾಗ್ಯವನ್ನೀಯುವ ಕಲ್ಪತರುವಾಗಿದ್ದಾರೆ.
ಭಗವಾನ್ ರಾಮಾನಂದಸ್ವಾಮೀಜಿಯವರು ಆ ದೇವರಿಚ್ಛೆಯಂತೆ ಕೊಳಗಿಬೀಸಿನಲ್ಲಿ ಭಕ್ತರನ್ನು ಸಲಹಿ, ಅಲ್ಲಿಂದ ಹೊರಟು ಕುಮಟಾದ ಅಘನಾಶಿನಿಯಲ್ಲಿ ನಿಂತು, ಸ್ವಾಮೀಜಿ ಶರಣರನ್ನುದ್ಧರಿಸಿದರು. ದಕ್ಷಿಣಾಮೂರ್ತಿಯಂತೆ ಹೊರಟು ನಿಂತ ರಾಮಾನಂದ ಅವಧೂತರು ಘಟ್ಟ ಇಳಿದು, ಅಘನಾಶಿನಿಯ ಗಣಪತಿ ದೇವಸ್ಥಾನವನ್ನು ತಲುಪಿದರು. ಪರಮೇಶ್ವರನೇ ತೇಜೋಮಯನಾಗಿ ಬಂದನೆಂದು ತಿಳಿದ ಸಜ್ಜನರು ರಾಮಾನಂದಸ್ವಾಮೀಜಿಯವರನ್ನು ಅತಿ ಪ್ರೀತಿಯಿಂದ ಎದುರುಗೊಂಡು ಸೇವೆಯಲ್ಲಿ ತತ್ಪರರಾದರು. ದೇವಸ್ಥಾನದಲ್ಲೇ ವಾಸ್ತವ್ಯ ಮಾಡಲು ಅನುಕೂಲವಾದ ವ್ಯವಸ್ಥೆ ಮಾಡಿದರು. ಭಗವಾನ್ ರಾಮಾನಂದರು ಅಫನಾಶಿನಿ ವಿಘ್ನೇಶ್ವರನ ದೇವಾಲಯದಲ್ಲಿ ಬಂದಿಳಿದಿರುವ ಸುದ್ದಿ, ಅವರ ಮಹಿಮಾ ವಿಶೇಷಗಳು ಇವನ್ನು ಕೇಳಿ ತಿಳಿದ ಕೆಲವು ಸಜ್ಜನರು ಅವರನ್ನು ತಮ್ಮಲ್ಲಿಗೆ ಬನ್ನಿರೆಂದೂ, ಸೇವಾಭಾಗ್ಯ ನೀಡಿರೆಂದೂ ಬೇಡಿಕೊಂಡರು. ಆದರೆ ಸ್ವಾಮೀಜಿ ಮುಂದೆ ಯಾವಾಗಲಾದರೂ ಬರುತ್ತೇನೆ ಎಂದು ಹೇಳಿ ಅಲ್ಲಿಯೇ ಒಂದು ಫರ್ಷಕಾಲ ಉಳಿದರು. ಮಾರನೇ ವರ್ಷ ಸಜ್ಜನ ಭಕ್ತರಿಚ್ಛೆಯಂತೆ ಅಘನಾಶಿನಿಯ ಉತ್ತರ ತಟದಲ್ಲಿರುವ , ದೀಪಿಕಾಪುರ (ದೀವಗಿ)ಕ್ಕೆ ಆಗಮಿಸಿದರು. ಅಲ್ಲಿಯ ಮಲ್ಲಿಕಾರ್ಜುನ ದೇವಾಲಯದಲ್ಲಿ ಉಳಿದು, ಒಂದು ಚಾತುರ್ಮಾಸವನ್ನು ಪೂರೆಸಿದರು. ದತ್ತಾವತಾರಿ ಶ್ರೀಧರಸ್ವಾಮೀಜಿಯವರ ಇಚ್ಛೆ ಯಂತೆ ರಾಮಾನಂದಸ್ವಾಮೀಜಿ ವರದಪುರದಲ್ಲಿ ನಿಂತು ಶ್ರೀಧರರ ಸೇವೆ ಮಾಡಿ, ಪುನಃ ದೀವಿಗಿಗೆ ಬಂದು ಭಕ್ತರನ್ನು ಪೊರೆದರು. ಕುಮಟಾ ತಾಲೂಕಿನ ದೀವಗಿ (ದೀಪಿಕಾಪುರ) ಶ್ರೀಗುರುವಿನ ವಾಸಸ್ಥಳವಾಗಿ, ಧಾರ್ಮಿಕ ಪುಣ್ಯಕ್ಷೇತ್ರವಾಗಿ, ಲಕ್ಷಾ೦ತರ ಜನರ ಕಷ್ಟ-ಕಾರ್ಪಣ್ಯ ನೀಗುವ ಅಘನಾಶಿನಿಯಾಗಿ ಖ್ಯಾತಿಯಾಗುವ ಸಮಯ ಸನ್ನಿಹಿತವಾಗಿತ್ತು. ಪೂಜ್ಯ ರಾಮಾನಂದರು ಮಲ್ಲಿಕಾರ್ಜುನ ದೇವಾಲಯದಲ್ಲಿರುವಾಗ ಪಕ್ಕದ ಬಯಲಿನಲ್ಲಿ ದನ ಮೇಯಿಸುವವರು ಓಡಾಡಿಕೊಂಡಿರುವ ಜನರು, ಮಕ್ಕಳು ತೊಂದರೆಗೀಡಾಗುತ್ತಿರುವುದನ್ನು ಕಂಡರು. ಆ ಬಯಲಿನಲ್ಲಿ ಅರಳಿಮರವೊಂದಿತ್ತು. ಅದರಲ್ಲಿ ಬಹುಕಾಲದಿಂದ ಬ್ರಹ್ಮ ರಾಕ್ಷಸವೊಂದು ವಾಸವಾಗಿದ್ದು, ಅಲ್ಲಿನ ಜನತೆಗೆ ತೀವ್ರ ತೊಂದರೆ ನೀಡುತ್ತಿದ್ದು, ಕೆಲವು ಮಕ್ಕಳು ಅಸುನೀಗಿದ್ದರು. ಓಡಾಡಲಿಕ್ಕೇ ಜನ ಹೆದರುತ್ತಿದ್ದರು. ಕಾರುಣ್ಯಸಿಂಧು ಗುರುವರ್ಯ ಆ ಮರದ ಬಳಿಸಾರಿ ನೋಡಿದರು. ಬ್ರಹ್ಮರಾಕ್ಟಸನಿಗೆ ಏನು ಆಜ್ಞೆ ಮಾಡಿದರೊ ಏನೋ, ತೀರ್ಥ ಪ್ರೋಕ್ಷಿಸಿ ಹಿಂದಿರುಗಿದರು. ಅದೇ. ದಿನ ರಾತ್ರಿ ಅಡ್ಡವಾಗಿ ಬೆಳೆದಿದ್ದ ಮರದ ಟೊಂಗೆಯೊಂದು ಭಾರೀ ಸಪ್ಪಳದೊಂದಿಗೆ ಮುರಿದು ಬಿತ್ತು. ಮಾರನೇ ದಿನ ಆಸುಪಾಸಿನ ಜನ ವಿಷಯ ತಿಳಿದು ಗುರುಮಹಿಮೆ ಕಂಡು ವಿಸ್ಮಿತರಾದರು.
ಕೊಳಗಿಬೀಸಿನ ಆಶ್ರಮ
ಶ್ರೀಧರರ ಹಿಂದೆ ಶ್ರೀ ರಾಮಾನಂದರು
ರಾಮಾನಂದ ಅವಧೂತರು ದೀವಗಿಯ ಮಲ್ಲಿಕಾರ್ಜುನ ದೇವಾಲಯದಲ್ಲಿ ಉಳಿದುಕೊಂಡಿರುವುದು ವರದಳ್ಳಿಯಲ್ಲಿ ನೆಲೆಸಿರುವ ಭಗವಾನ್ ಶ್ರೀಧರಸ್ವಾಮಿಗಳಿಗೆ ತಿಳಿಯಿತು. ಶ್ರೀಧರಸ್ವಾಮಿಗಳ ಪವಿತ್ರ ಸಾನ್ನಿಧ್ಯದಿಂದ ವರದಳ್ಳಿಯು ನಾಡಿನಾದ್ಯಂತವಿಖ್ಯಾತವಾಗಿತ್ತು. ಗುರು ಶ್ರೀಧರರು ಹಿಂದೂ ಸಂಸ್ಕೃತಿಯ ಅದರಲ್ಲೂ ವೈದಿಕ ಮತದ ಪುನರುತ್ಥಾನಕ್ಕಾಗಿ ನಾಡಿನಾದ್ಯತ ಸಂಚರಿಸಿ ಪಾಳುಬಿದ್ದ ಶಕ್ತಿ ಸ್ಥಳಗಳನ್ನು ಪುನರುತ್ಥಾನ ಮಾಡಿ, ಜನರಲ್ಲಿ ಧಾರ್ಮಿಕತೆಯನ್ನು ಉದ್ದಿಪನಗೊಳಿಸಿದ್ದರು ಲಕ್ಷಾ೦ತರ ಜನರನ್ನು ಉದ್ದರಿಸಿದ ಶ್ರೀಧರರು ದತ್ತಾತ್ರೇಯನ ಅವತಾರವೇ ಎಂಬುದನ್ನು ಪುಣ್ಯವಂತರು ಅಥೈ೯ಸಿಕೊಂಡಿದ್ದ ರು. ಹೀಗೆ ನಾಡಿನಾದ್ಯಂತ ಧರ್ಮಶ್ರದ್ಧೆ ಮೂಡಿಸಿ, ವರದಳ್ಳಿಯಲ್ಲಿ ಧರ್ಮಧ್ವಜವನ್ನು ಸ್ಥಾಪನೆ ಮಾಡಿ, ಇನ್ನು ವಿರಮಿಸುವ ನಿರ್ಧಾರ ಮಾಡಿದ್ದರು ಆದರೆ ತನ್ನ ನಂತರದಲ್ಲಿ ತಮ್ಮ ಉತ್ತರಾಧಿಕಾರಿಯಾಗಿ, ಭಕ್ತರನ್ನು ಪೊರೆಯುವ ಸಮರ್ಥರಾದ ಯೋಗ ಸಂಪನ್ನ ರು ಯಾರಿದ್ದಾ ರೆ ಎಂದುಕೊಳ್ಳುತ್ತಿ ರುವಾಗಲೇ ರಾಮಾನಂದರು ಕೊಳಗಿಬೀಸನ್ನು ತೊರೆದು ದೀವಗಿಗೆ ಬಂದಿರುವುದು ತಿಳಿದುಬಂತು. ಕೂಡಲೇ ರಾಮಾನಂದರಿಗೆ “ವರದಳ್ಳಿಯಲ್ಲಿ ನೀನೇ ಬಂದು ಉಳಿದು ಧರ್ಮರಕ್ಷ ಣೆ ಮಾಡಿದರೆ ಸಜ್ಜನರಿಗೆಲ್ಲ ಸುಖಶಾಂತಿ ಸಿಗುವುದು, ಕಾರಣ ನೀನು ಇಲ್ಲಿಗೆ ಬಾ'' ಎಂದು ಕರೆ ಕಳಿಸಿದರು. ಶ್ರೀಧರಸ್ವಾಮೀಜಿಯವರ ಆದೇಶವೆಂದರಿತು, ಕೀಲಕ ಸಂವತ್ಸರದಲಿ ರಾಮಾನಂದರು ವರದಳ್ಳಿಗೆ ಸಾಗಿದರು. ಶೀಧರರು ರಾಮಾನಂದರನ್ನು ಆದರದಿಂದ ಬರಮಾಡಿಕೊಂಡರು. ಭಕ್ತರ ಸೇವಾಕಾರ್ಯ, ಸನ್ಕಾಸಧರ್ಮ ಇವನ್ನು ಕುರಿತು ಬೋಧನೆ ನೀಡಿದರು. ಹೀಗೆ ಒಂದು ವರ್ಷವೇ ಕಳೆಯಿತು. ಭಗವಾನ್ ಶ್ರೀಧರಸ್ವಾಮಿಗಳು ತಮ್ಮ ಜೀವನದ ನಿರ್ಯಾಣ ಸಮೀಪಿಸಿದಂತೆ ಸಮಾಧಿಸ್ಥರಾಗಿ, ಮುಕ್ತರಾದರು ಪರಬ್ರಹ್ಮನೊಂದಿಗೆ ಒಂದಾದರು. ವರದಪುರದ ಮಹಾಯೋಗಿ ಶ್ರೀಧರರು 'ರಾಮಾನಂದರೇ ತಮ್ಮ ಉತ್ತರಾಧಿಕಾರಿ' ಎಂದು ಸ್ಪಷ್ಟಪಡಿಸಿದ್ದರು. ಗುರುಗಳ ಹೇಳಿಕೆ ಧ್ವನಿ ಮುದ್ರಿಕೆಯಲ್ಲಿ ಮುದ್ರಿತವೂ ಆಗಿತ್ತು, ಅಂದು ಭಗವಾನರ ಮಾತನ್ನು ಕಡೆಗಣಿಸಲಾಗದೇ ರಾಮಾನಂದರು ಒಪ್ಪಿಕೊಂಡಿದ್ದರು. ಆದರೆ ಹೀನ ಮಾನವರ ಬುದ್ಧಿ ಕೊಳಗಿಬೀಸಿನಂತೆ ಇಲ್ಲಿಯೂ ಪ್ರಕಟವಾಯಿತು. ವರದಳ್ಳಿಯಲ್ಲಿ ಮೊದಲಿನಿಂದಲೂ ಇದ್ದ ಕೆಲ ವ್ಯಕ್ತಿಗಳಿಗೆ ಕ್ಷೇತ್ರದ ಆಡಳಿತದ ಮೇಲೆ ಕಾಕದೃಷ್ಟಿ ಇತ್ತು. ಶ್ರೀಧರಸ್ವಾಮಿಯವರ ಕಲ್ಪನೆಯ ವರದಳ್ಳಿಯನ್ನು ಮುನ್ನಡೆಸಿಕೊಂಡು ಹೋಗಲು ಸಮರ್ಥರಾಗಿದ್ದ ರಾಮಾನಂದರಿಗೆ ಆಡಳಿತದಲ್ಲಿ ಹಸ್ತಕ್ಷೇಪ, ರಾಜಕೀಯದ ವಾತಾವರಣ ತಿಳಿದಾಗ ತಕ್ಷಣ ಅದನ್ನು ತೊರೆಯಲು ನಿರ್ಧರಿಸಿದರು. ಸ್ವಾಮೀಜಿಯವರು ವರದಳ್ಳಿಯಿಂದ ನಿರ್ಗಮಿಸುತ್ತಾರೆ ಎಂಬ ವಿಚಾರ ಭಕ್ತ ಸಮುದಾಯಕ್ಕೆ ತಿಳಿದುಬಂತು. ಕೂಡಲೇ ದೀವಗಿಯಲ್ಲಿರುವಾಗ ರಾಮಾನಂದರ ತಪಃ ಪ್ರಭಾವ ಅರಿತಿದ್ದ ಕೆಲವು ಸದ್ಭಕ್ತರು ವರದಳ್ಳಿಗೆ ಧಾವಿಸಿ, ತಮ್ಮಲ್ಲಿಗೇ ಬಂದು ನೆಲೆಸಬೇಕೆಂದು ವಿನಂತಿಸಿಕೊಂಡರು. ಭಕ್ತವತ್ಸಲ, ಭಕುತಜನ ಪ್ರೀತ ರಾಮಾನಂದರು ದೀವಗಿಗೆ ಬಂದು ನೆಲೆಸಲು ಒಪ್ಪಿ, ವರದಳ್ಳಿಯ ಸಮಸ್ತ ಜವಾಬ್ದಾರಿಯನ್ನೂ ಅಲ್ಲಿನವರಿಗೇ ಒಪ್ಪಿಸಿ, ಹೊರಟುಬಿಟ್ಟರು. (1971) ಕಾವಿ ವಸನವುಟ್ಟು, ಕಮಂಡಲು ಹಿಡಿದು ಹೊರಟು ಬಂದ ರಾಮಾನಂದರು ಯೋಗಿರಾಜನಂತೆ, ಪ್ರತ್ಯಕ್ಷ ಪರಮೇಶ್ವರನಂತೆ ಕಂಗೊಳಿಸುತ್ತಿದ್ದರು. ಕೊಳಗಿಬೀಸಿನಿಂದ ಬರುವಾಗ ತಂದುದು ಕೇವಲ ಅವಧೂತರ ಭಾವಚಿತ್ರ, ಈಗ ವರದಳ್ಳಿಯಿಂದ ಶ್ರೀಧರರು ನೀಡಿದ ಪಾದುಕೆ ಮತ್ತು ಅವರ ಭಾವಚಿತ್ರ ಇವಿಷ್ಟೇ. ಅವನ್ನೆಲ್ಲ ಮಲ್ಲಿಕಾರ್ಜುನನ ಆಲಯದಲ್ಲೇ ಇಟ್ಟು ಪೂಜಿಸಿ, ಅಲ್ಲಿಗೆ ಬರುವ ಭಕ್ತರನ್ನು ಪ್ರೀತಿಯಿಂದ ಉದ್ಭರಿಸಿದರು. ಚಿಕ್ಕದಾದ ಆಶ್ರಮದಲ್ಲಿ ಸ್ವಾಮೀಜಿಯವರು ರಾಮದೂತ ಮಾರುತಿಯ ಜೊತೆಗೆ ವಾಸಿಸುತ್ತ, ಭಕ್ತರಿಂದ ಭಿಕ್ಷ ಪಡೆದು ಶರಣರನ್ನುದ್ಧರಿಸುತ್ತಲಿದ್ದರು
