ಶ್ರೀಗಳು
ಹಿನ್ನೆಲೆ: ಮಂಜಗುಣಿ (ಈಗಿನ ಶಿರಸಿ ತಾಲೂಕಿನ ಒಂದು ಕ್ಷೇತ್ರ) ಎಂಬಲ್ಲಿ ಅನಾದಿಕಾಲದಿಂದ ಉಳಿದ ಗೋತ್ರಜ ಬ್ರಾಹ್ಮಣರೊಂದಿಗೆ ವಿಶ್ವಾಮಿತ್ರ ಗೋತ್ರದಲ್ಲಿ ಜನಿಸಿದ ಹೆಗಡೆ (ಪ್ರಭು) ಮನೆತನದವರು ವೆಂಕಟ್ರಮಣನನ್ನು ಸ್ತುತಿಸಿ, ಸೇವಿಸಿ, ಅಲ್ಲಿಯ ಉಸ್ತುವಾರಿ (ಹೆಗ್ಗಡತನ) ನೋಡಿಕೊಂಡು ಬರುತ್ತಿದ್ದರು. ಇವರಲ್ಲಿ ಹೆಗಡೆ ಮನೆತನದವರು ಯುಜುರ್ವೇದೀಯ ವಿಶ್ವಾಮಿತ್ರ ಗೋತ್ರಜರು ಶ್ರೀಹರಿಯ ಅನುಗ್ರಹಕ್ಕೆ ಪಾತ್ರರಾದವರು. ಶಿರಸಿಯಿಂದ ಕಾನಗೋಡಿನ ಗೃಹಸ್ತರು ಆಗಮಿಸಿ, “ ಜಾಗನಹಳ್ಳಿಯಲ್ಲಿ ಹವ್ಯ-ಕವ್ಯಗಳನ್ನು ನಡೆಸಿಕೊಂಡು ಬರಲು "ಯೋಗ್ಯ ರಾದ ' ವಿಪ್ರರು ನಮಗೆ ಬೇಕಾಗಿದ್ದಾರೆ, ನೀವು ನಮ್ಮೊಟ್ಟಿಗೆ ಜಾಗನಹಳ್ಳಿಗೆ ಬಂದು ನೆಲೆಸಿ ಎಂದು ನಯವಾಗಿ ಬೇಡಿಕೊಂಡಾಗ ಅದನ್ನು ತಿರಸ್ಕರಿಸುವ ಮನಸ್ಸು ಹೆಗಡೆಯವರಿಗಾಗಲಿಲ್ಲ. ಆಯ್ತೆಂದು ಒಪ್ಪಿದರು. ಜಾಗನಹಳ್ಳಿ ಗೆ ಬಂದು ನೆಲೆಸಿದರು. ಸುಮಾರು 140-145 ವರ್ಷಗಳ ಹಿಂದೆ, ಈ ಮನೆತನದಲ್ಲಿ ಜನಿಸಿದ ಶ್ರೀ ಕೇಶವ ಹೆಗಡೆ ಎಂಬವರು ಕುಶಾಗ್ರಮತಿಯವರಾಗಿದ್ದು, ಸುತ್ತಮುತ್ತಲಿನ ಜನರನ್ನೆಲ್ಲ ತನ್ನೆಡೆಗೆ ಸೆಳೆದಿದ್ದರು. ಪರಮ ಭಾಗವತರು, ಅತಿಥಿ ಸತ್ಕಾರಕ್ಕೆ ಹೆಸರು ಪಡೆದವರೂ ಆಗಿದ್ದರು. ಇವರ ಪತ್ನಿ ಶ್ರೀಮತಿ ಭಾಗೀರಥಿ ನಿಜವಾಗಿ ಗಂಗೆಯಂತಹ ಪವಿತ್ರ ಮನಸ್ಸುಳ್ಳವಳು. ಅತಿಶಯವಾದ ಧರ್ಮಪರಾಯಣತೆ ಅವಳಲ್ಲಿತ್ತು. ಸದಾ ದೇವರನಾಮ ಸಂಕೀರ್ತನೆಯನ್ನು ಅತಿ ಭಾವುಕತೆಯಿಂದ ಮಾಡುತ್ತಿದ್ದರು ಹೆಗಡೆಯವರು. ಸಜ್ಜನಿಕೆ, ಭಾವುಕತೆ, ಸಾಧುಸಂತರ ಸಹವಾಸ, ಸಭ್ಯ ಗೃಹಸ್ಥಿಕೆ, ವಿನಯ ಸಂಪನ್ನತೆ ಇವುಗಳೇ ಇವರ ಜೀವನಕ್ರಮವಾದ್ದರಿಂದ ಇವರು ದೇವಮಾನವರಂತೆ ತಮ್ಮ ಬಾಳ್ವೆ ಮಾಡುತ್ತಿದ್ದರು. ಸದ್ಭಕ್ತರು, ಸಜ್ಜನರು ಇವರ ಹೆಸರು ಕೇಳಿಯೇ ಅವರಲ್ಲಿಗೆ ಬರುತ್ತಿದ್ದರು. ಆದರಾತಿಥ್ಯ ಪಡೆದು ಹೋಗುತ್ತಿದ್ದರು.
ಇಂತಹ ಕೇಶವ ಹೆಗಡೆಯವರಿಗೆ ದೇವರೊಲುಮೆಯಾಯ್ತು - ಸಂತತಿಯ ಭಾಗ್ಯ ದೊರೆಯಿತು. ಮಾತೆ ಭಾಗೀರಥಿ ದೇವರ ಅನುಗ್ರಹಕ್ಕೆ ಪಾತ್ರಳಾದಳು. ಬೇಡಿಕೊಂಡಂತೆ ಕುಲದೀಪಕರಾದ ಸುಪುತ್ರರನ್ನು ಪಡೆದಳು. ಹಿರಿಯ ಮಗ ಗಣೇಶ, ಮತ್ತೆರಡು ವರ್ಷಗಳಲ್ಲಿ ನಾರಾಯಣ, ಅನಂತರ ಸುಬ್ರಾಯ, ಜಾನಕಿ, ವಿಶ್ವೇಶ್ವರ ಕೇಶಪ್ಪ. ಗೋದಾವರಿ ಹಾಗೂ ಕಿರಿಯಮಗ ರಾಮಕೃಷ್ಣ ಹೀಗೆ ಅಷ್ಟಸಂತತಿಯನ್ನು ಭಾಗೀರಥಿದೇವಿ ಪಡೆದಳು. ಹಿರಿಯಮಕ್ಕಳು ವಿವಾಹ ವಯಸ್ಕರಾದರು. ಇವರ ಮದುವೆ ಮಾಡಿಸಬೇಕು. ಮನೆಯಲ್ಲಿರುವ ಆಸ್ತಿ ಬಹು ಕಡಿಮೆ, ಇವರದೆಲ್ಲ ಸಂಸಾರವಾದ ಮೇಲೆ ಈ ಚಿಕ್ಕ ಜಮೀನಿನಲ್ಲಿ ಮುಂದಿನ ಜೀವನಕ್ರಮ ಎಂತು ನಡೆದೀತು ಎಂದು ಯೋಚಿಸಿ ಜೀವನಾಂಶಕ್ಕೆ ಸಾಲದೆಂದು ಯೋಚಿಸಿ ಒಂದು ನಿರ್ಧಾರಕ್ಕೆ ಬಂದರು. ಹಿರಿಯ ಮಗ ಗಣೇಶ ಹೆಗಡೆಯವರ ಲಗ್ನವಾಯಿತು. ಮನೆತನದ ಕೆಲಸಗಳಲ್ಲೆಲ್ಲ ನಾರಾಯಣ, ಗಣೇಶ, ಸುಬ್ರಾಯ ಇವರೆಲ್ಲ ತಂದೆಗೆ ನೆರವಾಗುತ್ತಿದ್ದರು. ಉಳಿದವರು ಚಿಕ್ಕವರಾಗಿದ್ದರು. ಭಾಗೀರಥಿಯು ತಮ್ಮ ಮಕ್ಕಳನ್ನು ಬಹು ಅಕ್ಕರೆಯಿಂದ ಸುಸಂಸ್ಕಾರ ನೀಡಿ ಬೆಳೆಸಿದ್ದಳು. ಹೀಗಿರುತ್ತಿರಲು, ಕಿರಿಯ ಮಗ ರಾಮಕೃಷ್ಣನು ತನ್ನ ಬಾಲ್ಯದಲ್ಲಿಯೇ ಗತಿಸಿಬಿಟ್ಟನು. ಆದರೂ ಕೇಶವ ಹೆಗಡೆಯವರು ಧೃತಿಗೆಡಲಿಲ್ಲ. ಅವರದು ಸ್ಥಿತಪ್ರಜ್ಞ ವ್ಯಕ್ತಿತ್ವವಾಗಿತ್ತು. ತಮ್ಮ ಮನೆಕೆಲಸ ದೇವತಾರಾಧನೆ ಇವುಗಳಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದ್ದರು. ಇದೇ ವೇಳೆಯಲ್ಲಿ ನಾರಾಯಣ ಒಂದು ದಿನ ತಂದೆಗೆ ಹೇಳದೇ ವರದಳ್ಳಿಗೆ ನಡೆದುಬಿಟ್ಟರು. ಶ್ರೀಧರಸ್ವಾಮೀಜಿಯವರನ್ನು ಕಂಡು, ಅವರ ಸೇವೆ ಮಾಡುತ್ತ ನಾಲ್ಕಾರು ದಿನಗಳನ್ನು ಕಳೆಯುತ್ತಿದ್ದರು. ಇಲ್ಲಿ ಮನೆಯಲ್ಲಿ ಕೇಶವ ಹೆಗಡೆಯವರು ಸ್ನಲ್ಪ ಗಾಬರಿಯಾದರೂ ಧೃತಿಗೆಡಲಿಲ್ಲ. ಮಗನು ಮನೆ ಸೇರಲೆಂದು ದೇವರಲ್ಲಿ ಪ್ರಾರ್ಥಿಸಿದರು. ಇತ್ತ ವರದಳ್ಳಿಯಲ್ಲಿ ಒಂದು ದಿನ ಪರಮಹಂಸ ಭಗವಾನ್ ಶ್ರೀಧರಸ್ವಾಮೀಜಿಯವರೇ “ ಮಗಾ, ಮನೆಯ ಕಡೆ ಹೋಗೋದಿಲ್ಲವೇ, ತಂದೆ-ತಾಯಿ ಕಂಗಾಲಾಗುತ್ತಾರೆ. ಏನು, ಮನೆ ಬಿಟ್ಟು ಬಂದೆ, ಹೋಗು. ಮನೆ ಕಡೆ ಹೋಗು, ಸಂಸಾರದಲ್ಲಿ ಇದ್ದ ಮೇಲೆ ಮೊದಲು ಮಾಡುವ ಕಾಯಕ ಮಾಡಿಯೇ ನಂತರ ನೀನು ಯಾವ ದಾರಿ ಎಂಬುದನ್ನು ಹಿಡಿಯುವಿಯಂತೆ, ಈಗ ಮನೆ ಕಡೆ ನಡೆ '' ಎಂದು ತಿಳಿಹೇಳಿ, ನಾರಾಯಣ ಹೆಗಡೆಯವರನ್ನು ಜಾಗನಹಳ್ಳಿಗೆ ಕಳಿಸಿದರು.
ಮಗನಿಗೆ ಲಗ್ನದ ವಯಸ್ಸಾ ಗಿದೆ. ಎಲ್ಲಾದರೂ ಒಳ್ಳೆಯ ಸಂಬಂಧ ಸಿಕ್ಕಿದರೆ, ಅಳಿಯ ಸಂತಾನದ ಸಂಬಂಧವಾದರೂ ಒಳ್ಳೆಯದೇ - ಎಂದು ಸಂಬಂಧಕ್ಕಾ ಗಿ ವಧುವನ್ನು ಅನ್ವೇಷಿಸುತ್ತಿದ್ದರು-ಕೇಶವ ಹೆಗಡೆಯವರು. ಜಾಗನಹಳ್ಳಿಗೆ ನಾಲ್ಕಾರು ಮೈಲಿ ದೂರದಲ್ಲಿಯ ಆಲ್ಮನೆಯಲ್ಲಿ ಲಕ್ಷ್ಮಿ ಎಂಬ ಹುಡುಗಿ ಇದ್ದಾಳೆ. ಬಹು ಗುಣಾಢ್ಯೆ, ಒಳ್ಳೆಯ ಮನೆತನ ಎಂಬುದು ಹೆಗಡೆಯವರಿ ತಿಳಿಯಿತು; ಹೋಗಿ. ವಿಚಾರಿಸಿದರು. ಹುಡುಗಿಯ ತಂದೆಯ ಮನೆಯವರಿಗೂ ಇಷ್ಟವಾಯಿತು. ಮನೆಯಲ್ಲಿ ಚಪ್ಪರ ಹಾಕಿದರು. ಮಂಗಲವಾದ್ಯ ಮೊಳಗಿತು. ಶ್ರೀ ಮಹಾಗಣಪತಿಯ ದೇಗುಲದಲ್ಲಿ ವಿಶೇಷಪೂಜೆ ನಡೆಯಿತು. ಶುಭಲಗ್ನ ಇಷ್ಟಾಂಶದಲ್ಲಿ "ಲಕ್ಷ್ಮಿ-ನಾರಾಯಣ" ಇವರ ವಿವಾಹ ಮಹೋತ್ಸವವು ಜರುಗಿತು. ಕೇಶವ ಹೆಗಡೆಯವರು ಮಗ ನಾರಾಯಣನನ್ನು ಪ್ರೀತಿಯಿಂದ ಸಾಕಿ ಸಲಹಿದವರು. ಈಗ ಮಗನನ್ನು ಅಳಿಯ ಸಂತಾನದ ರೀತ್ಯ ಮಾವನವನೆಗೆ ಕಳಿಸಿಕೊಡಬೇಕಾಗಿತ್ತು ನಾರಾಯಣನನ್ನು ಬಿಡುವುದು ಸ್ವಲ್ಪ ಕಠಿಣವಾಯ್ತು, ಆದರೂ ವಿಧಿಯಂತೆ ಗಂಡ ಹೆಂಡಿರು ಒಂದಾಗಿ ಇರಲಿ ಶುಭವಾಗಲಿ ಎಂದು ಹರಸಿ, ಆಲ್ಮನೆಗೆ ತನ್ನ ಮಗ ಸೊಸೆಯರನ್ನು ಶುಭಹಾರೈಸಿ ಕಳಿಸಿಕೊಟ್ಟರು. ಆಲ್ಮನೆಯಲ್ಲಿ ಸರಸ್ವತಿಯಮ್ಮನ ಮಗಳು ಸೌಭಾಗ್ಯವತಿ ಲಕ್ಷ್ಮೀದೇವಿ ನಾರಾಯಣ ಹೆಗಡೆಯವರ ಕೈಹಿಡಿದು ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಹೆಸರೇ ಸೂಚಿಸುವಂತೆ ಸಾಕ್ಷಾತ್ ಲಕ್ಷ್ಮೀ-ನಾರಾಯಣರಂತೆಯೇ ಇವರು ಕಂಗೊಳಿಸಿದರು. ಗಂಡನೊಂದಿಗೆ ಲಕ್ಷ್ಮಿಯು ಸುಖ ಸಂಸಾರ ಸಾಗಿಸುತ್ತಿದ್ದಳು. ತಾಯಿ ಸರಸ್ವತಿಯು ಮೊದಲಿನಿಂದಲೂ ಕಷ್ಟಪಟ್ಟು ದುಡಿದು ಸಂಪಾದನೆ ಮಾಡಿ ಕೆಲವು ಧನಗಳನ್ನು ಕೂಡಿಟ್ಟಿದ್ದಳು. ತನಗಿರುವ ಆಸ್ತಿ ಕಡಿಮೆ, ಬೇರೆಲ್ಲಾದರೂ ಆಸ್ತಿಯನ್ನು ನೋಡಿ ಖರೀದಿಸಬೇಕು. ತನ್ನ ಮಗಳ ಭವಿಷ್ಯ ಒಳ್ಳೇದಾಗಲಿ ಎಂಬ ಭಾವನೆ ಅವಳಲ್ಲಿ ಅವಳ ಆಸೆಯಂತೆ ತಟ್ಟೇ ಕೈ (ಈಗಿನ ಈರಮ್ಮಜ್ಜಿ ಮನೆ)ಯಲ್ಲಿರುವ ಆಸ್ತಿಯನ್ನು ಖರೀದಿಸಿ ತನ್ನ ಮಗಳು ಅಳಿಯರಿಗೆ ಅಲ್ಲಿ ಸಂಸಾರಮಾಡಿ ಉಳಿಯಲು ಅನುವು ಮಾಡಿಕೊಟ್ಟಳು. ಎರಡ್ಮೂರು ಎಕರೆ ಅಡಿಕೆ ತೋಟದಲ್ಲಿ ನಾರಾಯಣ ಹೆಗಡೆ ದಂಪತಿ ಅಲ್ಲಿ ಕೃಷಿಕ ಜೀವನವನ್ನು ಆರಂಭಿಸಿದ್ದರು.
ನಾರಾಯಣ ಹೆಗಡೆಯವರು ಮನೆತನದಿಂದ ಬಂದ ಪದ್ಧತಿ-ಸಂಪ್ರದಾಯದಂತೆ ಪ್ರತಿನಿತ್ಯ ಸ್ನಾನ- ಸಂಧ್ಯಾದಿಗಳು, ಪುರಾಣ ಕಥೆ ಓದುವುದು, ಅತಿಥಿಸತ್ಕಾರ ಬಡಜನರಿಗೆ ಅಶನಾದಿಗಳನ್ನು ನೀಡಿ ಸಂತೈಸುವುದು ಇವನ್ನೆಲ್ಲ ಚಾಚೂ ತಪ್ಪದೆ ಮಾಡುತ್ತಿದ್ದರು. ನಾರಾಯಣ ಹೆಗಡೆಯವರು ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದರು. ಉತ್ತಮರಾದ ಸಜ್ಜನರು ಸಾಧು ಸಂತರೊಂದಿಗೆ ಮಾತ್ರ ಸಹವಾಸ, ಮಾತುಕತೆ. ವಾಗ್ವಾದ ಇವರದಾಗಿತ್ತು. ಪರಮ ಭಾಗವತರೂ, ದೇವ ಭಕ್ತರೂ ಸನ್ಮಾರ್ಗಿಗಳೂ ಆಗಿದ್ದ ಹೆಗಡೆಯವರ ಮನೆಯಲ್ಲಿ ನಿತ್ಯವೂ ಸಜ್ಜನ, ಭಾಗವತ ಜನರ ಪಾದ ತೊಳೆದು ತೀರ್ಥಪ್ರಸಾದ ಸ್ವೀಕರಿಸುವ ಸಂಪ್ರದಾಯವಿತ್ತು. ಆದರಾತಿಥ್ಯಕ್ಕೆ ಹೆಸರಾದ ಇವರ ಮನೆಯಲ್ಲಿ ಸತ್ಕಾರಕ್ಕೆ ಪ್ರಥಮ ಪ್ರಾಶಸ್ತ್ಯವಿತ್ತು. ನಾರಾಯಣ ಹೆಗಡೆಯವರು ಟೊಂಕಕ್ಕೆ ಕತ್ತಿಕೊಕ್ಕೆ ಕಟ್ಟಿ ತೋಟದೆಡೆ ನಡೆದರೆ, ಬೆಳಿಗ್ಗೆ ಒಂಬತ್ತು ಘಂಟೆಯಿಂದ ಮಧ್ಯಾಹ್ನ 11:30ರ ವರೆಗೆ ತೋಟದ ಕೆಲಸದಲ್ಲಿಯೇ ತಲ್ಲೀನರಾಗಿ ಬಿಡುತ್ತಿದ್ದರು. ತಾವು ದುಡಿದು ಸಂಗ್ರಹಿಸಿದ್ದನ್ನು ಸತ್ಕಾರ್ಯ, ಸದುಪಯೋಗ ಇವಕ್ಕೆ ವಿನಿಯೋಗಿಸುತ್ತಿದ್ದರು. ಇವರ ಈ ಜೀವನ ಕ್ರಮವು ಜನರಿಗೆಲ್ಲ ಒಂದು ಆದರ್ಶವಾಗಿತ್ತು. ಸಜ್ಜನಸಂಗ, ಸಾಧುಸೇವೆ ನಡೆದೇ ಇತ್ತು. ಪ್ರರಾಣ ಕಥೆಗಳ ಪಠನ-ಪಾಠನ ನಡೆಯುತ್ತಲೇ ಇತ್ತು. ಇಂತಹ ಸನ್ನಿವೇಶದಲ್ಲಿ ಪ್ರತಿದಿನ ಪತಿಸೇವೆಯನ್ನು ಮಾಡುತ್ತಿದ್ದ ಸೌಭಾಗ್ಯವತಿ ಲಕ್ಷೀ ಶ್ರೀದೇವಿಯ ಉದರದಲ್ಲಿ ತ್ರಿವಳಿ ಕಾಣಿಸಿಕೊಂಡವು. ಬಹು ಸಂತೋಷಚಿತ್ತಳಾಗಿರುವ ಆಕೆ ದಿನನಿತ್ಯnಪುರಾಣಶ್ರವಣ, ಸಾಧುಸಂತರ ಸೇವೆ, ಆತ್ಮೀಯರ ಸಮಾಗಮ ಇವುಗಳಿಂದ ತುಂಬುಮನದವಳಾಗಿದ್ದ ಳು. ತಿಂಗಳು ಏಳಾಗಲು ತ್ರಿವಳಿಗಳು ಮಾಯವಾದವು. ಕೆಲದಿನಗಳಲ್ಲಿ ಗರ್ಭಿಣಿಯಾಗಿ ನವಮಾಸಗಳು ತುಂಬಿದವು. ಲವಲವಿಕೆಯಿಂದ ದೇವರನ್ನೇ ನೆನೆಯುತ್ತ, ಪತಿಭಕ್ತಿಪರಾಯಣೆಯು ತಾಯಿಯಾಗುವ ಮುನ್ಸೂಚನೆಯಲ್ಲಿದ್ದಳು; ಪುತ್ರೋತ್ಸವದ ಹಂಬಲದಲ್ಲಿದ್ದಳು.
ರಾಮಚಂದ್ರನ ಜನನ: ಅದು ಶುಭ ಶುಕ್ಲ ಸಂವತ್ಸರ. ಈಷಣತ್ರಯವನ್ನು ದೂರಗೊಳಿಸಿ, ಪ್ರಫುಲ್ಲ ಮನಸ್ಸನ್ನು ನೀಡುವ ಶಿಶಿರ(ಮಾಗಿ) ಖುತು (ಮಾಗಿಋತು) ಶುಭ ಮಾಘಮಾಸದ ಶುಕ್ಲ ಪಕ್ಷ ಸಪ್ತಮಿ (ರಥಸಪ್ತಮಿ). ಸೂರ್ಯದೇವನು ಕತ್ತಲೆ(ಮಾಯೆ)ಯ ಮೊತ್ತವನ್ನು ಹರಿದು ಬೆಳಕಿನ ಹೊನಲನ್ನು (ಪ್ರಕಾಶ ಜ್ಞಾನದ ದ್ಯೋತಕ) ಜಗತ್ತಿಗೆ ನೀಡುತ್ತಿರುವ ಆಶುಭ ಕಾಲದಲ್ಲಿ ಶುಭಯೋಗಕರಣಗಳ ಕೂಡುವಿಕೆಯ ವೇಳೆ ಒಮ್ಮಿಂದೊಮ್ಮೆಲೇ ಶಾಂತವಾದ ತಂಗಾಳಿ ಬೀಸತೊಡಗಿತು. ಆಗಸದಿಂದ ಮಲ್ಲಿಗೆಯ ಸುವಾಸನಾಯುಕ್ತ ಹನಿಗಳುಉದುರಿದವು. ಪ್ರಷ್ಪವೃಷ್ಟಿಯಾಯಿತು. (1930ನೇ ಇಸ್ವಿ) ಆ ಶುಭ ಘಳಿಗೆಯಲ್ಲಿ ಲಕ್ಷ್ಮೀ-ನಾರಾಯಣ ಇವರಿಗೆ ಪುತ್ರೋತ್ಸವವಾಯಿತು. ವೇದಮಾತಾ ಗಾಯತ್ರಿಯನ್ನು ಗಾಯತ್ರಿ ಛಂದದಲ್ಲಿ ಹೊಂದಿಸಿ ಗಾಯತ್ರಿಮಂತ್ರ ದೃಷ್ಟಾರರೆನಿಸಿದ ವಿಶ್ವಾಮಿತ್ರರ ಕುಲದಲ್ಲಿ ಕುಮಾರ (ರಾಮಚಂದ್ರ) ಜನಿಸಿದ. ಹೆಗಡೆಯವರ ಕುಮಾರ ಹಸನ್ಮುಖದಿಂದ (ರೋದನವೇ ಇಲ್ಲದೆ) ಶಾಂತ ಬಾಲಕನಾಗಿ ಕಂಡ. ನಾರಾಯಣ ಹೆಗಡೆಯವರು ತಮ್ಮ ಹತ್ತಿರದ ಸಂಬಂಧಿಕರೆಲ್ಲರಿಗೆ ಮನೆತನದವರಿಗೆ, ನೆರೆಹೊರೆಯ ಜನರಿಗೆಲ್ಲ ಕರೆ ಕಳಿಸಿದರು. ಕುಮಾರನ ನಾಮಕರಣ ಮಹೋತ್ಸವಕ್ಕೆಂದು ಅಣಿಯಾಯಿತು. ಜಗಲಿಯ ಒಂದೆಡೆ ತೊಟ್ಟಿಲನ್ನು ಕಟ್ಟಿ, ಅದಕ್ಕೆ ಶೃಂಗಾರ ಮಾಡಲಾಗಿತ್ತು. ವಾಸ್ತು ದೇವತೆಯ ಮುಂದೆ ಶಾಲಿಯ ಅಕ್ಕಿ ತುಂಬಿದ ಪಾತ್ರೆ ಕಂಗೊಳಿಸುತ್ತಿತ್ತು. ನಾರಾಯಣ ಹೆಗಡೆ ಸಪತ್ನೀಕರಾಗಿ ಶೌಚಾಚಮನ ಪಂಚಗವ್ಯಾದಿಗಳನ್ನು ಸ್ವೀಕರಿಸಿ, ಬಹು ಸಂಭ್ರಮದಿಂದ ಶಾಲಿಯ ಅಕ್ಕಿಯಲ್ಲಿ 'ಶ್ರೀ ರಾಮಚಂದ್ರ' ಎಂಬುದಾಗಿ ಪುತ್ರನ ಹೆಸರನ್ನು ಬರೆದರು. (ಇವರೇ ಇಂದು ದೀವಗಿಯಲ್ಲಿ ಬೆಳಗುತ್ತಿರುವ ಸದ್ಗುರು ರಾಮಾನಂದರು.) ನಾರಾಯಣ ಹೆಗಡೆಯವರು ತಮಗಾದ ಆ ಸಂಭ್ರಮದ ವೇಳೆಯನ್ನು ತಿಳಿಸಲು ಭಗವಾನ್ ಶ್ರೀಧರಸ್ವಾ ಮಿಯವರನ್ನು ಕಾಣಲು ನಡೆದರು. ಸ್ವಾಮೀಜಿಯವರ ದರ್ಶನ ಪಡೆದು, ಅವರ ಪಾದ- -ಕಮಲಗಳನ್ನು ಒತ್ತುತ್ತಾ, ತನಗೆ ಪುತ್ರೋತ್ಸವವಾದ ವಿಚಾರವನ್ನೂ, ತನಗಾದ ಸಂತೋಷವನ್ನೂ ವಿವರಿಸಿದರು. ಸ್ವಾಮೀಜಿಯವರು ಅವರಿಗೆ ಮಂತ್ರಾಕ್ಷತೆ, ತೀರ್ಥ ನೀಡಿ 'ಕಲ್ಯಾಣ ಮಸ್ತು' ಎ೦ದು ಶುಭಾಶಯವನ್ನು ನೀಡಿ ಕಳಿಸಿಕೊಟ್ಟರು.
ರಾಮಚಂದ್ರನ ಜನನ
ರಾಮನ ಬಾಲಲೀಲೆ: ಬಾಲಕನ ದೇವರ ನಗು ನೋಡಿ ಅವನನ್ನು ಮುದ್ದಿಸುತ್ತ, ನೆತ್ತಿಯನ್ನು ಆಘ್ರಾಣಿಸುತ್ತ, ಲಲ್ಲೆಗರೆಯುತ್ತ ಇರುವ ಲಕ್ಷ್ಮೀದೇವಿಯ ಆನಂದಕ್ಕೆ ಪಾರವೇ ಇಲ್ಲ. ಕುಮಾರನಿಗೆ ಆರು ತಿಂಗಳು ಕಳೆಯಿತು. ತನ್ನನ್ನು ಎತ್ತಿಕೊಂಡವರ ಮೋರೆಯನ್ನು ನೋಡಿ ಕಿಲಕಿಲನೆ ನಗುವುದು, ತೀಕ್ಷ್ಣ ದೃಷ್ಟಿಯಿಂದ ನೋಡುವುದು, ಕರೆದು (ಎತ್ತಿ)ಕೊಳ್ಳುತ್ತಿಲ್ಲವೆಂದು ತನ್ನ ಎರಡೂ ಕೈಗಳನ್ನೂ ಮುಂದೆ ಚಾಚಿ, ಎದುರಿಗಿರುವವರು ಎತ್ತಿಕೊಳ್ಳದಿರಲು ಅಳುವುದು ಬಾಲನಲ್ಲಿ ಕಂಡು ಬಂತು. ಮಗ್ಗುಲು ಓರೆಯಾಗಿ ಮಲಗುತ್ತ, ಕವುಚಿಕೊಳ್ಳುತ್ತ, ಮುಂದೆ ಹೋಗಬೇಕೆಂದು ಹೊಟ್ಟೆಯನ್ನು ಹೊಸೆದುಕೊಂಡು ಹೋಗಲು ಮನಮಾಡಿ ಹಿಂದೆ ಹಿಂದೆ ಹೋಗುತ್ತಾ, ತಾನು ಮುಂದೆ. ಹೋಗಲಾಗಲಿಲ್ಲಾ ಎಂದು ಅಳುತ್ತಾ, ಯಾರಾದರೂ ಬಂದು ಎತ್ತಿಕೊಂಡರೆ ಖುಷಪಡುತ್ತ, ತಾನು ನಿಧಾನವಾಗಿ ಗೋಡೆಯನ್ನು ಆನಿಸಿಕೊಂಡು ಕೂಡ್ರುತ್ತಾ, ಅಲ್ಲೇ ಹಿಡಿದುಕೊಂಡು ನಿಲ್ಲಲು ಪ್ರಯತ್ನ ಮಾಡುತ್ತಲಿರುವ ಪುತ್ರನನ್ನು ನೋಡಿ ಲಕ್ಷ್ಮಿದೇವಿ ಒಳಗೊಳಗೇ ಸಂತಸಪಟ್ಟಳು. ಹರೆದಾಡುತ್ತ ಬಾಗಿಲಲ್ಲಿ ರಂಜಿಸುವ ರಂಗವಲ್ಲಿಯನ್ನು ಒರೆಸಿಬಿಡುತ್ತಿದ್ದ, ತಂದೆ ನಾರಾಯಣ ಹೆಗಡೆಯವರು ಪುರಾಣ ಪುಸ್ತ ಕಗಳನ್ನು ಓದುತ್ತಿದ್ದರೆ ಮಗು ಸುಮ್ಮನಾಗಿದ್ದಂತೆ ನಟಿಸುತ್ತಾ, ತಕ್ಷಣ ಬಂದು ಪುರಾಣ ಪುಸ್ತಕಕ್ಕೆ ಕೈ ಹಾಕಿ ಬಿಗಿಯಾಗಿ ಹಿಡಿದುಕೊಂಡು ಬಿಡುತ್ತಿದ್ದ. ಎತ್ತಿಕೊಂಡವರ ಮೈ ಬಟ್ಟೆಯನ್ನೆಲ್ಲ ಮಾಸಲು ಮಾಡುತ್ತಿದ್ದ ಮೂತ್ರ ಮಾಡಿದ್ಯಾ ಎಂದು ಬೈದರೆ ನಗುತ್ತಿದ್ದ. ಮಗಾ ಪುಸ್ತಕ ಸ್ವಾಮಿ, ಎಂದಾಗ ತಂದೆಯ ಮುಖವನ್ನೇ ನೋಡುತ್ತಾ ಬೇರೆ ಏನಾದರೂ ಆಟಿಗೆ ಸಾಮಗ್ರಿ ನೀಡಿದಾಗ ಸುಮ್ಮನಾಗುತ್ತಿದ್ದ. ತಂದೆ ಪುಸ್ತಕ ಓದುವಾಗ ತಾನು ಕಾಲುಗಳ ಮೇಲೆ ಕುಳಿತುಕೊಂಡು ತಾಸುಗಟ್ಟಲೆ ಆಲಿಸುತ್ತಾ (ಅಳದೇ- ಬೇರೆನೂ ಬಯಸದೆ) ಕುಳಿತುಕೊಂಡು ಬಿಡುತ್ತಿದ್ದ. ಆಡುತ್ತಾಡುತ್ತಾ ತನ್ನ ಎರಡನೆ ವರ್ಷ ಕಳೆದು ಮೂರನೇ ವರ್ಷಕ್ಕೆ ಕಾಲಿಟ್ಟ. ಶುಕ್ಲ ಪಕ್ಷದ ಚಂದ್ರನೋಪಾದಿಯಲ್ಲಿ ತೇಜಃಪುಂಜನಾಗಿ ಬೆಳೆಯುತ್ತಿದ್ದ. ರಾಮಚಂದ್ರನಿಗೆ ನೋಡನೋಡುತ್ತ ಮೂರು ವರ್ಷಗಳು ತುಂಬಿದವು.
ಸಾಧು ಸಂತರನ್ನು ಕಂಡರೆ ಮೂರು ವರ್ಷದ ಹಸುಳೆ ತಾನೂ ಹೋಗಿ ಪಾದಕ್ಕೆ ಬೀಳುವ, ಅವರ ಊಟವಾದ ನಂತರವೇ ತನಗೂ ಉಣಬಡಿಸು ಎನ್ನುವ. ಎಂದೂ ಬೇಗನೆ ಊಟ ಹಾಕೆಂದು ತಾಯಿಯನ್ನು ಪೀಡಿಸದಿದ್ದ ಮಗುವನ್ನು ನೋಡಿ ತಾಯಿಯೇ ಮರುಗಬೇಕಿತ್ತೇ ವಿನಾ ಕುಮಾರನು ಎಂದೂ ಹಸಿವೆ ಎಂದು ಹೆಳಿದ್ದೇ ಇಲ್ಲ. ಇಂತಹ ಸುಕುಮಾರನ ಬಾಲ್ಯ ನೋಡಿ ತಾಯಿ ಸೌಭಾಗ್ಯ ವಂತೆ ಲಕ್ಷ್ಮೀ ಹಾಗೂ ಅಜ್ಜ-ಅಜ್ಜಿಯರು ಬಹು ಸಂತೋಷಪಟ್ಟರು. ಲಕ್ಷ್ಮೀದೇವಿ ಪುನಃ ಗರ್ಭವತಿಯಾದಳು, ಸೀಮಂತದ ಶಾಸ್ತ್ರ ಮುಗಿಯಿತು. ಸಭ್ಯ ವರ್ತನೆಯ ಮಾತೆಗೆ ಇನ್ನೊಬ್ಬ ಕುಮಾರನಾಗುವ ಕುರುಹು ಕಾಣಿಸಿಕೊಂಡವು. ಸದಾ ಪತಿಸೇವೆ, ಮನೆಗೆಲಸ, ಸಾಧುಸಂತರ ಸೇವೆ ಮಾಡುತ್ತಿದ್ದ ಈಕೆ ಒಂದು ಶುಭಗಳಿಗೆಯಲ್ಲಿ (1932) ಇನ್ನೊಂದು ಪುತ್ರ ರತ್ನವನ್ನು ಪಡೆದಳು. ತೇಜಃಪುಂಜನಾಗಿದ್ದ ಹುಡುಗನನ್ನು ಕಂಡು ಕಮಲಾಕರ ಎಂದು ನಾಮಕರಣ ಮಾಡಿದರು. ಈಗ ಈ ಕಮಲಾಕರನೊಂದಿಗೆ ರಾಮಚಂದ್ರ ತನ್ನ ಬಾಲ್ಯವನ್ನು ಕಳೆಯಲು ಅನುಕೂಲವಾಯ್ತು. ಕಮಲಾಕರ ಶಿಶುವಾದರೂ, ಆತನನ್ನು ಒಂದು ದಿನವೂ ಹಿಂಸಿಸುತ್ತಿದ್ದಿಲ್ಲ ರಾಮಚಂದ್ರ, ಅದನ್ನು ನೋಡಿ ತಂದೆಯವರಾದ ನಾರಾಯಣ ಹೆಗಡೆಯವರಿಗೆ ಬಹು ಆನಂದವಾಯ್ತು. ಯಾರಾದರೂ ಬಂದು ಕಮಲಾಕರನನ್ನು ಎತ್ತಿಕೊಳ್ಳ ಹೋದರೆ “ನನ್ನ ತಮ್ಮ” ಎನ್ನುವುದು, ಯಾರಾದರೂ ಬಂದು ತನ್ನ ಮಾತೆಯನ್ನು ಕೈಹಿಡಿದು ಮಾತನಾಡಿಸಿದರೆ, ತಾನು ಓಡಿಹೋಗಿ ತಾಯಿಯ ಸೀರೆಯನ್ನು ಹಿಡಿದುಕೊಂಡು “ನನ್ನ ಅಮ್ಮ” ಎನ್ನುತ್ತಿದ್ದ ಪರಿ ಮಾತೆಯನ್ನು ಆನಂದದ ಲೋಕದಲ್ಲಿ ವಿಹರಿಸುವಂತೆ ಮಾಡಿತ್ತು.
ಮೈಲಿಬೇನೆಯ ಅಟ್ಟಹಾಸ: “ದೈವೇ ವಿಚಿತ್ರಾ ಗತಿ” ಎಂಬಂತೆ ಒಮ್ಮಿ೦ದೊಮ್ಮೆಲೇ, ಮೈಲಿಬೇನೆ ಸುತ್ತಾರು ಹಳ್ಳಿಗಳನ್ನು ವ್ಯಾ ಪಿಸಿಬಿಟ್ಟಿತ್ತು. ಬಹುಪಾಲು ಗ್ರಾ ಮೀಣ. ಪ್ರದೇಶಗಳಲ್ಲಿ ಕಾಣಿಸಿಕೊಂಡು. ತಾಂಡವನರ್ತನವಾಡಹತ್ತಿತು. ಮೊದಲು ಜಾಗನಳ್ಳಿಯಲ್ಲಿ ಬಹು ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು, ಬರಬರುತ್ತಾ ಹೆಚ್ಚಾಗಿ, ದಿನಕ್ಕೊ ೦ದರಂತೆ ಜನರನ್ನು ಬಲಿ ತೆಗೆದುಕೊಂಡಿತ್ತು. ಸಜ್ಜ ನರ ಸುಖ, ಶಾಂತಿ ಚದುರತು. ನೆಂಟರಿಷ್ಟರು ಸೇವೆಗೆಂದು ಬಂದರು. ಆದರೂ ಈ ಮಾರಿ ತನ್ನ ಕ್ರೂರ ದೃಷ್ಟಿಯನ್ನು ಹೃದಯವಂತರ ಮನೆಯ ಮೇಲೂ ಬೀರಿತ್ತು. ಕೇಶವ ಹೆಗಡೆಯವರಿಗೆ ಮೈಲಿಬೇನೆ ಆವರಿಸಿರಲು, ಮಗ ನಾರಾಯಣ ಹೆಗಡೆ ತಂದೆಯ ಸೇವೆಗೆಂದು ಜಾಗನಳ್ಳಿಗೆ ಬಂದು ಸೇವೆ ಮಾಡಿದರು. ಮಾತೆ ಸಾಧ್ವಿ ಭಾಗೀರಥಿಯು ನಿಷ್ಠೆಯಿಂದ ಪತಿಸೇವೆ ಮಾಡಿದಳು. ಆದರೆ ಬ್ರಹ್ಮನ ಬರಹವೇ ಬೇರೆಯಾಗಿತ್ತು. ರೋಗದಿಂದ ಬಳಲಿ ಬೆಂಡಾಗಿ ಕೇಶವ ಹೆಗಡೆ ಶಿವಪಾದದಲ್ಲಿ ಒಂದಾದರು. ಆಗ ತಂದೆಯ ಅಂತ್ಯಕ್ರಿಯೆಯನ್ನು ಮಾಡಲೇಬೇಕಾಯ್ತು. ಈ ವೇಳೆಗಾಗಲೇ ಬೇನೆಯು ನಾರಾಯಣ ಹೆಗಡೆಯವರ ಶರೀರವನ್ನು ತನ್ನ ನೀಳವಾದ ನಾಲಿಗೆಯಿಂದ ನುಂಗಲು ಅಣಿಯಾಗಿತ್ತು. ಶರೀರದ ಕೆಲ ಭಾಗಗಳಲ್ಲಿ ಹುಣ್ಣುಗಳು ಕಾಣಿಸಿಕೊಂಡವು. ರೋಗದ ಕಾಲಾಟ ನಡೆದಿದ್ದರಿಂದ, ಹೇಗೋ ಕಷ್ಟಪಟ್ಟು ನಾರಾಯಣ ಹೆಗಡೆಯವರು ತಟ್ಟೀಕೈ ಸೇರಿದರು. ಒಂದೆರಡೇ ದಿನಗಳಲ್ಲಿ ಕಿರಿಯ ಮಗ ಕಮಲಾಕರನಿಗೆ ಬೇನೆ ಆವರಿಸಿ, ಆ ಎಳೆಯ ಜೀವವನ್ನು ಹಿಂಡಿ ಹಿಪ್ಪೆ ಮಾಡಿತು. ನಾರಾಯಣ ಹೆಗಡೆಯವರಿಗಾದ ವ್ರಣ ಕಡಿಮೆಯಾಗಲಿಲ್ಲ. ಜೊತೆಯಲ್ಲಿ ಹಿರಿಯಮಗ ರಾಮನಿಗೂ ವ್ಯಾಪಿಸಿ ದಿಗಿಲು ಹುಟ್ಟಿಸಿತ್ತು. ಹಸುಗೂಸು ಕಮಲಾಕರನ ಚೀರಾಟ ಸುತ್ತೆಲ್ಲ ಮನೆಗೂ ಕೇಳಿತ್ತು. ಕೊನೆಗೂ ಇಹಲೋಕವನ್ನು ತ್ತ ಜಿಸಿದ ಕಮಲಾಕರನ ಶವವನ್ನು ಮಣ್ಣು ಮಾಡುವದೆಂತು ಎಂದು ತಾಯಿ ಲಕ್ಷ್ಮೀದೇವಿ ಕಂಗೆಟ್ಟಳು. ದುಃಖವನ್ನು ಅದುಮಿ ಹಿಡಿದುಕೊಂಡು, ಹಿರಿಯ ಮಗನಾದ ರಾಮಚಂದ್ರನನ್ನು ಬಹು ಎಚ್ಚರದಿಂದ ಕಾದುಕೊಂಡಳಲ್ಲದೆ, ತನ್ನ ಪತಿದೇವರನ್ನು ಬಹು ಪ್ರೀತಿ, ಶ್ರದ್ಧೆಯಿಂದ ಸೇವೆ ಮಾಡಿದಳು. ತನ್ನ ಮಗಳ ಪರಿಸ್ಥಿತಿಯನ್ನು ತಿಳಿದ ಮಾತೆ ಸರಸ್ವತಿ ಹಾಗೂ ಅಜ್ಜಿ ಮಾದೇವಿಯರು ತಟ್ಟೀಕೈಗೆ ಬಂದರು. ವಿಧಿಯಾಟವೆಂದರೆ, ಇವರ ಮನೆಯಲ್ಲಿ ಬೇನೆ ತನ್ನ ರುದ್ರನರ್ತನವನ್ನು ಪ್ರದರ್ಶನ ಮಾಡಿದಂತೆ ಆಚೀಚೆ ತನ್ನ ಕೈಚಾಚಿ ಹೋಗಲಿಲ್ಲ. ಲಕ್ಷ್ಮೀಯ ಮೈಮೇಲೆಲ್ಲ ಮಾರಿಯ ಉಪದ್ರವದ ಚಿಹ್ನೆ ಕಾಣಿಸಿಕೊಂಡು ಉಲ್ಬಣಾವಸ್ಥೆಯಾಯ್ತು. ಅಜ್ಜಿ, ತಾಯಿಯರು ಆರೈ ಕೆಮಾಡುತ್ತಿದ್ದರೂ, ವಿಧಿಯ ಬಾಯಿಗೆ ಲಕ್ಷ್ಮೀದೇವಿ ತುತ್ತಾದಳು. ಲಕ್ಷ್ಮೀದೇವಿ ಸೌಭಾಗ್ಯವತಿಯಾಗಿಯೇ ಕಣ್ಮುಚ್ಚಿಕೊಂಡಳು. ನಾರಾಯಣ ಹೆಗಡೆಯವರು ತಿರುಗಾಡುವ ಸ್ಥಿ ತಿಯಲ್ಲೂ ಇಲ್ಲ. ಮಗ ರಾಮಚಂದ್ರನಂತೂ ಒಂದು ಕೋಣೆಯಲ್ಲಿ ಮಲಗಿಯೇ" ಇದ್ದ. ಗಂಜಿ, ನೀರು ಕೊಡುವವರಿಲ್ಲ. ಮಾರಿಗಂಜಿದ ಜನರ್ಯಾರೂರ ಹತ್ತಿರಕ್ಕೆ ಸುಳಿಯಲಿಲ್ಲ. ಆ ಸಂದರ್ಭದಲ್ಲಿ ತಮ್ಮ ಮಗಳೆ ಗತಿಸಿದ ಮೇಲೆ ಇನ್ನೇನು? ಎಂದು ಆಲೋಚಿಸಿದ ಸರಸ್ವತಿ ಹಾಗೂ ಮಾದೇವಿ ಇವರು ಅಳಿಯ ನಾರಾಯಣ ಹಾಗೂ ಮೊಮ್ಮಗನಾದ ರಾಮಚಂದ್ರ ಇವರನ್ನು (ಶವವಾಗಿ ಬಿದ್ದಿದ್ದ ಮಗಳು ಲಕ್ಷ್ಮೀದೇವಿಯನ್ನೂ ಅದೇ ಸ್ಥಿತಿಯಲ್ಲಿ) ಬಿಟ್ಟು ತುಚ್ಚವಾದ ಮನಸ್ಸಿನಿಂದ ಜೋರಾಗಿ ಬೀಳುತ್ತಿರುವ ಮಳೆಯಲ್ಲಿಯೇ ನಾರಾಯಣನ ಮನೆಯನ್ನು ಬಿಟ್ಟು ಹೊರಟು ಮರುದಿವಸ ಶಿರಸಿಯನ್ನು ಸೇರಿದರು. ನಾರಾಯಣ ಹೆಗಡೆಯವರು ಜಾಗದಿಂದ ಮೇಲಕ್ಕೇಳಲಾಗದೆ ಒದ್ದಾಡಹತ್ತಿದರು. ಮಮ್ಮಲ ಮರುಗಿದರು. “ಕಾಲಾಯ ತಸ್ಮೈ ನಮಃ” ವಿಧಿಯ ಕ್ರೂರ ದೃಷ್ಟಿ ಎಂಥ ವೈಪರೀತ್ಯವನ್ನು ತಂದಿತಲ್ಲಾ ಎಂದು ನಿಟ್ಟುಸಿರಿಟ್ಟರು. ಕಂದನಿಗಾಗಿ ದುಃಖಸಿದರು. ಕೋಣೆಯಲ್ಲಿ ಮಗ ರಾಮಚಂದ್ರ ರೋಗದಿಂದ ತತ್ತರಿಸಿ ಹೋಗುತ್ತಿದ್ದಾನೆ. ಇವೆಲ್ಲದರ ಜೊತೆಗೆ ಬೇನೆ ತನ್ನನ್ನು ಹಣ್ಣುಗಾಯಿ ಮಾಡಿಬಿಟ್ಟದೆ ತಾನು ಬಿದ್ದಲ್ಲಿಯೇ ತೊಳಲಾಡುತ್ತಿದ್ದೇನೆ. ಯಾರನ್ನಾದರೂ ಕರೆಯೋಣವೆಂದರೆ ಎದ್ದು ಹೋಗಲಿಕ್ಕಾಗದು. ಸುಮ್ಮನೇ ಉಳಿಯೋಣವೆಂದರೆ, ಮಗು ಹೊರಳಾಡುತ್ತಿದ್ದಾನೆ. ಹೆಂಡತಿ ಶವವಾಗಿ ಬಿದ್ದಿದ್ದಾಳೆ. ತಾನು ಏಳಲಾರದ ಸ್ಥಿತಿ. ಇಂತಹ ಇವರ ರೋದನವನ್ನು ಕೇಳುವವರು ಯಾರು? ನೊಣದಿಂದ ಮುಸುಕಿರುವ ಹೆಂಡತಿಯ ಶವ ಕೊಳೆಯ ಹತ್ತಿದೆ; “ಭಗವಂತಾ, ಕಷ್ಟದಲ್ಲಿದ್ದಾಗ ಯಾರು ನಮ್ಮ ಜತೆ ಬರುವರು, ಯಾರೇನು ಮಾಡುವರು? ಈ ಹೆಣ್ಣಿ ನ ಶವವನ್ನು ಮಣ್ಣಿಗೆ ಹಾಕುವವರು ಯಾರು?” ಎಂಬೆಲ್ಲ ವಿಚಾರ ಬಂದು ನಾರಾಯಣ ಹೆಗಡೆಯವರ ಮನಸ್ಸು ಬೆಂದು ಬೇಗುದಿಗೊಂಡಿತು. ಈ ಘಟನೆ ನಾರಾಯಣ ಹೆಗಡೆಯವರ ಜೀವನದ ಪಥವನ್ನೇ ಬದಲಾಯಿಸಿ ಬಿಟ್ಟಿತು. ತಮ್ಮ ಹೃದಯದಾಳದಿಂದ ಬಂದ ಉತ್ತರ "'ದೇವ ದೇವನೆ ಬಲ್ಲ. ನಮ್ಮಿಂದೇನಾದೀತು? ಕೇವಲ ಪಾತ್ರಧಾರಿಗಳು ನಾವು'' ಎಂದು ಪರಮಾತ್ಮ ಹರಿಯನ್ನು ಶರಣೆಂದು ಬೇಡಿಕೊಂಡರು. ಮರುದಿನ ಬೆಳಗಾಗುತ್ತಲೇ ನೆರೆಮನೆಯ ಗೋವಿಂದ ಹೆಗಡೆಯವರು ನಾರಾಯಣ ಹೆಗಡೆಯವರ ಮನೆಯ ಕಡೆ ತನ್ನ ಗಮನ ಹರಿಸಿದರು. ಹೆಗಡೆಯವರ ಮನೆ (ಬಾಗಿಲು ತೆರೆದೇ ಇತ್ತು.) ಒಳಗೆ ಹೋಗಿ ನೋಡಿದರೆ ನಿಶ್ಶಬ್ದ. ಆದರೂ ಅಲ್ಲಿ ನಿಶ್ಶಬ್ಧವಿಲ್ಲ. ನಿಶ್ಶ ಬ್ಬದಲ್ಲಿಯೇ ಒಂದು ತೆರನಾದ ಶಬ್ದ. ಇಬ್ಬ ರು ನಿಟ್ಟು ಸಿರು ಬಿಡುತ್ತಿರುವುದು. ಸೂರ್ಯನ ಬೆಳಕಿಗೆ ಸ್ವಲ್ಪ ಕಾಣಿಸುತ್ತಿದೆ. ಒಳಮನೆಯಲ್ಲಿ ಒಂದೆಡೆಯಲ್ಲಿ ಯಾರೋ ಬಿದ್ರು ಕೊಂಡಿದ್ದಾರೆ. ಆಗ ಗೋವಿಂದ ಹೆಗಡೆಯವರು. ಸೂಕ್ಷ್ಮ ವಾಗಿ ಗಮನಿಸುತ್ತ ಮನೆಯ ಒಳಗೆ ಕಾಲಿಟ್ಟರು. ಭಯಾನಕವೂ, ಹೃದಯವಿದ್ರಾವಕ "ದೃಶ್ಯವೂ ಅವರಿಗೆ ಗೋಚರವಾಯಿತು. ವಿಧಿಯ ಆಟದಿಂದ ನಿರ್ಮಾಣಗೊಂಡ ಆ ದೃ ಶ್ಯವನ್ನು ನೋಡಿದವರೇ ಇನ್ನೂ ಹತ್ತಿರ ಹೋಗಿ ನೋಡಿದರು. ಮೊದಲು ನಾರಾಯಣ ಹೆಗಡೆ ಮತ್ತು ರಾಮಚಂದ್ರ ಇಬ್ಬರಿಗೂ ಸ್ವಲ್ಪ ಉಪಚಾರ ಮಾಡಿ ಆಚೆ ನೋಡುತ್ತಾರೆ: ಹೆಣ್ಣುಜೀವದ ಪ್ರಾಣಪಕ್ಷಿ ಯಾವಾಗಲೋ ಹೊರಟು ಹೋಗಿದೆ. ತನ್ನ ಮನಸ್ಸು ಗಟ್ಟಿ ಮಾಡಿಕೊಂಡ ಗೋವಿಂದ ಹೆಗಡೆಯವರು ವಿಷಯವೆಲ್ಲವನ್ನು ತಿಳಿಸಬೇಕೆಂದು ಜಾಗನಳ್ಳಿಗೆ ಹೋದರು. ಮಾತೆ ಭಾಗೀರಥಿಗೆ ಎಲ್ಲ ವಿಷಯವನ್ನೂ ತಿಳಿಸಿದರು. ಕರುಣೆ ತುಂಬಿಬಂದ ಭಾಗೀರಥಿಯು ಗೋವಿಂದ ಹೆಗಡೆಯವರೊಂದಿಗೆ ತಾನೂ ಬಂದಳು. ತಟ್ಟೀಕೈಯನ್ನು ಸೇರಿದವಳೇ, ಗೋವಿಂದ ಹೆಗಡೆಯವರ ಹತ್ತಿರ ತಮ್ಮ ಸಹಾಯಕ್ಕೆ ಬರುವಂತೆ ಬೇಡಿಕೊಂಡಳು. ಮೊದಲೇ ತನ್ನ ಪತಿದೇವರು ಗತಿಸಿ ತಿಂಗಳಾಗಿರಲಿಲ್ಲ. ಮನಸ್ಸಿನಲ್ಲಿ ವ್ಯಥೆ ತುಂಬಿಕೊಂಡಿದೆ. ಸೊಸೆಯ ಪ್ರಾಣಪಕ್ಷಿ ಹಾರಿದಮೇಲೆ ಆ ಮುದುಕಿಯರೂ ಇವರನ್ನು ಬಿಟ್ಟು ಹೋಗಿದ್ದು ಅವಳಿಗೆ ಸ್ವಲ್ಪ ಖೇದವನ್ನುಂಟು ಮಾಡಿದರೂ, ಸಹನಾಮಯಿಯಾಗಿ ಶಾಂತಳಾಗಿ, ತನ್ನೆಲ್ಲ ಶಕ್ತಿಯನ್ನುಪಯೋಗಿಸಿ ಮಗ-ಮೊಮ್ಮಗ ಇವರನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕೆಂದು ಶತಾಯ-ಗತಾಯ ಪ್ರಯತ್ನ ಮಾಡಿದಳು. (ಇತರರ ಸಹಾಯದಿಂದ ಸೊಸೆಯಾದ ಲಕ್ಷ್ಮಿಯ ದೇಹಕ್ಕೆ ಅಂತ್ಯಸಂಸ್ಕಾರ ಮಾಡಿಸಿದಳು.) ಮಕ್ಕಳಿಗೆ ಬಿಸಿಬಿಸಿ ನೀರು ಮಾಡಿ ನೀಡಿದಳು. ಅಜ್ಜಿಯ ಮಡಿಲಿನಲ್ಲಿ ಕಂದನು ಕಣ್ಣೀರಿಡುತ್ತ ಇರುವಾಗ ಆ ಮಾತೆಯ ಹೃದಯ ತಲ್ಲಣಿಸಿತು. ' ಮಗಾ, ಅಜ್ಜಿ ಇದ್ದೇನೆ ಹೆದರಬೇಡ ' ಎಂದು ಆತನ ಕೈ ಹಡಿದು ಮುದ್ದಿಸಿದಳು. ಮಗ ನಾರಾಯಣನ ಉಲ್ಬಣವಾದ ಗಾಯಗಳಿಗೆ ಮದ್ದನ್ನ ಹಚ್ಚಿ ಸೇವೆ ಮಾಡಿದಳು. ಔಷಧಿ ಉಪಚಾರ ಮಾಡಿ ಇಬ್ಬರನ್ನೂ ಬದುಕಿಸಿಕೊಂಡಳು. ಭಾಗೀರಥಿಯು ತನ್ನ ಶಕ್ತಿಯಿಂದ ನಾರಾಯಣ ಮತ್ತು ರಾಮಚಂದ್ರ ಇವರಿಂದ ಮುಂದೆ ಲೋಕ ಕಲ್ಕಾಣವಾಗುವುದೆಂದೇ ಇವರನ್ನು ಕಾದುಕೊಂಡ ನೀಡಿದಳೇನೋ. ನಾರಾಯಣ ಹೆಗಡೆಯವರ ಮಸಸ್ಸು ಸಂಪೂರ್ಣ ಸಂಸಾರದಿಂದ ವಿಮುಖವಾಗಿತ್ತು. ಮೊದಲಿನಂತೆ ಅತಿ ಉತ್ಸುಕತೆಯಿಂದ ಕೆಲಸ ಮಾಡುವ ಪರಿಸ್ಥಿ ತಿಯಲ್ಲಿರಲಿಲ್ಲ. ನಾರಾಯಣ. ಹೆಗಡೆಯವರ ಮನಸ್ಸುಮಾತ್ರ ಐಹಿಕ ಭೋಗದ ವಸ್ತು ಗಳ ಕಡೆ ಇರದೆ. ಪರಮಾತ್ತ ನ ಕಡೆ ಸರಿದಿತ್ತು ; ಆಧ್ಯಾತ್ಮದ ಕಡೆ ತಿರುಗಿತ್ತು. ಹೀಗಾಗಿ ಐದು ವರ್ಷದ ರಾಮನ ಲಾಲನೆ-ಪಾಲನೆಯು ಅಜ್ಜಿಯಾದ ಭಾಗೀರಥಿ ಹಾಗೂ ಚಿಕ್ಕಪ್ಪ ಕೇಶಪ್ಪ ಇವರ ಮೇಲೆ ಬಿತ್ತು. ರಾಮಾಯಣ, ಶಿವ ಪುರಾಣ, ಕೃಷ್ಣ ಚರಿತೆ ಇವನ್ನೆಲ್ಲ ಓದುವುದರ ಜೊತೆ ಅಧ್ಯಾತ್ಮ ಸಂಹಿತೆ ಅವರಿಗೆ ಜೀವನ ಸಂಗಾತಿಯಾಗಿತ್ತು. ಸಾಧು ಸಂತರ ಸಹವಾಸ ಹಾಗೂ ಧ್ಯಾನ ಇವರಿಗೆ ಪ್ರಿಯವಾಯಿತು.
ರಾಮನಿಗೀಗ 6 ವರ್ಷ ಕಳೆದು 7ನೇ ವರ್ಷ ಪ್ರಾರಂಭ (1936-37). ಮನೆಯಿಂದ 1-2 ಮೈಲಿ ನಡೆದೇ ಸರಕುಳಿಯ ಶಾಲೆಗೆ ಹೋಗಬೇಕಾಗಿತ್ತು. ಸರಕುಳಿಯ ಶಾಲೆಯಲ್ಲಿ ರಾಮಚಂದ್ರನ ಹೆಸರು ದಾಖಲಾಯಿತು. ನೆರೆಮನೆಯ ಗಣಪತಿಯು ರಾಮನ ಓರಿಗೆಯವ. ರಾಮನು ತನ್ನ ಜತೆಯ ಮಕ್ಕ ಳೊಂದಿಗೆ ಶಾಲೆಗೆ ಹೋಗಿ ಬರಲಾರಂಭಿಸಿದ, ವಿದ್ಯಾರ್ಥಿ ಜೀವನ ರಾಮನಿಗೆ ಹಿತವೆನಿಸಿತು. ಶಾಲೆಯಿಂದ ಮನೆಗೆ ಬಂದವನೇ ತಂದೆಯ ದೇವಪೂಜೆಯ ಕೆಲಸದಲ್ಲಿ ತಾನೂ ನೆರವಾಗುತ್ತಿದ್ದ. ಸ್ನಾನ ಮುಗಿಸಿ, ಮಡಿ ಹಚ್ಚಿ, ಬಾಲಕ ನಿಂತನೆಂದರೆ ಬಾಲ-ಧ್ರುವ ಕೈಮುಗಿದು ನಿಂತಂತೆ ಕಾಣುತ್ತಿತ್ತು. ಅದನ್ನು ನೋಡಿದ ಅಜ್ಜಿಯ ಕಣ್ಣಿನಲ್ಲಿ ಆನಂದಾಶ್ರು ತುಂಬಿಬರುತ್ತಿತ್ತು. ಈಗ ನಾರಾಯಣ ಹೆಗಡೆಯವರಿಗೆ ಯಾವದೇ ಕಷ್ಟದ ಕುರಿತೂ ಚಿಂತೆಯಿಲ್ಲ. ತಮ್ಮ ಜೀವನದ ಮುಂದಿನ ಮಾರ್ಗ ಅವರನ್ನು ಕೈಬೀಸಿ, ಕರೆಯುತ್ತಿತ್ತು. ಸಂಸಾರ ಬಿಟ್ಟು ಅಧ್ಯಾತ್ಮದ ಕಡೆ ಮನಸ್ಸು ಸಂಪೂರ್ಣವಾಗಿ ನೆಟ್ಟಿ ತ್ತು. ಇವರ ಸಮೀಪವರ್ತಿಗಳು ಇವರ ಪ್ರವೃತ್ತಿಯನ್ನು ನೋಡಿ ಗುರುವಿನಲ್ಲಿ ಕ್ಷ ಎಲ್ಲ ಗುಣಗಳು ಇವರಲ್ಲಿ ಸಮ್ಮಿಳಿತವಾಗಿವೆಯೆಂದರಿತು ಪ್ರೀತಿಯಿಂದ 'ಗುರುನಾಥ' ಎಂಬುದಾಗಿ ಕರೆಯಹತ್ತಿದರು.
ರಾಮಚಂದ್ರ ತನ್ನ ಓರಗೆಯ ಮಕ್ಕಳೊಂದಿಗೆ ಆಟ- ಪಾಠಗಳಲ್ಲಿ ತೊಡಗುತ್ತಿದ್ದ. ತನ್ನ ಸಜ್ಜನಿಕೆಯಿಂದ ಶಾಲೆಯ ಮಕ್ಕಳೊಂದಿಗೆ, ಸಂಬಂಧಿಕರಲ್ಲಿ ತಾನು ತನ್ನ ವಿಶೇಷತೆಯ ಛಾಪನ್ನು ಒತ್ತಿದ್ದ. ಸಜ್ಜನಿಕೆಯ ಸಾಕಾರಮೂರ್ತಿ ಎಂದು ಹೆಸರು ಪಡೆದಿದ್ದ. ಮನೆಯಲ್ಲಿ ನಡೆಯುವ ಭಜನೆ, ದೇವನಾಮ ಸ್ಮರಣೆ ಇವು ಹುಡುಗ ರಾಮನ ಮನಸ್ಸಿ ನ ಮೇಲೆ ತುಂಬಾ ಪರಿಣಾಮವನ್ನುಂಟುಮಾಡಿದವು. ಶಾಲೆಯಲ್ಲಿ ಸಹ ತನ್ನ ಓದಿನಲ್ಲಿ ಮುಂದಿದ್ದ ಈತ ಅತ್ಯಂತ ಚುರುಕು ವಿದ್ಯಾರ್ಥಿಯಾಗಿದ್ದರೂ ಸಭ್ಯರೂ ಆದ ಗೆಳೆಯರನ್ನೇ ಆರಿಸಿ ಅವರ ಸಹವಾಸ ಮಾಡುತ್ತಿದ್ದ ಶಾಲಾ ಬಾಲಕರೂ ಈತನ ತೀಕ್ಷ ಮತಿಗೆ ನಿಬ್ಬೆರಗಾಗಿದ್ದರು. ತಂದೆಯ ಸಜ್ಜನಿಕೆ, ಸುಸಂಸ್ಕೃತ ಸಂಪ್ರದಾಯಗಳು, ಜೀವನಕ್ರಮ ಇವು ಮಗು ರಾಮನಲ್ಲಿ ಈಗಲೇ ಎದ್ದು ಕಾಣುವಂತಿತ್ತು. ಮನೆಯ ಅಕ್ಕಪಕ್ಕದವರು, ಹೋಗಿ ಬರುವವರು ಇವರೆಲ್ಲ ಈ ಬಾಲಕನನ್ನು ಪ್ರೀತಿಯಿಂದ 'ರಾಮನಾಥ' ಎಂಬುದಾಗಿ ಕರೆಯಹತ್ತಿದರು. ರಾಮಚಂದ್ರ ಜಾಗನಳ್ಳಿಗೆ ಹೋಗಿಬರುತ್ತಿದ್ದ. ಆಲ್ಮನೆ, ಕಾನಗೋಡು ಗೋದಾವರಿಯ ಮನೆ(ಅತ್ತೆಮನೆ) ಗಣಪತಿ ದೇಗುಲ, ಶಾಲೆಗಳನ್ನೆಲ್ಲ ತನ್ನ ಆಡುಂಬೊಲವನ್ನಾಗಿ ಮಾಡಿಕೊಂಡು ಆಟ-ಪಾಠಗಳಲ್ಲಿ ತಲ್ಲೀನನಾಗಿರುತ್ತಿದ್ದ. ತನ್ನ ಸಂಬಂಧಿಗಳೆಲ್ಲರ ಮನವನ್ನೂ ಗೆದ್ದಿದ್ದ ಹಾಗೂ ಬಹು ಅಚ್ಚುಮೆಚ್ಚಿನವಾಗಿದ್ದ. ಇತರರಿಗೆ ಸಹಾಯ ಮಾಡುವುದು, ಬಡವರನ್ನು ಕಂಡು ಸಹಾನುಭೂತಿ ತೋರಿಸುವುದು ಮುಂತಾದ ಗುಣಗಳೆಲ್ಲ ಈತನಲ್ಲಿ ಬಾಲ್ಯದಲ್ಲಿ ಯೇ ವ್ಯಕ್ತವಾಗುತ್ತಿದ್ದವು. ಸದ್ಗುಣ, ಗುರುಭಾವನೆ, ದೇವತಾಭಾವನೆ ಇವನ್ನು ಗುರುತಿಸಿದ ಜನ ಅವನನ್ನು ಕೊಂಡಾಡಿದರು. ೪ನೇ ಇಯತ್ತೆಯಲ್ಲಿ ಓದುತ್ತಿ ರುವಾಗ ಕೀರ್ತನೆ, ಭಜನೆ, ಯಕ್ಷಗಾನ ಇವುಗಳನ್ನು ಬಹು ಆಸಕ್ತಿಯಿಂದ ನೋಡುವುದು, ಮರುದಿವಸ ಗೆಳೆಯರ ಹತ್ತಿರ, ಅಜ್ಜಿಯ ಮುಂದೆಲ್ಲ ತಲೆಗೆ ಮುಂಡಾಸು ಸುತ್ತಿ, ಭಾವಪೂರ್ಣವಾಗಿ ಭಾಗವತಿಕೆ ಮಾಡುವುದು, ಯಕ್ಷಗಾನ ಪಾತ್ರಗಳನ್ನು ಮಾಡಿ ತೋರಿಸುವುದು ಇವನಿಗೆ ಒಂದು ತಮಾಷೆಯ ಸಂಗತಿಯಾಯಿತು. ಗುರುನಾಥರು ಪೂಜೆಗೆ ಅಥವಾ ಧ್ಯಾನದಲ್ಲಿ ತೊಡಗಿರುವುದನ್ನು ನೋಡಿದ ತಾನೂ ಸಹ ತಂದೆಯಂತೆ ಲಂಗೋಟಿಯನ್ನು ಧರಿಸಿಕೊಂಡು, ದೇವರ ಧ್ಯಾನದಲ್ಲಿ ಮಗ್ನನಾಗಿ ಕುಳಿತುಕೊಂಡು ಬಿಡುತ್ತಿದ್ದ. ತಂದೆಯಂತೆ ತನಗೂ ಒಂದು ಮಣೆಯನ್ನು ಮಾಡಿಸಿಕೊಂಡು ತಾನೂ ತಂದೆಯ ಪಥವನ್ನೆ ಹಿಡಿಯುವ ಹಂಬಲವನ್ನು ತೊಟ್ಟಿದ್ದ. ಬಾಲ್ಯದಲ್ಲಿಯೇ ಇವನಿಗೆ ಇರುವ ಆ ಧ್ಯಾನಮಗ್ನತೆ ತಂದೆಯ ಕಣ್ಣಿನಲ್ಲಿ ಆನಂದಬಾಷ್ಪಗಳನ್ನು ಬರಿಸಿದ್ದವು. ಶಾಲೆಗೆ ರಜೆ ಬಿದ್ದಾಗ ಹತ್ತಿರದ ಹಳ್ಳಿಗಳಲ್ಲಿಯೇ ಅಲ್ಲದೆ, ಶಿರಸಿಯ ಸುತ್ತಮುತ್ತ ಎಲ್ಲಿ ಪೌರಾಣಿಕ ಯಕ್ಷಗಾನಗಳು ಆದರೂ ಅದನ್ನು ನೋಡಿ ನಲಿಯುತ್ತಿದ್ದ. ರಜಾದಿನಗಳಲ್ಲಿ ತನ್ನ ವಿದ್ಯಾಭ್ಯಾಸದ ಕಡೆಗೂ ಗಮನ ಹರಿಸಿ, ಆದರ್ಶ ವಿದ್ಯಾರ್ಥಿಯೆನಿಸಿದ್ದ ಆಗಲೇ ಮಕ್ಕಳ ಯಕ್ಚಗಾನದ ಮೇಳವೊಂದು ತಯಾರಾಗಿತ್ತು. ಮರದ ಕೊರಡು (ದುಂಡಾಕೃತಿಯ ಸೆ ಮೃದಂಗ, ಕಲ್ಲಿನ ಬಣ್ಣ, ಅಲ್ಲದೆ ಮಸಿಯನ್ನು ತೇದು (ಕಲ್ಲಿನ ಮೇಲೆ ತೇಯ್ದು) ಅದನ್ನು ಹಚ್ಚಿ ಕೊಂಡು, ತಲೆಗೆ ಮುಂಡಾಸ ಇಲ್ಲವೆ ರಟ್ಟಿನ ಕಿರೀಟ ಇವುಗಳನ್ನು ಧರಿಸಿ ದೊಡ್ಡ, ಕೋಲನ್ನೆ ಬಿಲ್ಲಾಗಿಸಿ, ಚಿಕ್ಕ ಕೋಲನ್ನೇ ಬಾಣವಾಗಿ ಹಿಡಿದು ಬಿಲ್ಲುಗಾರನ ಪಾತ್ರ ಮಾಡುವದು, ಬಣ್ಣ ಹಚ್ಚಿಕೊಂಡು, ಅಬ್ಬರ ಬಿಡ್ಡಿಗೆ ಡಬರಿ(ಡಬ್ಬಿ)ಯ ಚಂಡೆಯ ಸಪ್ಪಳದೊಂದಿಗೆ ಯಕ್ಷ ಕ್ಹಗಾನದ ಪಾತ್ರಗಳು ಮಾವಿನ ಪಲ್ಲ ವದಿಂದ ಅಲಂಕೃತವಾದ ರಂಗಸ್ಥಳಕ್ಕೆ ಬರುವ ಆ ದೃಶ್ಯ ಕೇವಲ ಚಿಕ್ಕಮಕ್ಕಳಲ್ಲ ಷ್ಟೇ ಅಲ್ಲ, ದೊಡ್ಡವರು ಹಾಗೂ ಹೆಚ್ಚಾ ಗಿ ಅಜ್ಜಯಾದ ಭಾಗೀರಧಿಗೆ ಇದು ಆಪ್ಯಾಯಯಮಾನವಾಗಿತ್ತು. ಶಾಲಾ ಕಲಿಕೆಯಲ್ಲೂ ಈ ಚೂಟಿ ಹುಡುಗ ನಾಲ್ಕನೇ ಇಯತ್ತೆಯಲ್ಲಿ ಒಳ್ಳೆಯ ಗುಣಗಳನ್ನು ಪಡೆದು ತೇರ್ಗಡೆಯಾದ. ವಿದ್ಯೆ-ಬುದ್ಧಿ ಗಳಲ್ಲಿ ರಾಮನದೇ ಮೇಲುಗೈ. ಸಜ್ಜನಿಕೆಯ ಮೂರ್ತಿ, ವಿನಯಸಂಪನ್ನನಾದ ಮಗು, ಸಜ್ಜನರ ಸ್ನೇಹವನ್ನೂ ಸಂಪಾದಿಸಿದ್ದ. ನಾಲ್ಕನೇ ಇಯತ್ತೆ ಮುಗಿದಾಗ ಸರಕುಳಿ ಶಾಲೆ ಮುಗಿಸಿ (ಆಗಿನ ಕಾಲದಲ್ಲಿ ಸರಕುಳಿಯಲ್ಲಿ 4ನೇ ಇಯತ್ತೆ ವರೆಗೆ ಮಾತ್ರವಿತ್ತು.) ಮುಂದಿನ ಓದಿಗಾಗಿ ರಾಮಚಂದ್ರ ಕಲ್ಕುಣಿ ಶಾಲೆಗೆ ಹೋಗುವುದು ಎಂದು ತೀರ್ಮಾನವಾಗಿತ್ತು. ಕಲ್ಕುಣಿ ರಾಮಕೃಷ್ಣ ಹೆಗಡೆಯವರು ಗುರುನಾಥರಿಗೆ ಪರಿಚಯದವರಾಗಿದ್ದರಿಂದ ರಾಮನಾಥ ಕಲ್ಕುಣಿ ಶಾಲೆಯಲ್ಲಿ 5ನೇ ಇಯತ್ತೆಯ ವ್ಯಾಸಂಗ ಪ್ರಾರಂಭಿಸಿದ. ಶಾಲೆಗೆ ಕಾಲಿಟ್ಟ 4-6 ದಿವಸಗಳಲ್ಲಿಯೇ ಈತನ ವಿನಯಸಂಪನ್ನ ನಡತೆಯನ್ನು ನೋಡಿದ ಶಿಕ್ಬಕರು ಇವನನ್ನು ತನ್ನ ಒಳ್ಳೆಯ ಶಿಷ್ಕರ ಸಾಲಿನಲ್ಲಿ ಸೇರಿಸಿಕೊಂಡಿದ್ದರು. ಬಾಲಕನ ವಿದ್ಯಾಭ್ಯಾಸದ ಕಲಿಕೆ ಅವರಿಗೆ ಅತಿ ಮುದವನ್ನು ತಂದಿತ್ತು.
14ರ ಹರೆಯದಲ್ಲಿ ಸ್ವಾಮೀಜಿ
ಈಗ ರಾಮನಾಥನಿಗೆ 12ನೇ ವರ್ಷ (1942-43). ಗುರುನಾಥ ಮಗನಿಗೆ ಉಪನಯನ ಮಾಡಿ ತಮ್ಮ ಜವಾಬ್ದಾರಿ ನಿಭಾಯಿಸಲು ಯೋಚಿಸಿದರು. ರಾಮನಿಗೆ ಉಪನಯನ ಮಾಡಬೇಕು ಎಂಬ ಕುರಿತು ತಯಾರಿ ನಡೆಯಿತು. ನೆಂಟರಿಷ್ಟರನ್ನೆ ಲ್ಲ ಕರೆದರು. ರಾಮನಾಥನಿಗೆ ಸುದ್ದಿ ಮುಟ್ಟಿಸಿದರು. ವೃಷ ಸಂವತ್ಸರದ (ವೃಷ-ಧರ್ಮ) ಶುಭಯೋಗದಂದು ವೇದಾಧ್ಯಯನ ಸಂಪನ್ನರಾದ ವಿಪ್ರರು ವೇದಘೋಷವನ್ನು ಮಾಡುತ್ತಿದ್ದಂತೆ 'ಬ್ರಹ್ಮ ವರ್ಚಸ್ವೀ ಭವ' ಎಂದು ಅಕ್ಬತೆಯನ್ನು ವಟುವಿಗೆ ಎರಚಿದರು. ರಾಮಚಂದ್ರಪ್ರಭುವಿಗೆ ಗುರುನಾಥರಿಂದ ಬ್ರಹ್ಮೋಪದೇಶವಾಯಿತು ಮನೆಯ ಸತ್ಸಂಪ್ರದಾಯದಂತೆ ಗುರುಕುಲದಲ್ಲಿ ಪುರೋಹಿತರಿಂದ ಸಂಧ್ಯಾ ವಂದನೆಯ ಮಂತ್ರ, ದೇವಪೂಜೆ ಮಂತ್ರಗಳನ್ನು ರಾಮನಾಥ ಕಲಿತುಕೊಂಡನು. ಶಾಲೆಗೆ ಹೋಗುವ ವಿದ್ಯಾರ್ಥಿಯಾದ್ದರಿಂದ ತನ್ನ ಶಾಲಾಭ್ಯಾಸದ ಕಡೆಗೂ ಗಮನ ಹರಿಸಬೇಕಾಯಿತು. ತನ್ನ ಐದನೇ ಇಯತ್ತೆ ಯ ವಿದ್ಯಾಭ್ಯಾಸ ಮುಂದುವರಿಸಲು ರಾಮಚಂದ್ರ ಪುನಃ ರಾಮಕೃಷ್ಣ ಹೆಗಡೆಯವರ ಮನೆ ಸೇರಿದ. ಆ ವರ್ಷ ತೇರ್ಗಡೆಯಾದ ನಂತರ ರಾಮನಾಥನನ್ನು ಶೀಗೇಹಳ್ಳಿಯ ಗೌರಿ ಕೇಶವ ಹೆಗಡೆ -ಸಭ್ಯ ಗೃಹಸ್ಥರು- ತನ್ನ ಮನೆಯಲ್ಲಿ ಇರಿಸಿಕೊಂಡು ಶಾಲೆಯ ಕಲಿಕೆಯ ಜವಾಬ್ದಾರಿಯನ್ನು ನೋಡಿಕೊಂಡರು. ಈ ಛಾತ್ರನು ತನ್ನಿಷ್ಠನಾಗಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದ ರೀತಿಯನ್ನು ಕಂಡು ಮನೆಯ ಹೆಗಡೆ ಸಹ ಸಂತುಷ್ಟರಾಗಿ ಪ್ರೀತಿಯಿಂದ ಕಂಡು ರಾಮನ ಕಲಿಕೆಗಾಗಿ ತಾವೂ ಬಹು ಶ್ರಮಿಸಿದರು. ಆ ವರ್ಷ ಶಾಲೆಯಲ್ಲಿ ತೇರ್ಗಡೆಯಾದ ರಾಮನಾಥನು ಅಲ್ಲೇ ಸಮೀಪದ ಶೀಗೇಹಳ್ಳಿಯಲ್ಲಿ ನಿಂತು ವೇದಮಂತ್ರ, ಪುರುಷಸೂಕ್ತ ಮೊದಲಾದ ಮಂತ್ರಗಳನ್ನು ಕುರಿತು ವೇದವಿದ್ಯೆ ಗಳ ಪರಿಚಯ ಮಾಡಿಕೊಂಡಿದ್ದ. ಆಗಾಗ ತಟ್ಟೇಕೈಗೆ ಬಂದು ತಂದೆ ಹಾಗೂಅಜ್ವಿಯರನ್ನು ಕಂಡು ನಮಸ್ಕರಿಸಿ ಅವರಿಂದ ಶುಭ ಹಾರೈಕೆ ಪಡೆದುಹೋಗುತ್ತಿದ್ದ. ರಾಮನಾಥನಿಗೆ ದೇಗುಲಗಳನ್ನೆಲ್ಲ ಒಮ್ಮೆ ಸಂದರ್ಶಿಸಿ ಬಂದು ಬಿಡೋಣ ಎಂಬ ತವಕ. ತಾನು ಓದಿದ ಗಾಯತ್ರಿ, ಪುರುಷಸೂಕ್ತ, ಮಂತ್ರಾದಿಗಳನ್ನೆಲ್ಲ ತನ್ನ ಮನಃಪಟಲದಲ್ಲಿ ಇಟ್ಟುಕೊಂಡು, ಆಗಾಗ ಮನನ ಮಾಡುತ್ತ, ಆ ಮಂತ್ರಗಳ ಅರ್ಥಗಳ ಕುರಿತು ತನ್ನೊಳಗೇ ಮಂಥನ ಮಾಡುತ್ತ, ತಿಳಿದವರಲ್ಲಿ ಕೇಳಿ ಇನ್ನೂ ಹೆಚ್ಚಿನ ವಿಷಯ ಸಂಗ್ರಹಿಸುತ್ತ ಇರುತ್ತಿದ್ದ. ನೆಲೆಮಾವು ಮಠಕ್ಕೆ ಹೋಗಿ, ಗುರುದರ್ಶನ ಮಾಡಿ. ಗೋಕರ್ಣ ಮಹಾಬಲೇಶ್ವರನ ದರ್ಶನ ಮಾಡಿ, ಗುರು ದೇವರ ಕೃಪೆಗೆ ಪಾತ್ರನಾಗುತ್ತಿದ್ದ.
ತಂದೆ ನಾರಾಯಣ (ಗುರುನಾಥರು) ಸನ್ಯಾಸಾಶ್ರಮ ಸ್ವೀಕಾರ: ದೇವರ ಸನ್ನಿಧಿಯಲ್ಲಿ ಪೂಜಾ ಕೈಂಕರ್ಯಮಾಡಿ ದೇವಸೇವೆ ಮಾಡತೊಡಗಿದ್ದ ರಾಮನಾಥನು ತಂದೆಯಾದ ಗುರುನಾಥರು ಯೋಗವಾಸಿಷ್ಠ, ಅಧ್ಯಾತ್ಮ ರಾಮಾಯಣ ಮೊದಲಾದವನ್ನು ಓದಿ ವಿವರಿಸಿದ್ದನ್ನು ಬಾಲ್ಯದಲ್ಲೇ ಕೇಳಿ ತಿಳಿದು, ಮನನ-ಧ್ಯಾನಗಳಿಂದ ಅಭ್ಯಸಿಸುತ್ತ, ತೀರ್ಥಕ್ಷೇತ್ರ ಸಂದರ್ಶನದಲ್ಲಿ ಪರಮಾತ್ಮನಲ್ಲಿ ಮನವಿಟ್ಟು, ಸತ್ಸಂಕಲ್ಪ ಹೊಂದಿದವನಾದನು. ಪ್ರಫುಲ್ಲಿತ ಮನಸ್ಸಿನಿಂದ ಮನೆಗೆ ಹಂದಿರುಗಿದನ್ನು ನೋಡಿದ ಅಜ್ಜಿ ಭಾಗೀರಥಿಯು, ತನ್ನ ಮೊಮ್ಮಗ ಸದಾ ಏನೋ ಧ್ಯಾನದಲ್ಲಿ ಮುಳುಗಿ, ರಸಾನುಭವ ಹೊಂದ ತೇಜೋಮಯನಾಗಿದ್ದನ್ನು ಕಂಡು ಪರಮಾತ್ಮನ ಕಡೆ ಮನ ಲೀನವಾಗಿದೆಯೆಂದು ತಿಳಿದಳು. ರಾಮನಾಥ ಅತ್ತ ತೀರ್ಥಕ್ಷೇತ್ರ ಸಂಚರಿಸುತ್ತಾ ದೇವರ ದರ್ಶನ ಮಾಡುತ್ತ ಲಿದ್ದಾಗ ಇತ್ತ ಒಂದು ದಿನ ತಂದೆ ಗುರುನಾಥ ಸನ್ಯಾಸಿಗುಂಡಿಯ ಕಡೆ ನಡೆದರು. ಅಲ್ಲಿ ವಸನಾದಿಗಳನ್ನು ತೊರೆದು ದಿಗಂಬರರಾಗಿ ಅಲೆದಾಡುತ್ತಾ ನದಿಯಲ್ಲಿ ಮಿಂದು ಸ್ಮಶಾನದಲ್ಲಿ ವಾಸ ಮಾಡುತ್ತ ನದೀತೀರ, ಗುಡ್ಡಬೆಟ್ಟಗಳಲ್ಲಿಯೇ ಇರುತ್ತಿದ್ದರು. ಗುರುನಾಥರು ಸದಾ ಅಧ್ಯಾತ್ಮದ ಗುಂಗಿನಲ್ಲಿಯೇ ಇರುತ್ತಿದ್ದರು. ನೀರಿನಲ್ಲಿ ಮುಳುಗುವದು, ನಂತರ ಎದ್ದು ಬಂದು ಧ್ಯಾನ ಮಾಡುವದು, ಪುನಃ ಸ್ನಾನ, ಧ್ಯಾನ ಹೀಗೆ ಮಾಡುತ್ತ ಎಷ್ಟೋ ದಿನಗಳು ಅತ್ತಲೇ ಉಳಿದರು. ಹಗಲು-ರಾತ್ರಿಯೆನ್ನದೆ, ಮಳೆ, ಬಿಸಿಲು, ಛಳಿ-ಗಾಳಿಯ ಪರಿವೆಯೇ ಇಲ್ಲದೆ, ಭೇದಭಾವವೇ ಇಲ್ಲದೇ ತಾವೊಬ್ಬರೇ ತಿರುಗಾಡುತ್ತಿದ್ದರು. ಗುರುನಾಥರು ಸನ್ಯಾಸಿಗುಂಡಿಯ ಹತ್ತಿರ ದಿಗಂಬರರಾಗಿ ಉಳಿಯುವ ವಿಷಯ ಸುತ್ತಲಿನ ಜನರಿಗೆಲ್ಲ ತಿಳಿದುಬಂತು. ಅವರ ಸಮೀಪವರ್ತಿಗಳಿಗೆಲ್ಲ ಕಸಿವಿಸಿಯಾಯಿತು. ಅಲ್ಲದೆ, ತಮಗೆ ಪುರಾಣ ಪ್ರವಚನದಿಂದ ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದ ಪುರಾಣಲೋಕದಲ್ಲಿ ವಿಹರಿಸುವಂತೆ ಮಾಡಿದ್ದ ಆ ಗುರುನಾಥನ ಕುರಿತಾಗಿ ಅವರಿಗೆಲ್ಲ ಅಪಾರ ಶ್ರದ್ಧೆ. ತಮ್ಮ ಲ್ಲಿ ಗೆಯಾರಾದರೂ ಸ್ವಾಮೀಜಿಯವರು ಬಂದರೆ ಈ ವಿಷಯವನ್ನು ತಿಳಿಸೋಣವೆಂದುಕೊಂಡಿದ್ದರು. ಆ ಸಮಯದಲ್ಲಿ ಒಂದು ದಿನ ಸರಕುಳಿ ದೇವಸ್ಥಾ ನದಲ್ಲಿ ನಡೆಯುವ ಚಂಡೀ ಹವನಕ್ಕೆ ಆಮಂತ್ರಿತರಾಗಿ ನೆಲೆಮಾವಿನ ಮಠಾಧೀಶರು ಬಂದಿದ್ದರು. ಅವರಲ್ಲಿ ಗುರುನಾಥರ ವಿಷಯ ತಿಳಿಸಿದಾಗ, ಗುರುನಾಥರ ಪರಿಚಯದವರ ಹತ್ತಿರ ಎರಡು ಕಾವಿ ವಸ್ತ್ರಗಳನ್ನು ಕೊಟ್ಟು ಕಳಿಸಿ ಗುರುನಾಥರಿಗೆ ದೊರಕುವಂತೆ ಮಾಡಿದರು. ಅದು ಮೈ ಮುಚ್ಚಿ ಕೊಳ್ಳಲು ಅನುಕೂಲವಾಯಿತು. ಆ ನಂತರದಲ್ಲಿ ಸಾಧಕರಾಗಿ ಮುಂದುವರಿದ ಗುರುನಾಥರಿಗೆ ಶ್ರೀಧರರ ದರ್ಶನ ಭಾಗ್ಯ ಸಿಕ್ಕಿತು ವರದಳ್ಳಿಗೆ ಹೋಗಿ ಕೆಲ ಸಮಯ ಗುರುಸೇವೆ ಕೈಕೊಂಡರು. ತೀರ್ಥಳ್ಳಿಗೆ ಹೋಗಿ ಅಲ್ಲಿ ವಾಸ ಮಾಡಿದರು. ಇವೆಲ್ಲ ಗುರುನಾಥರಿಗೆ ಅತಿ ಹಿತವಾಯಿತ್ತು. ರಾಮನಾಥನಿಗೆ 14-15ನೇ ವರ್ಷವಾಗುತ್ತಿದ್ದಂತೆ ಇತ್ತ ಗುರುನಾಥರು ತಮ್ಮ ಸಾಧನಾಪಥದಲ್ಲಿ ಮುಂದುವರಿದು ಸದಾ ಸರ್ವಾತ್ಮಕ ಭಾವನೆಯಲ್ಲಿ ಇರುವುದು, ಸಾಧು ಸಂತರ ಸಮಾಗವು ಇವುಗಳಲ್ಲಿಯೇ ತಮ್ಮ ಸಮಯವನ್ನು ವಿನಿಯೋಗಿಸುತ್ತಿದ್ದರು ಅಧ್ಯಾತ್ಮ ಸಾಧನೆಯಲ್ಲಿರುವ ಇವರ ಜೀವನಕ್ರಮದ ಕುರಿತು ತಾವು ತಿಳಿದುಕೊಂಡ ನೆಲೆಮಾವಿನ ಮಠಾಧೀಶರಾದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿಯವರು ಗುರುನಾಥರಿಗೆ ಒಂದು ಶುಭದಿನ ನೋಡಿ ಸನ್ಯಾಸದೀಕ್ಷೆಯನ್ನು ನೀಡಿದರು. ಸಹಜವಾಗಿಯೇ ಇವರಲ್ಲಿರುವ ಆನಂದವನ್ನು ನೋಡಿ ಸ್ವಾಮೀಜಿಯವರು 'ಸಹಜಾನಂದ ಅವಧೂತ' ಎಂಬುದಾಗಿ ನಾಮಕರಣ ಮಾಡಿದರು. ಅವಧೂತಸ್ವಾಮೀಜಿಯವರು ಭಕ್ತರ ಆಗ್ರಹದ ಮೇರೆಗೆ ಕೊಳಗಿಬೀಸಿಗೆ ಬಂದು, ಮಾರುತಿ ಗುಡಿಯಲ್ಲಿ ವಾಸ್ತವ್ಯ ಮಾಡಿದರು.
(ಗುರುನಾಥರು) ಸಹಜಾನಂದ ಅವಧೂತ ಸ್ವಾಮೀಜಿ
ಇವರಲ್ಲಿರುವ ಆ ಧೀಶಕ್ತಿಯನ್ನು, ಅವಧೂತತ್ವವನ್ನು ಕಂಡ ಸಜ್ಜನರು. ತಾಮುಂದು, ನಾಮುಂದು ಎಂದು ಸೇವೆಗೆ ಸಿದ್ಧರಾದರು. ಅವರನ್ನು ಕರೆದು ಪಾದಪೂಜೆ, ಭಿಕ್ಷೆ ಇವನ್ನೆಲ್ಲ ಭಕ್ತಿಪುರಸ್ಸರವಾಗಿ ನೆರವೇರಿಸಿ ತಮ್ಮ ಬಾಳಿನಲ್ಲಿ ಬೆಳಕನ್ನೂ ಭಾಗ್ಯವನ್ನೂ ಪಡೆದುಕೊಂಡರು. ಅವಧೂತರು ಕೆಲಕಾಲ ಕೊಳಗಿಬೀಸನಲ್ಲಿ ನಿಂತು, ತಾವು ಗೋಕರ್ಣಕ್ಕೆ ಹೋಗಿ ಮಹಾಬಲೇಶ್ವರನ ದರ್ಶನಮಾಡಿದರು. ಯಾಣದೊಳಗೆ ಭೈರವೇಶ್ವರನ ದರ್ಶನ ಪಡೆದರು. ಉತ್ತರ ಭಾರತ, ದಕ್ಷಿಣ ಭಾರತಗಳ ಯಾತ್ರೆ ಕೈಗೊಂಡು ಮಹಾಮಹಾ ದೇವಾಲಯಗಳನ್ನೆಲ್ಲ ಸಂದರ್ಶಿಸಿ, ದೇವ-ದೇವತೆಗಳನ್ನೆಲ್ಲ ಪೂಜಿಸಿ, ತಿರುಗಿ ಬರುವಾಗ ದತ್ತಗುರು ಶ್ರೀಧರಸ್ವಾಮೀಜಿಯವರನ್ನು ಸೇವಿಸಿ, ಅವರೊಡನೆ ಕೆಲಕಾಲ ಇದ್ದು, ಪುನಃ ಕೊಳಗೀಬೀಸಿಗೆ ಬಂದರು. ಬರುವ ಭಕ್ತರ ಸಂಖ್ಯೆ ಜಾಸ್ತಿಯಾಗುತ್ತಿದೆ. ತಾವು ನಿಂತ ಮಾರುತಿ ಗುಡಿ ಸಹ ಚಿಕ್ಕದಿದೆ ಎಂದು ಭಾವಿಸಿ, ದೇಗುಲ ವಿಸ್ತಾರದ ಕೈಂಕರ್ಯಕ್ಕೆ ತಮ್ಮನ್ನು ಅಣಿಗೊಳಿಸಿದರು. ಕೇವಲ ಒಂದು ಅಂಕಣದ ಜಾಗೆ. ಒಳ ಆಯದ ಆ ದೇಗುಲವನ್ನು ವಿಸ್ತಾರ ಮಾಡಿದರು. ಸುತ್ತಲೂ ಚೌಕಿ, ಎದುರಿಗೆ ಒಂದು ಹಜಾರ ಕಟ್ಟಿಸಿದರು. ಗೋಶಾಲೆ ನಿರ್ಮಾಣವಾಯಿತು. ಮಾರುತಿ ದೇವಾಲಯದ ಸಮೀಪ ಗದ್ದೆಬೈಲಿನಲ್ಲಿ ದೊಡ್ಡದಾದ ಕೆರೆ (ಸ್ನಾನದ ಕೊಳ) ನಿರ್ಮಿಸಿದರು ಸಂಸಾರದ ಜಂಜಡದಲ್ಲಿ ಮನರೋಸಿ ಹೋಗಿ ತಮ್ಮ ತಮ್ಮ ದುಗುಡೆಗಳನ್ನು ಹೊತ್ತು ಬಂದವರಿಗೆ ಆಶ್ರಯ, ಅಶನ ವಾಸ್ತವ್ಯಕ್ಕೆ ವ್ಯವಸ್ಥೆ ಇವನ್ನೆಲ್ಲ ಕಲ್ಪಿಸಿ, ಭಕ್ತರುದ್ಧಾರದ ಕಾಯಕ ಕೈಗೊಂಡರು. ಈಗ ಕೊಳಗೀಬೀಸು ಮಾರುತಿ ಗುಡಿಯಾಗಿರುವುದು ಅವಧೂತರ ಆಶ್ರಮವಾಗಿ ಮಾರ್ಪಟ್ಟಿತ್ತು. ರಾಮಧೂತ-ಅವಧೂತ ಇವರಿಬ್ಬರಲ್ಲಿ ಯಾವುದೇ ಭೇದ-ಭಾವಗಳನ್ನು ಭಕ್ತರ ಗುರುತಿಸುವುದಂತೂ ದೂರ ಉಳಿಯಿತು.
ಗುರಿ ಸಾಧನೆಯತ್ತ ರಾಮನಾಥ
ಗುರಿ ಸಾಧನೆಗೆ ಸಿದ್ಧತೆ: ರಾಮನಾಥನು ತನ್ನ ಸಾಧನಯಲ್ಲಿ ಮುಂದುವರಿದಿದ್ದ ನು. ಸಂಧ್ಯಾಕಾಲದಲ್ಲಿ ಅರ್ಫ್ಯಪ್ರಧಾನ ನಿತ್ಯಕರ್ಮಾನುಷ್ಠಾನ ಎಂದೂ ತಪ್ಪುತ್ತಿರಲಿಲ್ಲ. ಬ್ರಾಹ್ಮೀ ಮುಹೂರ್ತದಲ್ಲೆದ್ದು ಸಾಧನೆಗೆ ತೊಡಗುತ್ತಿದ್ದನು. ಪ್ರವೃತ್ತಿಮಾರ್ಗದಿಂದ ನಿವೃತ್ತಿ ಮಾರ್ಗ ಅವನ ಪ್ರಥವಾಗಿತ್ತು. ಮಂತ್ರ-ಮಂತ್ರಾರ್ಥಗಳ ಅನುಸಂಧಾನಗಳಲ್ಲಿ ಸದಾ ನಿರತರಾಗಿರುತ್ತಿದ್ದನು. ಅರ್ಥಜ್ಞಾನವಿಲ್ಲದೆ ಅರ್ಥವನ್ನು ತಿಳಿಯದೆ ವೇದಪಾಠ ಮಾಡುವುದು ಮಂತ್ರಪಠನ ಇವೆಲ್ಲ ಧಾನ್ಯದ ಉಮಿಯನ್ನು ಕುಟ್ಟಿದಂತೆ ನಿಷ್ಪಯೋಜಕವು. ವೇದ, ಮಂತ್ರಗಳ ತತ್ವಾರ್ಥ, ಮಂತ್ರಾರ್ಥ ವಿಚಾರ ತಿಳಿದವನು ಸ್ವಲ್ಪ ಮಾತ್ರ ವೇದವನ್ನೋದಿದರೂ ಬ್ರಹ್ಮಲೋಕವನ್ನು ಹೊಂದಬಲ್ಲ ಧೀರನೆನಿಸುತ್ತಾನೆ. ಧ್ಯಾನಗಳ ವಿಧಿ ವಿಧಾನ ಮಂತ್ರಾರ್ಥಗಳ ವಿಚಾರ ಇವುಗಳಲ್ಲಿ ಅರ್ಥಜ್ಞಾನವನ್ನು ಹೊಂದಿದವನು ಉತ್ತಮಫಲಗಳನ್ನು ಪಡೆಯುತ್ತಾನೆ. ಈ ಜ್ಞಾನಮಾರ್ಗದಲ್ಲಿ ಉನ್ನತಿಕೆಯನ್ನು ಹೊಂದುವುದೇ ಪರಾವಿದ್ಯೆಯಿಂದ ದತ್ತವಾಗುವ ಫಸಲು. ಈ ಜ್ಞಾನಮಾರ್ಗದಿಂದ ಮೋಕ್ಷವನ್ನು ಹೊಂದಬಹುದು. “ಜ್ಞಾನಾದೇವ ಹಿ ಕೈವಲ್ಕಂ” ಎಂದು ಮುಂತಾಗಿ ಅದ್ವೈತ ಸಿದ್ಧಾಂತಿಗಳಾದ ಶ್ರೀಮತ್ಪರಮಹಂಸರಾದ ಶ್ರೀ ಶಂಕರಾಚಾರ್ಯರೇ ಹೇಳಿರುವರು ಎಂಬುದಾಗಿ ತಿಳಿದು ತನ್ನ ಸಾಧನೆಯಲ್ಲಿ ತೊಡಗಿದ್ದನು. ಇವನಿಗೆ ಗೋ ಸೇವೆಯು ಬಹುಪ್ರಿಯವಾಗಿತ್ತು. ದೇವಸ್ಥಾ ನಗಳಿಗೆ ಭೆಟ್ಟಿ ನೀಡಿ ಕ್ಷೇತ್ರಗಳನ್ನು. ಸಂಚರಿಸಿ, ದೇವತಾರ್ಚನೆ ಮಾಡುವುದರಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದನು. ರಾಮನಾಥನಿಗೀಗ 17ನೇ ವಯಸ್ಸು. ನಿಸರ್ಗದಲ್ಲಿಯ ವಿಶೇಷವಾದ ಪ್ರಕೃತಿಯ ಪ್ರಕ್ರಿಯೆಗಳನ್ನು ನೋಡುವುದು ಅವನಿಗೆ ಖುಷಿಯಾಗಿತ್ತು. ರಮಣೀಯವಾಗಿ ಕಂಗೊಳಿಸುವ ಕಾನನಗಳನ್ನು ಅಡ್ಡಾಡುತ್ತ, ಎತ್ತರದ ಗುಡ್ಡಗಳನ್ನು ಏರಿ, ಸೂರ್ಯೋದಯ, ಸೂರ್ಯಾಸ್ತಗಳನ್ನು ನೋಡಿ ಬರುವ ಹವ್ಯಾಸ ಇವನಿಗಿತ್ತು. ಸೂರ್ಯೋದಯಾಸ್ತ ಕಾಲಗಳಲ್ಲಿ ಆ ನಿಶ್ಶಬ್ದ ವಾತಾವರಣದಲ್ಲಿ ಸುತ್ತಣ ದಿಕ್ಕುಗಳನ್ನೇ ದಿಟ್ಟಿಸಿ ನೋಡುತ್ತ ನಿಂತು ಬಿಡುತ್ತಿದ್ದನು. ಭಗವಾನ್ ಸೂರ್ಯ ದೇವನಿಗೆ ಅರ್ಘ್ಯ ನೀಡುತ್ತಿದ್ದನು. ಆ ವೇಳೆ ತನ್ನ ಹೃದಯವು ವಿಶ್ವಚೇತನವನ್ನು ಆಸ್ವಾದಿಸುತ್ತಿತ್ತು. ಆತ್ಮವು ವಿಶ್ವಾತ್ಮನಲ್ಲಿ ಲೀನವಾಗಿಬಿಡುತ್ತಿತ್ತು. ಹೀಗೆ ಯೋಗಾಭ್ಯಾಸ, ಭಕ್ತರೊಂದಿಗಿನ ಸಾಮರಸ್ಯತೆ, ಜೊತೆಗೆ ಆತ್ಮೋದ್ಧಾರ ಇವುಗಳ ಸಮ್ಮಿಳಿತವಾದ ವ್ಯಕ್ತಿತ್ವದ ರಾಮನಾಥನನ್ನು ಒಳ್ಳೆಯ ಸಾಧಕನೆಂದು ಅವಧೂತರು ಗಮನಿಸಿದ್ದರು. ಆಗಾಗ ಶ್ರೀಧರಸ್ವಾಮಿಗಳ ಸೇವೆ ಮಾಡುತ್ತಿದ್ದನು. ಮಾರುತಿಯ ಪೂಜೆ, ಅವಧೂತರ ಸೇವೆ ಇವುಗಳಲ್ಲಿ ನಿರತನಾಗಿದ್ದನು. ಭಕ್ತರಿಗೂ ಅಚ್ಚು ಮೆಚ್ಚಿನವನಾಗಿದ್ದನು.
ಅವಧೂತರ ಜೊತೆ ಶ್ರೀ ರಾಮಾನಂದರು
ರಾಮನಾಥನಿಗೆ ಅವಧೂತರಿಂದ ಸನ್ಯಾಸ ಬೋಧನೆ: ದಿನನಿತ್ಯ ಅವಧೂತರನ್ನು ಹಾಗೂ ರಾಮದೂತ ಹನುಮಂತನನ್ನು ಸೇವೆ ಮಾಡುವುದು ಅವನ ಕಾಯಕವಾಗಿತ್ತು. ರಾಮಚಂದ್ರನ ಈ ಬೆಳವಣಿಗೆ ಕಂಡ ಅವಧೂತರು ಹತ್ತಿರಕ್ಕೆ ಕರೆದು- “ನೀನು ಮನೆಗೆ ಹೋಗು, ವಿವಾಹವಾಗಿ ಸಂಸಾರ ನಡೆಸು, ಆಮೇಲೆ ಬೇಕಾದರೆ ಮುಂದಿನದು ದೇವರ ಇಚ್ಛೆ ಇದ್ದಂತೆ ಆದೀತು” ಎಂದು ಹೇಳಿಕಳಿಸಿದರು. ಆದರೆ ಆ ಮಾತು ರಾಮನಾಥನ ಕಿವಿಯೊಳಗೆ ಹೋಗಲಿಲ್ಲ. ಹಾಗೂ ಸಾಧನೆಯ ವಿಷಯದಲ್ಲಿ ತನ್ನಿಚ್ಛೆಯಂತೆ ಹೇಗಿರಬೇಕೋ ಹಾಗೆ ತನ್ನ ಸಾಧನೆಯಲ್ಲಿ ತೊಡಗುತ್ತಿದ್ದ. ಮನಸ್ಸಿಗೆ ಮುದ ಕೊಡುವಷ್ಟು ಚೆನ್ನಾಗಿ ಮಾರುತಿ ಹಾಗೂ ಅವಧೂತರ ಸೇವೆ ಮಾಡುತ್ತಿದ್ದ. ಅಧ್ಯಾತ್ಮ ವಿದ್ಯೆ ಯ ಕಡೆ ತನ್ನ ಮನಸ್ಸನ್ನು ವಿಶೇಷವಾಗಿ ಹರಿಯಬಿಟ್ಟು ಜ್ಞಾನಿಯಾಗಲು ಹೊರಟ ಯೋಗಿಗಳ ಒಡನಾಟ, ಸಾಧುಸಂತರ ಸಹವಾಸ, ಜ್ಞಾನಿಗಳ ಜತೆ ಚರ್ಚೆ ಇವನ್ನೆಲ್ಲ ಬಾಲಕ ತನ್ನ 18-20ನೇ ವಯಸ್ಸಿನಲ್ಲಿಯೇ ರೂಢಿಸಿಕೊಂಡಿದ್ದ. ಅವಧೂತರು ಭಿಕ್ಷಕ್ಕೆಂದು ಭಕ್ತರ ಮನೆಗಳಿಗೆ ಆಹ್ವಾನಿತರಾಗಿ ಹೋದ ಸಂದರ್ಭದಲ್ಲಿ ತಾನು ಬಿಳಿಯ ಜುಬ್ಬ, ಪಂಚೆ ತೊಟ್ಟು ಸ್ವಾಮೀಜಿಯವರ ಜತೆ ಹೆಗಡೆಯವರಾಗಿ ಹೊರಟುಬಿಡುತ್ತಿದ್ದ. ಕೆಲವೊಮ್ಮೆ ಇವನ ಜೊತೆ ಶಿವಾನಂದರೂ ಹೊರಟಿದ್ದುಂಟು. ಹೀಗೆ ಅವಧೂತರ ಸಂಗ ಬಿಡುತ್ತಿದ್ದಿಲ್ಲ. ವೈರಾಗ್ಯದಲ್ಲಿ ಅನುಚಾನವಾಗಿ ಮನವಿದ್ದ ರಾಮನಾಥ (1949) ಶೀಗೇಹಳ್ಳಿ ಯಲ್ಲಿ ಹ ಉಳಿದಿದ್ದ ಸಮಯದಲ್ಲಿ ದತ್ತಗುರು ಶ್ರೀಧರಸ್ವಾಮೀಜಿಯವರು " ಅಲ್ಲಿ ತಿಂಗಳುಗಳ ಕಾಲ ಉಳಿದಿದ್ದರು. ಆ ಸಂದರ್ಭ ಶ್ರೀಧರಸ್ವಾ ಮೀಜಿಯವರ ಸೇವಾಭಾಗ್ಯ ದೊರೆಯಿತು. ಹೀಗಿರಲು ಸಮರ್ಥ ಶ್ರೀಧರರ ಜೀವನಕ್ರಮದಿಂದ ಪ್ರೇರಿತನಾಗಿ ತಾನು ಶೀಗೇಹಳ್ಳಿಯಲ್ಲಿಯೇ ಇದ್ದು ಕೆಲ ತಿಂಗಳು ಸಜ್ಜನ ಸಂಗದಲ್ಲಿ ಕಾಲ ಕಳೆದನು ಹಾಗೂ ಕೆಲವು ದಿವಸ ಶಿರ್ಶಿ ಕಡೆ ಹೊರಟು ನೇರವಾಗಿ ಬಾಬಾ ಬುಡನಗಿರಿಗೆ ಹೋಗಿ ದತ್ತಾತ್ರೇಯನನ್ನು ಪೂಜಿಸಿ, ಸೇವಿಸಿ ತನ್ನ ಯೋಗ, ವಿದ್ಯಾಭ್ಯಾಸಕ್ಕೆ ಒಂದು ಆಯಾಮವನ್ನು ತಂದುಕೊಂಡನು. ಅಲ್ಲಿಂದ ಚಿಕ್ಕಮಗಳೂರಿಗೆ ಹೊರಟು ಅಲ್ಲಿ ದತ್ತಯೋಗಿಯವರ ಸನ್ನಿಧಿಯಲ್ಲಿ ದ್ದು ಅವರ ಸೇವೆ ಮಾಡುತ್ತಿದ್ದನು. ಭಕ್ತಿ ಪುರಸ್ಸರವಾಗಿ ಸೇವೆ ಮಾಡಿ ಶೃಂಗೇರಿಗೆ ಹೊರಟ. ಪವಿತ್ರ ತುಂಗಾ ನದಿಯಲ್ಲಿ ಸ್ನಾನ ಮುಗಿಸಿ, ನದಿಯ ತಟದಲ್ಲಿರುವ ವಿದ್ಯಾವಾರಿಧಿ ಶಾರದಾಂಬೆಯನ್ನು ಪೂಜಿಸಿ ಜೊತೆಯಲ್ಲಿ ಸ್ವಾಮಿಯವರ ದರ್ಶನ, ಸೇವಾಭಾಗ್ಯವನ್ನು ಪಡೆದನು. ಗುರುಜನರೊಂದಿಗೆ ಸಹಭಾಗಿತ್ವ, ಸಜ್ಜನರೊಂದಿಗೆ ಸಹವಾಸ ಇವುಗಳಲ್ಲಿಯೇ ಕಾಲ ಕಳೆದು ತಿರುಗಿ ನೆಲೆಮಾವು ಮಠಕ್ಕೆ ಬಂದನು. ಆ ವೇಳೆಗಾಗಲೇ ರಾಮನಾಥನ ಮನಸ್ಸು ಪಕ್ವವಾಗಿತ್ತು. ಅಲ್ಲಿ ಗುರುಸೇವೆ ಮಾಡುತ್ತ ಕೆಲವು ಸಮಯ ಉಳಿದನು. ಅಲ್ಲಿಂದ ಹೊರಟು ಕುಮಟಾ ಅಫನಾಶಿನಿಯಲ್ಲಿ ಉಳಿದು ವಿಘ್ನವಿನಾಶಕ ಮಹಾಗಣಪತಿಯನ್ನು ಪೂಜಿಸುತ್ತ ಎರಡು ಮಾಸಗಳ ಕಾಲ ಅಲ್ಲಿಯೇ ಉಳಿದನು. ಬೆಳಗಿನ ಜಾವದಲ್ಲಿ ಎದ್ದು ಸಂಧ್ಯಾವಿಧಿ ಪೂರೈಸಿ, ಎಳಸು ದೂರ್ವೆ, ವಿಧ ವಿಧ ಪುಷ್ಪಗಳನ್ನು ಆಯ್ದು ತರುತ್ತಿದ್ದನು. ಎಳೆ ತುಳಸಿ, ಬಿಲ್ವಪತ್ರೆ ಇವನ್ನೆಲ್ಲ ಸಂಗ್ರಹಿಸಿ ಗಂಧ, ಚಂದನ-ಸಿಂಧೂರಗಳಿಂದ ಗಣಪತಿಯ ಪೂಜೆ ಸಲ್ಲಿಸುತ್ತಿದ್ದನು. ಅನಂತರ ಪುನಃ ಕೊಳಗೀಬೀಸಿಗೆ ಬಂದು ನೆಲೆಸಿದನು. ಇಲ್ಲಿ ಪುನಃ ನಿತ್ಯ ಚಟುವಟಿಕೆ, ಮಾರುತಿ ಸೇವೆ, ಅವಧೂತರ ಸೇವೆ ಪ್ರಾರಂಭವಾಯಿತು. ಸಚ್ಚಿಂತನೆಯಲ್ಲಿ ರಾಮಚಂದ್ರ ಅಧಿಕವಾದ ಶಾಂತಿ, ಸಮಾಧಾನ ಹಾಗೂ ಸಂತೃಪ್ತ ಜೀವನ ನಡೆಸುತ್ತಿದ್ದನು. ಅವನ ಮುಖ ಕಾಂತಿಯಿಂದ ಹೊಳೆಯುತ್ತಿತ್ತು. ತೇಜೋಮಯವಾಗಿತ್ತು. ಸತ್ಪುರುಷನಾಗುವ ಲಕ್ಷಣ ಅವನಲ್ಲಿ ತೋರುತ್ತಿತ್ತು. ಈಗೀಗ ರಾಮನಾಥನು ಯಾರೊಂದಿಗೂ ಹೆಚ್ಚಿಗೆ ಮಾತನಾಡುತ್ತಿದ್ದಿಲ್ಲ. ಕೇವಲ ಬ್ರಹ್ಮ (ತತ್ವ)ದಲ್ಲಿ ಮನಸ್ಸುಳ್ಳವನಾಗಿ ತನ್ನಷ್ಟಕ್ಕೇ ಇರುತ್ತಿದ್ದನು. ಪರಮಾತ್ಮನನ್ನೇ ನೆನೆಯುತ್ತ ಸುವಿಚಾರ ಸಂಪನ್ನತೆಯ ಮೂರ್ತಿಯಾಗಿ ಸೂರ್ಯನ ತೇಜಸ್ಸು, ಓಜಸ್ಸನ್ನು ಹೊಂದಿದವನಾಗಿದ್ದನು. ಹೀಗೆ ತುರೀಯಾವಸ್ಥೆಯಲ್ಲಿ ನೆಲೆಸಿರುವ ರಾಮನಾಥನ ಸ್ಥಿರವಾದ ಮನಸ್ಸನ್ನು ಅವಧೂತರು ಅರಿತರು.
ಅವಧೂತರು ಪುನಃ ಕೇದಾರ, ಬದರಿ ಕಡೆಗೆ ಯಾತ್ರೆಗೆ ಹೊರಟಿದ್ದ ರು. ಅವರು ಆ ಯಾತ್ರೆಯ ವೇಳೆಯಲ್ಲಿ ಅಲ್ಲಲ್ಲಿ ಭಿಕ್ಷ, ಗುರುಸೇವೆ ಪಡೆಯುತ್ತಿದ್ದರು. ಕೆಲ ದಿವಸಗಳಲ್ಲಿ ಕೊಳಗೀಬೀಸಿಗೆ ಬಂದು ಸೇರಿದರು. ಅವಧೂತರು ಪುನಃ ಕೇದಾರ, ಬದರಿ ಕಡೆಗೆ ಯಾತ್ರೆಗೆ ಹೊರಟಿದ್ದ ರು. ಅವರು ಆ ಯಾತ್ರೆಯ ವೇಳೆಯಲ್ಲಿ ಅಲ್ಲಲ್ಲಿ ಭಿಕ್ಬ, ಗುರುಸೇವೆ ಪಡೆಯುತ್ತಿದ್ದರು. ಕೆಲ ದಿವಸಗಳಲ್ಲಿ ಕೊಳಗೀಬೀಸಿಗೆ ಬಂದು ಸೇರಿದರು. ಆ ವೇಳೆಗೆ ಅವರು ರಾಮನಾಥನನ್ನು ನೋಡಿದಾಗ ಅವರ ಮನಸ್ಸು ತಡೆಯಲಿಲ್ಲ. ಇನ್ನು ಈ ಬಾಲಕನಿಗೆ ಸನ್ಯಾಸ ದೀಕ್ಷೆ ನೀಡದಿದ್ದರೆ ಸರಿಯಲ್ಲ ವೆಂದೆನಿಸಿತು. ಅಲ್ಲದೆ ಜತೆಗೆ ಶಿವಾನಂದ ಎಂಬ ಸಾಧಕರೊಬ್ಬ ರು ಅಲ್ಲಿಯೇ ಸಮೀಪ ಇರುವ ಬಟ್ಟೆ ವಿನಾಯಕ ದೇವಾಲಯದಲ್ಲಿ ದ್ದು ಸಾಧನೆಯಲ್ಲಿ ತೊಡಗಿದ್ದ ರು. ಅವರು ಅಧ್ಯಾತ್ಮ ಚಿಂತನದ ವೇಳೆ ಆಗಾಗ ಬಂದು ಅವಧೂತರನ್ನು ಕಂಡು ಸೇವೆ ಮಾಡಿ, ಮಾರುತಿಯ ಸೇವೆ ಮಾಡುತ್ತಾ, ಅವಧೂತರ ಸಾನ್ನಿಧ್ಯದಲ್ಲಿ ನಾಲ್ಕಾರು ದಿನಗಳ ಸೇವೆಗೆ ನಿಂತುಬಿಡುತ್ತಿದ್ದರು. ಈ ಶಿವಾನಂದ ಸಾಧಕರು ಅವಧೂತಸ್ವಾಮೀಜಿಯವರಲ್ಲಿ ಹಲವು ಸಲ ತಮಗೆ ಸನ್ಯಾಸ ನೀಡಿರೆಂದು ಬೇಡಿಕೊಂಡರು. ಆಗ ಸ್ವಾಮೀಜಿಯವರು “ನೀನು ಕೇಳಿದಾಕ್ಚಣ ಕೊಟ್ಟು ಬಿಡುವುದೇ ಸನ್ಯಾಸವನ್ನು? ಸ್ವಲ್ಪ ಕಾಲ ಕಳೆಯಲಿ ಅದಕ್ಕೂ ಕಾಲವೆಂಬುದು ಬರಬೇಕಲ್ಲ " ಎಂದು ಹೇಳಿದ್ದರು. ಶಿವಾನಂದ ಸಾಧಕರು ಹಾಗೂ ರಾಮನಾಥರು ಇಬ್ಬರೂ ಸ್ವಾಮೀಜಿಯವರಿಂದ ಸನ್ಯಾಸ ಸ್ವೀಕರಿಸಲು ಉತ್ಸುಕರಾಗಿದ್ದರು. ಇವರಿಬ್ಬರೂ ತಮ್ಮ ಸಾಧನಾ ಪಥದಲ್ಲಿ ಮುಂದೆ ಮುಂದೆ ಸಾಗುತ್ತಿದ್ದುದನ್ನು ನೋಡಿ, ಸ್ವಾಮೀಜಿಯವರು ಇಬ್ಬರಿಗೂ ಒಂದೇ ಮುಹೂರ್ತದಲ್ಲಿ ತುರೀಯ ದೀಕ್ಷೆಯನ್ನು ನೀಡಬೇಕೆಂದುಕೊಂಡಿದ್ದರೇನೊ ಎಂದು ಕಾಣುತ್ತದೆ. ಆ ಒಂದು ಶುಭ ಘಳಿಗೆಯನ್ನು ತಾವೇ ಹುಡುಕುತ್ತಿದ್ದರು. ಪರಮೇಶ್ವರನ ಮನಸ್ಸಿನಲ್ಲಿ ಏನೋ ವಿಚಾರವಿರುವುದನ್ನೇ ಜ್ಞಾನ ದೃಷ್ಟಿಯಿಂದ ತಿಳಿದ ಸ್ವಾಮೀಜಿಯವರು ಖರ ಸಂವತ್ಸರದ ಮಾಘಮಾಸ (1952) ಅಮಾವ್ಯಾಸೆಯ ದಿನ ಸೂರ್ಯಗ್ರಹಣ ಮೋಕ್ಷ ಕಾಲದಲ್ಲಿ ಇಬ್ಬರಿಗೂ ಸನ್ಯಾಸ ದೀಕ್ಷೆ ಭೋಧಿಸುವುದೆಂದು ತೀರ್ಮಾನಿಸಿದ್ದರು. ಅಂತೆಯೇ ಆ ಸೂರ್ಯಗ್ರಹಣದ ದಿವಸ "ಕೊಳಗೀಬೀಸಿನಲ್ಲಿ ಕಾರ್ಯಕ್ರಮವಿದೆ, ಮುನ್ನಾದಿನವೇ ಅವಧೂತರ ಸನ್ನಿಧಿಯನ್ನು ತಲುಪಿರಬೇಕು'' ಎಂಬ ಅವಧೂತರ ಕರೆಯಂತೆ ಶಿವಾನಂದರು ಮುನ್ನಾದಿನವೇ ಕೊಳಗೀಬೀಸನ್ನು ತಲುಪಿದರು.
ಸನ್ಯಾಸ ದೀಕ್ಷೆ: ಯೋಗಧ್ಯಾನದಲ್ಲಿ ಮಾಗಿದ ಮನವುಳ್ಳ ರಾಮ ಒಂದು ಕಡೆ ಹಾಗೂ ಸಾಧನಾ ಪಥದಲ್ಲಿ ಸೈ ಎನಿಸಿಕೊಂಡಿದ್ದ ಶಿವಾನಂದ ಒಂದು ಕಡೆ ಒಟ್ಟಿಗೆ ಸೇರಿದ್ದರು. ಅಮಾವಾಸ್ಯೆ ದಿನ ಗ್ರಹಣ ಕಾಲ ಸಮೀಪಿಸಿತು. ಗ್ರಹಣ ಪುಣ್ಯಕಾಲ ಸಮೀಪಿಸಿದಂತೆ ಮಾರುತಿಗೆ ರುದ್ರಾಭಿಷೇಕ, ಭಜನೆ, ಪೂಜೆ ಎಲ್ಲವೂ ಪ್ರಾರಂಭವಾದವು. ಗ್ರಹಣಕಾಲ ಬಂತು. ಗ್ರಹಣ ನೋಡಿ, “ದೇವರ ಬಲ ಹೆಚ್ಚಲಿ, ಹಾವಿನ ಬಲ ಕುಂದಲಿ....'' ಎಂದು ಹೇಳುತ್ತಾ ಮಹಾಜನರು ತಮ್ಮ ಮೈ ಮೇಲಿರುವ ಬಟ್ಟೆಗಳನ್ನೆಲ್ಲ ತೋಯಿಸಿ, ಸ್ನಾನ ಮಾಡಿ ಬಂದರು. ಭಕ್ತರೆಲ್ಲ ಸೇರಿರುವ ಆ ಶುಭ ಕಾಲದಲ್ಲಿ ಮಾರುತಿಯದುರಿಗೆ ಭಜನೆ ಮುಂದುವರಿಯಿತು. ಮಹಾಜನರಲ್ಲಿ ಕೆಲವರು ಜಪ ಮಾಡುತ್ತಾ ಕುಳಿತಿದ್ದರು. ಗ್ರಹಣ ಮೋಕ್ಷ ಕಾಲ ಸಮೀಪಿಸಿತು; ಬಿಡುಗಡೆಯೂ ಆಯಿತು. ಸಮೀಪದ ಗದ್ದೆ ಬೈಲಿನಲ್ಲಿರುವ ಸರೋವರಕ್ಕೆ ಹೋಗಿ ಸ್ನಾನಮಾಡಿ ಬರುವುದೆಂದು ಮಹಾಜನಗಳೂ, ಅವಧೂತ ಸ್ವಾಮೀಜಿಯವರೂ ಹೊರಡುವಾಗ ಜೊತೆಯಲ್ಲಿ ರಾಮಚಂದ್ರ, ಶಿವಾನಂದ ಇವರನ್ನೂ ಕರೆದುಕೊಂಡು ಹೋದರು. ಸರೋವರದ ಬಳಿ ಸಾಗಿದ ಸ್ವಾಮೀಜಿ, ಸವಿತೃ ದೇವನಿಗೆ ಅರ್ಫ್ಯವನ್ನು ಅರ್ಪಿಸಿ, ಧ್ಯಾನ ನಿರತರಾಗಿದ್ದರು. ಆಗನೀರಿನಲ್ಲಿ ಧೊಪ್ಪೆಂದು ಶಬ್ದವಾಯಿತು. ಯೋಗದ ನಿಮಿತ್ತ ರಾಮನಾಥನು ತನ್ನ ಶರೀರದ ಮೇಲಿರುವ ಉಪವೀತವನ್ನು ಒಗೆದು ನೀರಿಗೆ ಧುಮುಕಿದ್ದನು. ಈ ಸಮಯವನ್ನೇ ನಿರೀಕ್ಷಿಸುತ್ತಿದ್ದ ಅವಧೂತರು ರಾಮಚಂದ್ರ (ರಾಮನಾಥ)ನನ್ನು ಕರೆದರು. ಅವನ ಕಿವಿಯಲ್ಲಿ ಏನೋ ಉಪದೇಶಿಸಿದರು. ಅಷ್ಟರಲ್ಲಿ ಶಿವಾನಂದರು ತಾವೂ ನೀರಿನಲ್ಲಿ ಧುಮುಕಿ ಜನಿವಾರವನ್ನು ವಿಸರ್ಜಿಸಿದರು. ಆಗ ಶಿವಾನಂದರನ್ನು ಕರೆದು, ಅವರ ಕಿವಿಯಲ್ಲೂ ಏನೋ ಉಪದೇಶಿಸಿದರು. “ಇಂದು ರಾಮಚಂದ್ರನಿಗೆ ಹಾಗೂ ಶಿವಾನಂದನಿಗೆ ಸನ್ಯಾಸ ಬೋಧೆ ಮಾಡುವ ಶುಭ ಘಳಿಗೆ, ಮಹಾಜನಗಳೇ ಕೇಳಿರಿ'' ಎಂದು ಅವಧೂತರು ಮಹಾಜನರೆದುರು ಘೋಷಿಸಿದರು. ಪ್ರಣವೋಪಾಸನೆಯ ಬೋಧೆಯನ್ನು ಇಬ್ಬರಿಗೂ ನೀಡಿದರು. “ನಿಮಗಿನ್ನು ಸನ್ಯಾಸಾಶ್ರಮದ ವಿಧಿ-ವಿಧಾನ-ನಿಯಮಗಳನ್ನು, ನೀವು ಮುಂದೆ ನಡೆಸಬೇಕಾದ ಕರ್ತವ್ಯಗಳನ್ನು ತಿಳಿಸುತ್ತೇನೆ ಬನ್ನಿ'' ಎಂದು ಅವರೀರ್ವರನ್ನೂ ದೇಗುಲದ ಮಾಳಿಗೆಯ ಮೇಲೆ ಕರೆದೊಯ್ದು ಅವಧೂತರು ಬೋಧನೆಗೈದರು.
ಅವಧೂತರಿಂದ ಸನ್ಯಾಸ ದೀಕ್ಷೆ
“ಆತ್ಮವೇ ಬಿಂದು ಸ್ವರೂಪವು. ಈ ಆತ್ಮವು ಬ್ರಹ್ಮಾನಂದ ಸಿಂಧುವಿನಲ್ಲಿ ಐಕ್ಯಗೊಂಡಾಗ ಒದಗುವ ಸಂಧಿಯೇ ಸನ್ಯಾಸವು. ನಿಮಗಿಬ್ಬರಿಗೂ ಒದಗಿಬಂದ ಈ ಶುಭ ಸಂಧಿಯ ಸುಲಗ್ನದಲ್ಲಿ ಆತ್ಮಬೋಧೆ ನೀಡುವೆನು' ಎಂದು ಸ್ವಾಮೀಜಿ ವಿವರಿಸಿದರು. ಜೀವದೊಳಗಿರುವ ಆತ್ಮ ಬ್ರಹ್ಮವು. ಶರೀರ ನಶ್ವರ. ಆದರೆ ಆತ್ಮ ಬ್ರಹ್ಮ ನಿಶ್ಚಯತತ್ವ. ನಿಮ್ಮದು ಪರಮಹಂಸ ಆತ್ಮ. ಇನ್ನು ಮುಂದೆ ಏಕಾಕ್ಷರವನ್ನು ಜಪಿಸಿರಿ. ಬಿಂದು-ಆತ್ಮಗಳು ಬ್ರಹ್ಮನೊಳಗೊಂದಾದಾಗ ಪರತತ್ವ ಪ್ರಾಪ್ತಿಯಾಗುವುದು. ಸಾಧನಾ ಪಥದಲ್ಲಿ ಸಿದ್ಧಿ-ಅಸಿದ್ಧಿಗಳ ಕಡೆ ಲಕ್ಷ್ಯವಿರಬಾರದು. ಗುರಿಯ (ಲಕ್ಷ್ಯದ) ಕಡೆ ಮನೋಬುದ್ಧಿಗಳನ್ನು ಅನುಸಂಧಾನ ಮಾಡುತ್ತಲಿರಿ ಹಾಗೂ ನಿಮಗಿನ್ನು ಭಿಕ್ಷು-ವೃತ್ತಿಯು ತಕ್ಕುದಾಗಿದೆ. ಹೀಗೆ ಪರಬ್ರಹ್ಮನ ಕಡೆ ಲಕ್ಷ್ಮ ಹಾಗೂ ಭಿಕ್ಷು-ವೃತ್ತಿ ಇವೆರಡು ಭಕ್ತರ ಉದ್ಧಾರಕ್ಕೆ ಸಮ್ಮತಿಸಿದ್ದು ಅದೆ. ಸ್ತುತಿ ನಿಂದೆ ಇವುಗಳ ಕಡೆ ಅಲಕ್ಷ್ಯದಿಂದಿರಬೇಕು. ಭಕ್ತರು ನೀಡಿದ ಭಿಕ್ಷದಿಂದ ಸಂತುಷ್ಟಿ ಹೊಂದಿ ಮನೋಬುದ್ಧಿಗಳು ನೇರ ಗುರಿಯ ಕಡೆ ಇರುವುದು ಮುಕ್ತಿಪಥಕ್ಕೆ ಸಲುವುದು. ಇಂದಿನಿಂದ ನೀವು ಪರಮಹಂಸರು. ಪರಮಹಂಸರ ಜೀವನ ನಿಮ್ಮದಾಗಿಸಿಕೊಂಡು ಭಕ್ತರಾಸೆ ನೆರವೇರಿಸಿರಿ ಎಂದು ತುರೀಯ ದೀಕ್ಷೆ ಬೋಧಿಸಿ ಅವರಿಗೆ ರಾಮಾನಂದ ಮತ್ತು ಶಿವಾನಂದ ಎಂದು ನಾಮಕರಣ ಮಾಡಿದರು. ಮಹಾಜನರೆದುರು ಇವರಿಬ್ಬರಿಗೆ ಸನ್ಯಾಸ ಬೋಧಿಸಿದ ಚಂದವನ್ನು ನೋಡುತ್ತಾ ಮಾರುತಿರಾಯನು ಅತ್ಯಂತ ಸಂಭ್ರಮದಿಂದ ನಸುನಗುತ್ತ ನಿಂತನು. ಮಹಾಜನರು ತೀರ್ಥ, ಮಂತ್ರಾಕ್ಷತೆ ಪಡೆದು ಶ್ರೇಯೋಭಾಗಿಗಳಾದರು. ಮಾರುತಿಯ ಜೊತೆ ಅವಧೂತರ ಸನ್ನಿಧಿಯಲ್ಲಿ ಸದ್ಗುರು ಶ್ರೀ ರಾಮಾನಂದ ಸ್ವಾಮೀಜಿಯವರು ಕೊಳಗೀಬೀಸಿನಲ್ಲಿ ನಿಂತರು. ಅವರು ಸನ್ಯಾಸಾಶ್ರಮದ ತಮ್ಮ ಮುಂದಿನ ಪಥದಲ್ಲಿ ಸಾಗಿದ್ದರು. ಅವಧೂತರ ಜೊತೆಗೆ ತಾವೂ ಭಕ್ತರ ಮಂದಿರ ಸೇರಿ ಒಟ್ಟೊಟ್ಟಿಗೆ ಪಾದಪೂಜೆ, ಭಿಕ್ಷೆ ಪಡೆದು, ಶಿಷ್ಯ ವೃಂದವನ್ನೆಲ್ಲ ಅವರು ಆಶಿಸುವ ಭಾಗ್ಯವನ್ನಿತ್ತು ಹರಸಿದರು.
ಗುರುದ್ವಯರಿಂದ ಅಪೂರ್ವ ಶಾಂತಿಯಾಗ
ಅಪೂರ್ವ ಯಾಗ: ಲೋಕಶಾಂತಿಗಾಗಿ ಗುರುದ್ವಯರು ಅಷ್ಟಗ್ರಹರಿಗೆ ಶಾಂತಿಯಾಗ ನಡೆಸಿ, ಕೊಳಗಿಬೀಸಿನಲ್ಲಿ ಶರಣ ಜನರನ್ನು ಪೊರೆದರು. ಭಕ್ತಜನರು ಗುರುಕೃಪೆಗೆ ಪಾತ್ರರಾಗಿ ಸುಖಜೀವನ ನಡೆಸುತ್ತಿದ್ದರು. ಹೀಗಿರಲು ಒಮ್ಮೆ (1962) ಭರತಖಂಡದಲ್ಲಿಯ ಜನರೆಲ್ಲ ತತ್ತರಿಸಿ ಹೋಗುವಂತಹ ದುರ್ಭಿಕ್ಷಕಾಲ, ಜನರು ಕಂಗಾಲಾಗಿ ಊಟ, ನೀರು, ಗಾಳಿ ಇಲ್ಲದೆ ಪರದಾಡುವ ಸ್ಥಿತಿ ಬಂದೊದಗಿತು. ಅಷ್ಟಗ್ರಹರ ಕೂಟ ಶರಣಜನರನ್ನು ಊಳಿಗದ ಆಳುಗಳನ್ನಾಗಿ ಮಾಡಿತು. ಈ ಪರಿಸ್ಥಿತಿಯನ್ನು ಅರಿತ ಅವಧೂತಸ್ವಾಮೀಜಿಯವರು ಈ ಗ್ರಹಗಳಿಗೆ ಶಾಂತಿ ಮಾಡಬೇಕೆಂದು ಯೋಚಿಸಿದರು. ಅದೇ ವೇಳೆಗಾಗಲೇ ಶ್ರೀಧರಸ್ವಾಮೀಜಿ ನಿರೂಪವೊಂದನ್ನು ಅವಧೂತರಿಗೆ ಕಳಿಸಿದ್ದರು. ಈ ಪ್ಲವನಾಮ ಸಂವತ್ಸರದ ಪುಷ್ಯ ಅಮವಾಸ್ಯೆಯ ದಿನ ಲೋಕ ಕಲ್ಯಾಣ ಶಾಂತಿಕರ್ಮ ಮಾಡಬೇಕು ಎಂದು ಆ ಒಸಗೆಯಲ್ಲಿತ್ತು. ಅವಧೂತರು ಅದನ್ನು ನೋಡಿ ತಾವಾಗಿಯೇ ಮಾಡಬೇಕೆಂದಿದ್ದ ಲೋಕ ಕಲ್ಯಾಣ ಕಾರ್ಯವನ್ನು ಮಾಡಲು ಇನ್ನೂ ಉತ್ಕಟಚಿತ್ತರಾದರು. ಮಾರುತಿಯ ಎದುರಿನಲ್ಲಿ ಲೋಕ ಕಲ್ಯಾಣಾರ್ಥವಾಗಿ ರುದ್ರಹವನ, ಚಂಡೀಹವನ, ಗಣಹವನ ಸತ್ಯನಾರಾಯಣ ವ್ರತಕಥೆ, ರಾಮತಾರಕ ಮಂತ್ರ ಹವನ. ಇವೆಲ್ಲವನ್ನು ಮಾಡಲು ಅವಧೂತರು ಹಾಗೂ ರಾಮಾನಂದಸ್ವಾಮೀಜಿಯವರು ಸೇರಿ ನಿರ್ಧರಿಸಿದರು. ಇದಕ್ಕಾಗಿ ವೇದ-ವೇದಾಂಗ ಬಲ್ಲ ಬ್ರಾಹ್ಮಣರ ಸಮೂಹ ಬೇಕು. ಅವರಿಗೆ ತಂಗಲು ಹಾಗೂ ಕರ್ಮಾಚರಣೆಗೆ ವ್ಯವಸ್ಥೆಯಾಗಬೇಕು. ಹವನಕ್ಕೆ ಬೇಕಾಗುವ ಸಮಿದೆ ಮುಂತಾದ ಸಾಮಗ್ರಿಗಳಿಂದ ಹಿಡಿದ ಬಂದವರಿಗೆಲ್ಲ ವ್ಯವಸ್ಥೆಯಾಗಬೇಕು. ಈ ಎಲ್ಲ ವಿಚಾರಗಳೂ ಅವಧೂತರ ಚಿತ್ತ ಭಿತ್ತಿಯಲ್ಲಿ ಹಾದುಹೋಯಿತು ಅಷ್ಟೇ. ಮುಹೂರ್ತದ ದಿನ ಬಂದಹಾಗೇ ಒಂದೊಂದೇ ತಯಾರಿ ಆಗಹತ್ತಿತು. ಭಕ್ತಾದಿಗಳು ತಂದ ಸಾಮಗ್ರಿಗಳಿಂದ ಯಾಗಶಾಲೆ, ಪಾಕಶಾಲೆ, ಭೋಜನಗೃಹ, ಚಪ್ಪರಗಳು ತಯಾರಾದವು.
ಟ್ರಕ್ಕಿನಲ್ಲಿ ಅಕ್ಕಿ ತುಂಬಿ ಸಾಗಿಸುತ್ತಿದ್ದ ಯಜಮಾನನೊಬ್ಬನಿಗೆ ಅರ್ಧ ದಾರಿಯಲ್ಲಿ ಸ್ವಾಮೀಜಿಯವರನ್ನು ದರ್ಶನಮಾಡಿ ಬರೋಣವೆಂಬ ಯೋಚನೆ ಬಂತು. ತನ್ನ ಮುಂದಿನ ಪ್ರಯಾಣ ಬದಲಾಯಿಸಿ ಆಶ್ರಮಕ್ಕೆ ಬಂದ. ಇಲ್ಲಿ ನೋಡಿದರೆ ಲೋಕ-ಕಲ್ಯಾಣದ ಕೆಲಸ ಭರದಿಂದ ಸಾಗುತ್ತಲಿದೆ. ಏನು ಕಂಡಿತೋ, ಡ್ರೈವರನಿಗೆ ಗಾಡಿಯನ್ನು ಆಶ್ರಮಕ್ಕೆ ತರಲು ಹೇಳಿ, ಅದರಲ್ಲಿದ್ದ ಅಕ್ಕಿಯ ಚೀಲಗಳನ್ನೆಲ್ಲ ಇಳಿಸಿದ. ಆತನ ಮಿತ್ರರು ಮತ್ತಷ್ಟು ಅಕ್ಕಿಯ ಚೀಲಗಳನ್ನು ತಂದು ಸ್ವಾಮಿಯ ಪಾದಕ್ಕೆ ಅರ್ಪಿಸಿದರು. ಧಾನ್ಯಗಳು, ತರಕಾರಿಗಳು ಎಲ್ಲೆಲ್ಲಿಂದಲೋ ಬಂದವು. ಈ 'ಬರ'ದ ದಿವಸದಲ್ಲಿ ಒಂದು ಚಿಕ್ಕ ಕಾರ್ಯಕ್ರಮ ಮಾಡುವುದೇ ದುಸ್ತರವಾಗಿರುವಾಗ ಇಷ್ಟು ದೊಡ್ಡ ಯಾಗ-ಹವನಾದಿಗಳೆಲ್ಲ ನಡೆಯುವುದು ಸಾಧ್ಯವೇ? ಎಂದು ಉಡಾಫೆ ಮಾಡಿದ್ದ ವರು ಯಾಗದ ದಿನ ಬಂದಂತೇ ಆಶ್ಚರ್ಯಚಕಿತರಾದರು. ಕಾರ್ಯಕ್ರಮಗಳಿಗೆ ಬೇಕಾದ ಸಾಮಗ್ರಿಗಳ ರಾಶಿ ರಾಶಿಯೇ ಬಂದು ಬಿದ್ದಿತ್ತು. ಬಂದ ಸಾಮಗ್ರಿಗಳನ್ನು ಜೋಡಿಸಿಡುವುದೇ ದುಸ್ತರವಾಯಿತು. ಇವೆಲ್ಲ ಎಲ್ಲಿಂದ ಬಂದವು? ಜನ ನಿಬ್ಬೆರಗಾಗಿದ್ದರು. ಪ್ರಷ್ಯ ಬಹುಳ ತ್ರಯೋದಶಿಯಿಂದ ಅಮಾವಾಸ್ಯೆಯವರೆಗೆ ಒಟ್ಟಿಗೆ ಮೂರು ದಿನಗಳ ಕಾರ್ಯಕ್ರಮ. ಪಾಕಶಾಲೆಯಲ್ಲಿ ಅಡಿಗೆಗಾಗಿ ನೂರೈವತ್ತು ಜನನೇಮಿಸಲ್ಪಟ್ಟಿದ್ದಾ ರೆ. ಉತ್ತರ ಕನ್ನಡ ಅಷ್ಟೇ ಅಲ್ಲದೆ ಆಚೀಚನ ಜಿಲ್ಲೆಗಳಿದೆಲ್ಲ ವಿಚಾರ ತಿಳಿದ ಭಕ್ತರೆಲ್ಲ ಆಗಮಿಸುತ್ತಿದ್ದಾರೆ. ಸಾವಿರ ಸಾವಿರ ಸಂಖ್ಯೆಗಳಲ್ಲಿ ಆಗಮಿಸಿದ ಭಕ್ತರಿಗೆ ಯಾವ ಕೊರತೆಯೂ ಆಗದ ರೀತಿಯಲ್ಲಿ ವ್ಯವಸ್ಥೆ ನಡೆದಿದೆ. ಸ್ವತಃ ವಸಿಷ್ಠ, ವಿಶ್ವಾಮಿತ್ರರೇ ನಿಂತು ಯಾಗ ನಡೆಸಿದ ಹಾಗೆ ಲೋಕ-ಶಾಂತಿಗಾಗಿ ಧರ್ಮಕಾರ್ಯ ವಿಜೃ೦ಭಣೆಯಿಂದಲೇ ನೆರವೇರಿತು. ಭಕ್ತಿಯ ಪರಾಕಾಷ್ಠೆಯೇ ಕುಣಿತ. ತನ್ಮಯರಾಗಿ ಕುಣಿದಾಗ ದೇವರೂ ಕುಣಿಯುತ್ತಾನಂತೆ. ಇಂತಹ ಭಜನೆ, ಕುಣಿತ ಅದರಲ್ಲೂ ಕುಣಿತ, ಮಾತು, ಅಭಿನಯವೆಲ್ಲ ಮೇಳೈಸಿದ-ಪಂಚಕಜ್ಜಾಯ-ಯಕ್ಷಗಾನವೆಂದರೆ ಅವಧೂತರಿಗೆ ತುಂಬ ಪ್ರೀತಿ. ಆದಿವಸವೂ ಯಕ್ಷಗಾನ ನಡೆಯಿತು.
ಬೆಳಕು ಬೆಳಕನ್ನು ಸೇರಿತು: ಯಾರೇ ಆದರೂ ಕಾಲ ಚಕ್ರದ ಸುಳಿಗೆ ಸಿಲುಕದಿರಲು ಸಾಧ್ಯವೇ? ಭಕ್ತಜನ ಚಿಂತಾಮಣಿ ಅವಧೂತರು ಕಾಲನ ನೀತಿಗೆ ಗೌರವಿಸಿ, ಇನ್ನು ವಿರಮಿಸಲು ನಿಶ್ಚಯಿಸಿರಬೇಕು. ಮಹಾಜನರೆಲ್ಲ ಸೇರಿದ್ದ ಒಂದು ದಿನ ಅವಧೂತರು ಭಕ್ತಾದಿಗಳನ್ನು ಮಾರುತಿ ಗುಡಿಯ ಪಕ್ಕದಲ್ಲಿ ಮೇಲ್ಭಾವಣಿಗೆ ಕರೆದೊಯ್ದು “ಇಲ್ಲಿ ಈ ಪ್ರಮಾಣದಲ್ಲಿ ಕುಳಿ ತೆಗೆಯಬೇಕು. ಇಲ್ಲಿ ಸಮಾಧಿ ಮಾಡುವ ಸ್ಥಳ...” ಎಂದು ಮುಂತಾಗಿ ಹೇಳಿದಾಗ ಜನಮಾನಸದಲ್ಲಿ ದಿಗಿಲು ಹಾಗೂ ಖಿನ್ನತೆ ಆವರಿಸಿತು. ಭಕ್ತ ಪರಿವಾರದವರನ್ನು ತಮ್ಮ ಮಕ್ಕಳಂತೆ ಕಂಡು ಸಲಹಿದ ಭಗವಾನ್‌ರು ತಮ್ಮನ್ನು ಬಿಟ್ಟು ಹೋಗುತ್ತಾರೆ ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟವಾಗಿತ್ತು. ಅವಧೂತರು ತಾವಾಗಿಯೇ ತಮ್ಮ ಕೊನೆಯ ದಿನಗಳನ್ನು ತಿಳಿದಿದ್ದರು. ತಿರುಗಾಡುತ್ತಿರುವ ಬ್ರಹ್ಮ, ಶಾಂತ ಪರಬ್ರಹ್ಮ ನೊಂದಿಗೆ ಒಂದಾಗಿಬಿಡುವ ಆ ಶುಭಕಾಲ ಸಮೀಪಿಸಿತ್ತು. ಪರಾಭವ ಸಂವತ್ಸರ (1967)ದಂದು ನಾಲ್ಕು ತಿಂಗಳು ಕಳೆದವು. ಅಧಿಕ ಶ್ರಾವಣ ಪೌರ್ಣಿಮೆಯ ದಿನ ಸೋಮವಾರ ಬೆಳಗು ಜಾವದ ಬ್ರಾಹ್ಮೀ ಮುಹೂರ್ತದ ವೇಳೆ ಅವಧೂತಸ್ವಾಮೀಜಿಯವರು ಸಮಾಧಿಸ್ತರಾದರು. ಭಗವಾನರ ಇಚ್ಛೆ ಯಂತೆ ಮಾರುತಿ ದೇವರ ಗುಡಿಯ ಪಕ್ಕದಲ್ಲಿಯೇ ಗುರುವಿನ ಸಮಾಧಿಸ್ಥಾ ನವಾಯಿತು. ಶರಣರೆಲ್ಲ ಬಹು ಭಕ್ತಿಯಿಂದ ನಮಿಸಿದರು. ಇಂದಿಗೂ ಗೋತ್ರಜ(ವಿಶ್ವಾ ಮಿತ್ರ ಗೋತ್ರದ)ರಿಂದ ಸ್ವಾಮಿಯ ಆರಾಧನಾ ಕಾರ್ಯನೆರವೇರುತ್ತಿದೆ.
ಶ್ರೀ ರಾಮಾನಂದರು ಕೊಳಗಿಬೀಸಿನ ಧರ್ಮದರ್ಶಿಗಳಾಗಿಯೂ ಕಾಮಧೇನುವಾಗಿಯೂ ಮಹಿಮಾತಿಶಯಗಳಿಂದ ಭಕ್ತರನ್ನು ಉದ್ದರಿಸಿದರು. ಸಹಜಾನಂದ ಅವಧೂತರು ಮುಕ್ತರಾದ ನಂತರ ಕೊಳಗಿಬಿಸನ ಆಶ್ರಮ ಮಾರುತಿ ಮಂದಿರ ಇವುಗಳನ್ನು ನೋಡಿಕೊಳ್ಳುವ ಓರ್ವ ಸಮರ್ಥರು ಬೇಕಿತ್ತು. ಒಂದು ದಿನ ಮಹಾಜನರೆಲ್ಲ ಸಭೆ ಸೇರಿ, ಆ ಕುರಿತು ಚರ್ಚಿಸಿದರು. ವೈದಿಕರೆಲ್ಲರು ತಮ್ಮ ಕರಗಳನ್ನು ಜೋಡಿಸಿ ನಿಂತರು. ಅವರೆಲ್ಲ ಶ್ರೀ ರಾಮಾನಂದ ಅವಧೂತ ಪಾದಕಮಲಗಳಿಗೆ ಮಣಿದು ಕರಜೋಡಿಸಿ, “ಮುಂದಿನ ಜವಾಬ್ದಾರಿಯನ್ನು ಹೊತ್ತು ಧರ್ಮದರ್ಶಿಯವರ ಸ್ಥಾನ ಅಲಂಕರಿಸಬೇಕು'' ಎಂದು ಮನವಿ ಮಾಡಿಕೊಂಡರು. ಬಹುಜನರ ಆಗ್ರಹದಂತೆ.. ರಾಮಾನಂದಸ್ವಾಮಿಯವರು ಕೊಳಗೀಬೀಸಿನ ಧರ್ಮದರ್ಶಿಗಳಾದರು. ಜನರ ಜಯ ಜಯಕಾರ ಎಲ್ಲೆಲ್ಲೂ ಮೊಳಗಿತು. ಭಕ್ತ ಸಮುದಾಯಕ್ಕೀಗ ಹರ್ಷವಾಯಿತು. ಸಹಜಾನಂದರಿಲ್ಲ ಎಂಬ ನೋವು ಮಾಸಿತು. ಎಂದಿನಂತೆಯೇ ಭಕ್ತಾದಿಗಳೂ ಬರುತ್ತಿದ್ದರು. ರಾಮಾನಂದರು ಶಿಷ್ಟಾಚಾರ ಎಂತಲೂ, ಕರ್ತವ್ಯ ಎಂತಲೂ ಭಾವಿಸಿ, ಭಕ್ತರು ಭಿಕ್ಷಕ್ಕೆ ಕರೆದಾಗ ಹೋಗುತ್ತಿದ್ದರು. ಮಾರುತಿಯ ಆರಾಧನೆ ಸಾಂಗವಾಗಿ ಸಾಗಿತ್ತು. ಗುರುಗಳು ಕೊಳಗಿಬೀಸಿನಲ್ಲಿದ್ದಾಗ ಅನೇಕ ಅಭಿವೃದ್ಧಿ ಕಾರ್ಯವನ್ನೂ ನಡೆಸಿದರು. ಗೋಶಾಲೆಯನ್ನು ವಿಸ್ತಾರ ಮಾಡಿ, ಜಾನುವಾರುಗಳಿಗೂ ಸಾಲುವಷ್ಟು ನೀರಿಗಾಗಿ ಕೆರೆಯನ್ನು ತೋಡಿಸಿದರು. ಕೊಳಗಿಬೀಸಿನ ಪ್ರಸಿದ್ಧಿ ಇನ್ನೂ ಹೆಚ್ಚಿತು ತಮ್ಮ ಸಂಕಷ್ಟ ನಿವಾರಣೆಗೆ ಪರ ಊರುಗಳಿಂದೆಲ್ಲ ಬರಹತ್ತಿದರು. ಭಾವಿಕವಾಗಿ ಮಠದ ವರ್ಚಸ್ಸು ಹೆಚ್ಚಿತು. ಇದು ಅನೇಕ ಕಲ್ಪಿತ ವ್ಯಕ್ತಿಗಳ ಅಸೂಯೆಗೆ ಕಾರಣವಾಯಿತು. ಕೆಡುವ ಕಾಲಕ್ಕೆ ಮದ್ದಿಲ್ಲ ಎಂಬಂತೆ, ಕೊಳಗಿಬೀಸಿನ ಪವಿತ್ರ ನೆಲದಲ್ಲಿ ಕಲಿಮಲದಂತೆ, ಮಠದಲ್ಲಿಯೆ ಉಂಡು ತಿಂದ ಕೆಲವು ವಿಪ್ರರು ಗುರು ಅನುಗ್ರಹ ಹೊಂದುವ ಬದಲು ಗುರುದ್ರೋಹದ ಪಾಪಕಾರ್ಯಕ್ಕೆ ಮನಮಾಡಿದರು. ಮಠದ ಸಂಪತ್ತಿನ ಆಸೆಯಿಂದ ಅಧಿಕಾರವನ್ನು ಗುರುಗಳಿಂದ ಕಿತ್ತುಕೊಳ್ಳುವ ಅವರ ಸಣ್ಣ ಬುದ್ಧಿಯು ರಾಮಾನಂದರಿಗೆ ತಿಳಿದು ಬಂತು. ಕೂಡಲೇ ಮಠ ತೊರೆಯಲು ನಿಶ್ಚೈಯಿಸಿದರು. ಹೀನಬುದ್ಧಿಯ ವಿಪ್ರರಿಂದಾಗಿ ಮಠ ತೊರೆಯಲು ನಿರ್ಧರಿಸಿ ಅಲ್ಲಿ ೦ದ ಗುರುವರ್ಯರು ಪಯಣದ ನಿರ್ಧಾರ ಮಾಡಿದರು. ಕೊಳಗಿಬೀಸಿನಲ್ಲಿ ಭಕ್ತರನ್ನು ಸಲಹಿ, ಅಲ್ಲಿಂದ ಹೊರಟು ಕುಮಟಾದ ಅಘನಾಶಿನಿಯಲ್ಲಿ ನಿಂತು, ಸ್ವಾಮೀಜಿ ಶರಣರನ್ನುದ್ಧರಿಸಿದರು. ಕೊಳಗಿಬೀಸನ್ನು ಬಿಟ್ಟು ಹೊರಡುವಾಗ ಸ್ವಾಮೀಜಿಯವರಲ್ಲಿದ್ದ ವಸ್ತುಗಳೆಂದರೆ ಕಾವಿಬಟ್ಟೆ, ಕಮಂಡಲು, ಕಾಲಿಗೆ ಹಾವುಗೆ, ಜೊತೆಗೆ ಗುರುಭಕ್ತ ಶಂಕರ ಹೆಗಡೆ (ಶಂಕರಣ್ಣ). ಸ್ವಾಮೀಜಿಯವರ ನಿಲುವು ಅಚಲವಾಗಿತ್ತು. ಅಲ್ಲಿನ ಜನತೆಯನ್ನು ಸಂತೈಸಿ ಉತ್ತರದಿಂದ ದಕ್ಷಿಣ ದಿಕ್ಕಿಗೆ ಹೊರಟು ನಿಂತರು. ದಕ್ಷಿಣಾಮೂರ್ತಿಯಂತೆ ಹೊರಟು ನಿಂತ ರಾಮಾನಂದ ಅವಧೂತರು ಘಟ್ಟ ಇಳಿದು, ಅಘನಾಶಿನಿಯ ಗಣಪತಿ ದೇವಸ್ಥಾ ನವನ್ನು ತಲುಪಿದರು. ಸಜ್ಜನರು ರಾಮಾನಂದಸ್ವಾಮೀಜಿಯವರನ್ನು ಅತಿ ಪ್ರೀತಿಯಿಂದ ಎದುರುಗೊಂಡು ಸೇವೆಯಲ್ಲಿ ತತ್ಪರರಾದರು. ದೇವಸ್ಥಾನದಲ್ಲೇ ವಾಸ್ತವ್ಯ ಮಾಡಲು ಅನುಕೂಲವಾದ ವ್ಯವಸ್ಥೆ ಮಾಡಿದರು.
ಅಫನಾಶಿನಿಯಿಂದ ದೀವಗಿಗೆ: ಭಗವಾನ್ ರಾಮಾನಂದರು ಅಫನಾಶಿನಿ ವಿಘ್ನೇಶ್ವರನ ದೇವಾಲಯದಲ್ಲಿ ಬಂದಿಳಿದಿರುವ ಸುದ್ದಿ, ಅವರ ಮಹಿಮಾ ವಿಶೇಷಗಳು ಇವನ್ನು ಕೇಳಿ ತಿಳಿದ ಕೆಲವು ಸಜ್ಜನರು ಅವರನ್ನು ತಮ್ಮ, ಲ್ಲಿಗೆ ಬನ್ನಿರೆಂದೂ, ಸೇವಾಭಾಗ್ಯ ನೀಡಿರೆಂದೂ ಬೇಡಿಕೊಂಡರು. ಆದರೆ ಸ್ವಾಮೀಜಿ ಮುಂದೆ ಯಾವಾಗಲಾದರೂ ಬರುತ್ತೇನೆ ಎಂದು ಹೇಳಿ ಅಲ್ಲಿಯೇ ಒಂದು ವರ್ಷಕಾಲ ಉಳಿದರು. ಮಾರನೇ ವರ್ಷ ಸಜ್ಜನ ಭಕ್ತರಿಚ್ಚೆಯಯಂತೆ ಅಘನಾಶಿನಿಯ ಉತ್ತರ ತಟದಲ್ಲಿರುವ, ದೀಪಿಕಾಪುರ (ದೀವಗಿ) ಕ್ಕೆ ಆಗಮಿಸಿದರು. ಅಲ್ಲಿಯ ಮಲ್ಲಿಕಾರ್ಜುನ ದೇವಾಲಯದಲ್ಲಿ ಉಳಿದು, ಒಂದು ಚಾತುರ್ಮಾಸವನ್ನು ಪೂರೈಸಿದರು. ದತ್ತಾವತಾರಿ ಶ್ರೀಧರಸ್ವಾಮೀಜಿಯವರ ಇಚ್ಛೆಯಂತೆ ರಾಮಾನಂದಸ್ವಾಮೀಜಿ ವರದಪುರದಲ್ಲಿ ನಿಂತು ಶ್ರೀಧರರ ಸೇವೆ ಮಾಡಿ, ಪುನಃ ದೀವಿಗಿಗೆ ಬಂದು ಭಕ್ತರನ್ನು ಪೊರೆದರು
ಶ್ರೀಧರರ ಕರೆ: ರಾಮಾನಂದ ಅವಧೂತರು ದೀವಗಿಯ ಮಲ್ಲಿಕಾರ್ಜುನ ದೇವಾಲಯದಲ್ಲಿ ಉಳಿದುಕೊಂಡಿರುವುದು ವರದಳ್ಳಿಯಲ್ಲಿ ನೆಲೆಸಿರುವ ಭಗವಾನ್ ಶ್ರೀಧರಸ್ವಾಮಿಗಳಿಗೆ ತಿಳಿಯಿತು. ಭಗವಾನ್ ಶ್ರೀಧರಸ್ವಾಮಿಗಳು ನಾಡಿನಾದ್ಯಂತ ಧರ್ಮಶ್ರದ್ಧೆ ಮೂಡಿಸಿ, ವರದಳ್ಳಿಯಲ್ಲಿ ಧರ್ಮಧ್ವ ಜವನ್ನು ಸ್ಥಾಪನೆ ಮಾಡಿ, ಇನ್ನು ವಿರಮಿಸುವ ನಿರ್ಧಾರ ಮಾಡಿದ್ದರು ಆದರೆ ತನ್ನ ನಂತರದಲ್ಲಿ ತಮ್ಮ ಉತ್ತರಾಧಿಕಾರಿಯಾಗಿ, ಭಕ್ತರನ್ನು ಪೊರೆಯುವ ಸಮರ್ಥರಾದ ಯೋಗ ಸಂಪನ್ನ ರು ಯಾರಿದ್ದಾ ರೆ ಎಂದುಕೊಳ್ಳುತ್ತಿರುವಾಗಲೇ ರಾಮಾನಂದರು ಕೊಳಗಿಬೀಸನ್ನು ತೊರೆದು ದೀವಗಿಗೆ ಬಂದಿರುವುದು ತಿಳಿದುಬಂತು. ಕೂಡಲೇ ರಾಮಾನಂದರಿಗೆ “ವರದಳ್ಳಿಯಲ್ಲಿ ನೀನೇ ಬಂದು ಉಳಿದು ಧರ್ಮರಕ್ಷಣೆ ಮಾಡಿದರೆ ಸಜ್ಜನರಿಗೆಲ್ಲ ಸುಖಶಾಂತಿ ಸಿಗುವುದು, ಕಾರಣ ನೀನು ಇಲ್ಲಿಗೆ ಬಾ'' ಎಂದು