ಆಶ್ರಮ ನಿರ್ಮಾಣ:ಸದ್ಗುರು ಶ್ರೀರಾಮಾನಂದರು ದೀವಗಿಯ ಮಲ್ಲಿಕಾರ್ಜುನನಲ್ಲಿ ನೆಲೆಸಿರುವಾಗ ಗದ್ದೆ ಬಯಲಿನಲ್ಲಿ ಹಾಕಿದ್ದ, ತಟ್ಟಿ ಕಟ್ಟಿದ ಚಪ್ಪರವೇ ಆಶ್ರಮವಾಗಿತ್ತು. ಗುರುಗಳ ಸ್ನಾನಕ್ಕೆ ಡಬ್ಬಿಯಲ್ಲಿ ನೀರು ಕಾಯಿಸುತ್ತಿದ್ದರು. ಗದ್ದೆ ಬೈಲಿನಲ್ಲೇ ಭಿಕ್ಚವಾಗುತ್ತಿತ್ತು. ಅಂತಹ ಅನನುಕೂಲ ಪರಿಸರದಲ್ಲೂ ರಾಮಾನಂದ ಅವಧೂತರು ಚಿನ್ಮಯರಾಗಿ ಭಕ್ತಾದಿಗಳ ಸಂಕಷ್ಟ ನಿವಾರಣೆಗೈಯುತ್ತಿದ್ದರು. ಹೀಗಿರುವಾಗ ಭಕ್ತನೊಬ್ಬನು ಮಲ್ಲಿಕಾರ್ಜುನ ದೇಗುಲದ ಪಕ್ಕದಲ್ಲಿ ಹಾಗೂ ಶಾಂತಿಕಾಪರಮೇಶ್ವರಿ ದೇವಾಲಯದ ಮುಂಭಾಗದಲ್ಲಿರುವ ಚಿಕ್ಕ ಜಾಗವೊಂದನ್ನು ಸ್ವಾಮೀಜಿಯವರಿಗೆ ಆಶ್ರಮ ಕಟ್ಟಿಕೊಳ್ಳಲು ನೀಡಿದನು. ಹೀಗಾಗಿ ಅಲ್ಲಿ ಆಶ್ರಮವನ್ನು ನಿರ್ಮಿಸಲು ತೀರ್ಮಾನವಾಯಿತು. ಗುರುಗಳ ಮನದಲ್ಲಿ ಈ ಯೋಚನೆ ಬಂದದ್ದೇ ತಡ, ಯಾರೋ ಭಕ್ತರೊಬ್ಬರು ನಾರಾಯಣ ಶೆಟ್ಟಿಯ ಹೆಸರನ್ನು ಸೂಚಿಸಿದರು. ವಿಷಯ ತಿಳಿದು ನಾರಾಯಣನೇ ಅಲ್ಲಿಗೆ ಬಂದು ಸ್ವಾಮಿಯ ಪಾದಕ್ಕೆರಗಿದನು. ಸ್ವಾಮಿಯ ಅಪ್ಪಣೆ ಪಡೆದು, ಆ ಸ್ಥಳದಲ್ಲಿ ಪಾಯ ತೋಡಿ, ನೆಲಗಟ್ಟು, ಗೋಡೆ ಹಾಕಿ ಹುಲ್ಲಿನ ಛಾವಣಿಯಿಂದ ಆಶ್ರಮವನ್ನು ಸಿದ್ದಪಡಿಸಿದನು. ಗುರುವರ್ಯರು ಅಲ್ಲಿಯೇ ವಾಸಮಾಡಿದರು. ವೀರ ಮಾರುತಿ ಆಶ್ರಮ ನಿರ್ಮಾಣವಾಗುವುದನ್ನೇ ಕಾಯುತ್ತಿದ್ದ ನೋ ಎಂಬಂತೆ ಅದೊಂದು ದಿನ ಭಕ್ತನೊಬ್ಬನು ಬಂದು, ತನಗೆ ಜಲದಲ್ಲಿ ದೊರೆತ ಮೂರ್ತಿಯಿದೆಂದು ಮಾರುತಿಯ ಮೂರ್ತಿಯನ್ನು ಗುರುಗಳಿಗೆ ನೀಡಿದ. "ಮೂರ್ತಿಯನ್ನು ಅರ್ಚಿಸಲಿಕ್ಕಾಗಿ ದೇವಾಲಯಕ್ಕೆ ನೀಡಿದ್ದಲ್ಲದೆ, ಪೂಜಿಸಲಿಕ್ಕಾಗಿ ಖರ್ಚಿಗೆಂದು ಈ ವರೆಗೆ ಬಹಳಷ್ಟು ನೀಡ ಬಸವಳಿದಿದ್ದೇನೆ. ಈಗ ನೀವೇ ರಕ್ಷಿಸಬೇಕು'' ಎಂದು ಕಾಲಿಗೆರಗಿದನು. ಸ್ವಾಮೀಜಿ ಹನುಮನ ಮೂರ್ತಿಯನ್ನೇ ನೋಡಿದರು. ಎಷ್ಟು ಸಂತಸವಾಯ್ತೋ ಅದನ್ನು ನೋಡಿ. ಆದರೂ ಮೂರ್ತಿಯನ್ನು ತಂದ ಸುಬ್ರಾಯ ದೇಶಭಂಡಾರಿಯನ್ನು ಹತ್ತಿರಕ್ಕೆ ಕರೆದು "ನೋಡು ನನಗೇ ಸರಿಯಾದ ನೆಲೆಯಿಲ್ಲ. ಅದರಲ್ಲಿ ಇವನನ್ನು ಹೇಗೆ ಇಟ್ಟು ಕೊಳ್ಳು ವುದು? ಆದರೂ ನೀನು ಪ್ರೀತಿಯಿಂದ ನೀಡಿದರೆ ನಾನಿಟ್ಟು ಪೂಜಿಸುತ್ತೇನೆ'' ಎಂದರು. ಮನದಲ್ಲಿ ಯೋಚನೆ ಬಂತು. "ಸೀತಾದೇವಿಯು ಮಾರುತಿಯಲ್ಲಿ ನೀನೆಲ್ಲಿರುವೆಯೋ ಅಲ್ಲಿ ತಾನು ರಾಮಚಂದ್ರನೊಟ್ಟಿಗೆ ವಾಸ ಮಾಡುವೆನು ಎಂದು ಹೇಳಿದ ಮಾತು. ಅಂದರೆ ಇವನನ್ನು ಮುಂದು ಮಾಡಿ, ಸೀತಾರಾಮಚಂದ್ರರೇ ಇಲ್ಲಿ ವಾಸ ಮಾಡಲು ಬರುತ್ತಿದ್ದಾರೆ' ಎಂದು. ಎಲ್ಲಿ ರಾಮನೋ ಅಲ್ಲಿ ಹನುಮನು ಎಂಬ ಮಾತು ನಿಜವಾಗಿತ್ತು. ಅಂದು ಕೀಲಕ ಸಂವತ್ಸರ (1969)ದಲ್ಲಿ ಕೊಳಗಿಬೀಸಿನಿಂದ ದೀವಗಿಗೆ (ದಕ್ಷಿಣದೆಡೆ) ಬಂದು, ಶ್ರೀಧರರ ಕರೆಬಂದು, ವರದಳ್ಳಿಗೆ ಹೋಗಿ ಮತ್ತೆ ದೀವಗಿಗೆ ಬರುವ ಹೊತ್ತಿಗೆ (1972) ಮೂರು ವರ್ಷಗಳು ಸಂದಿದ್ದವು. ಸುಬ್ರಾಯ ದೇಶಭಂಡಾರಿ ಸ್ವಾಮೀಜಿಯವರ ಬಳಿ ಹೇಳಿದ್ದು ಮೂರು ವರ್ಷಗಳ ಹಿಂದೆ ತನಗೆ ಬಗ್ಗೋಣದಲ್ಲಿ ಸೇತುವೆ ನಿರ್ಮಿಸುವಾಗ ಜಲದಲ್ಲಿ ದೊರಕಿದ ಮೂರ್ತಿಯೆಂದು. ಸ್ವಾಮೀಜಿಯವರು ಉತ್ತರದಿಂದ ಬಂದು ಅಫನಾಶಿನಿ ತೀರದಲ್ಲಿ ನಿಂತಿರುವಾಗ ಹನುಮ ಬಗ್ಗೋಣಿನಿಂದ ಉತ್ತರದ ಅಫನಾಶಿನೀ ತೀರದಲ್ಲಿ ಬಂದು ಸೇರಿದ. ಹೀಗೆ ಇಬ್ಬರೂ (ಮೂರು ವರ್ಷದ ಬಳಿಕ) ದೀವಗಿಯಲ್ಲಿ ನೆಲೆನಿಂತರು. ರಾಮನ ಗುಣ ಸಂಕೀರ್ತನೆ ಹಾಡು, ಭಜನೆ ಇವನ್ನೆಲ್ಲ ಕೇಳುತ್ತ ಪ್ರಸನ್ನನಾದ ರಾಮದೂತನು ದೀಪಿಕಾಪುರದಲ್ಲಿ ನಿಂತ. ಹೀಗೆ ನಿಂತ ಮಾರುತಿಯನ್ನು ಅನುದಿನವೂ ಪೂಜಿಸಿ, ಸೇವಿಸುತ್ತಾ ಶ್ರೀಧರರ ಪಾದುಕೆಗಳನ್ನು ಪ್ರೀತ್ಯಾದರಗಳಿಂದ ಸೇವಿಸಿ, ತಮ್ಮೆಡೆಗೆ ಬಂದ ಭಕ್ತರನ್ನು ಉದ್ದರಿಸುತ್ತ ಭಕ್ತರು ನೀಡಿದ ಭಿಕ್ಷಗಳನ್ನು ಪಡೆಯುತ್ತ ದೀಪಿಕಾಪುರದ ದೀಪಕನಾಗಿ' ಗುರು ಶೋಭಿಸುತ್ತಿದ್ದರು.
ದೀವಗಿಯಲ್ಲಿ ಆಶ್ರಮ ನಿರ್ಮಾಣ
ಗುರುವರ್ಯರ ದರ್ಶನ ಪಡೆದು ಪುನೀತರಾಗುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಿತು... ಬರುವ ಜನರಿಗೆ. ದೇವಾಲಯದ ಸ್ಥಳವು ಚಿಕ್ಕದಾದ್ದರಿಂದ ತೊಂದರೆಯಾಗುವುದನ್ನು ಮನಗಂಡು, ದೇವಸ್ಥಾ ನದ ಪಕ್ಕದ ಜಾಗದ ಯಜಮಾನನನ್ನು ಮಾತನಾಡಿಸಿದರು. ಆತ ಒಪ್ಪಿಕೊಂಡಾಗ ಅರ್ಧ ಎಕರೆ ಜಾಗವನ್ನು ಕ್ರಯಕ್ಕೆ ಪಡೆದರು. ಈಗ ಮಾರುತಿಗುಡಿ, ಚಂದ್ರಶಾಲೆ, ಮುಖಮಂಟಪ ಇವನ್ನೆಲ್ಲ ಮಾಡುವ, ಭಕ್ತರಿಗೆ ನಿರಾಳವಾಗಿ ಬಂದು ಹೋಗಲು ಅನುಕೂಲವಾಗುವ ರೀತಿಯಲ್ಲಿ ಆಶ್ರಮ ರಚಿಸುವ ಸಂಕಲ್ಪ ಮಾಡಿ, ಕಟ್ಟುವ ಕೆಲಸವನ್ನು ನಾರಾಯಣ ಶೆಟ್ಟಿಗೇ ವಹಿಸಿದರು. ಗೋಸೇವೆಗಾಗಿ ಆಶ್ರಮಕ್ಕೆ ತಾಗಿಯೇ ಗೋಶಾಲೆಯನ್ನು ಸ್ವಾಮೀಜಿ ನಿರ್ಮಿಸಿದರು. ಸ್ವಾಮೀಜಿಯವರಿಗೆ ಗೋವುಗಳ ಮೇಲೆ ಅತೀವ ಪ್ರೀತಿ. ಗೋಸಂಪತ್ತು ಆಶ್ರಮವನ್ನೇ ತುಂಬಿತು. “ಸ್ವಾಮೀಜಿಯವರು ಮನಸ್ಸಿನಲ್ಲಿ ಸಂಕಲ್ಪ ಮಾಡುವುದೊಂದೇ ತಡ ನಿರ್ಮಾಣ ಕೆಲಸ ಆಗಿಬಿಟ್ಟಿತು'' ಎಂದು ನಾರಾಯಣ ಶೆಟ್ಟಿ ಹೇಳುತ್ತಾರೆ. ಗುರುಗಳ ಸಂಕಲ್ಪ, ಮಾರುತಿಯ ಸಂಕಲ್ಪ ಬೇರೆಯಲ್ಲ. ಕೆಲಸ ಪ್ರಾರಂಭವಾಗಿ, ಮಾರುತಿಯ ಮಂದಿರ, ಅದರ ಬಲಗಡೆ ಭಿಕ್ಪಕ್ಕಾಗಿ ಕೊಠಡಿ ಹೀಗೆ ಎಲ್ಲ ಅಗತ್ಯಗಳೂ ಪೂರೈಸಲ್ಪಟ್ಟವು. ಭಕ್ತರೂ ತಮ್ಮ ತನು-ಮನ-ಧನಗಳಿಂದ ಮಂದಿರ ಕಾರ್ಯದಲ್ಲಿ ನೆರವಾದರು. ಭಕ್ತರ ಸಂಖ್ಯೆಯೂ ಅಧಿಕವಾಯಿತು. ಸದ್ಗುರು ರಾಮಾನಂದರು ಬರುವ ಭಕ್ತರನ್ನು ಪ್ರೀತಿಯಿಂದ ಬರಮಾಡಿಕೊಂಡು, ಅವರ ಸಂಕಷ್ಟ ನಿವಾರಣೆಗೆ ಎಂದಿನಂತೆ ತೊಡಗಿಕೊಂಡಿದ್ದರು. ಗುರುವು ಮಂದಸ್ಥಿ ತರಾಗಿ ಒಮ್ಮೆ ಭಕ್ತನ ಕಡೆ ನೋಡಿದರೆ ಸಾಕು, ಅದು ಆತನ ಬಾಳಿನುದ್ದಕ್ಕೂ ಕರುಣಾ ಶರಧಿಯಾಗಿ ಕಾಯುವುದು. ಸರ್ವ ಸಂಪದವೂ ಅಲ್ಲಿ ಸಾಕಾರವಾಗುವುದು. ಸದ್ಗುರು ಶ್ರೀ ರಾಮಾನಂದಾವಧೂತ ಸ್ವಾಮೀಜಿಯವರ ಮಹಿಮೆ ಅಪಾರ. ತಮ್ಮ ಜೀವನದಲ್ಲಿ ಅನುಗ್ರಹ ಹೊಂದಿದವರು ಒಮ್ಮೆ ಸ್ವಾಮಿಯ ಪಾದಕಮಲಗಳಲ್ಲಿ ಬಿದ್ದು ಬೇಡಿದವನು ತನ್ನ ಜೀವನದಲ್ಲಾದ ಅತಿಶಯವಾದ ಪರಿವರ್ತನೆ ಸಂತಸವನ್ನು ಎಂದೂ ಮರೆಯದಿರುವನು. ಆಗಾಗ ಸ್ವಾಮೀಜಿಯವರನ್ನು ಕಾಣಲು ಪ್ರಸಾದ ಕೃಪೆ ಪಡೆಯಲು ಬಂದು ಶ್ರೇಯೋಭಾಗಿಗಳಾಗುತ್ತಿದ್ದಾರೆ.
ಫೋಟೋ ಗ್ಯಾಲರಿ
ಸದ್ಗುರು ಶ್ರೀ ಶ್ರೀ ರಾಮಾನಂದ ಸ್ವಾಮೀಜಿ, ಅವಧೂತರು, ಶ್ರೀಮಠದ ಆವರಣ ಮತ್ತು ಶ್ರೀಮಠದ ಗೋಶಾಲೆ ಪರಿಸರವನ್ನು ಈ ಕೆಳಗೆ ನೋಡಬಹುದಾಗಿದೆ.
- ಫೋಟೋಗಳು
- ಶ್ರೀಗಳು
- ಶ್ರೀಮಠ
- ಮಠದ ಆವರಣ
ವಿಚಾರಣೆಗೆ ಸಂಪರ್ಕಿಸಿ
ಹೆಚ್ಚಿನ ಮಾಹಿತಿಗಾಗಿ ಕೆಳಗೆ ತಿಳಿಸಿದ ವಿವರಗಳಿಗೆ ಸಂಪರ್ಕಿಸಿ.
ವಿಳಾಸ
ಶ್ರೀ ರಾಮಾನಂದ ಆಶ್ರಮ ಕಟ್ಟಡ,
ಶ್ರೀಮಠ ದೀವಗಿ, ಕುಮಟ 581440
ದೂರವಾಣಿ ಸಂಖ್ಯೆ
+91 9945715677
+91 8762846647
ಶ್ರೀ ಮಠದ ಸಮಯ
ಸೋಮ - ಶುಕ್ರವಾರ: ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ
ಭಾನುವಾರ: ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆ



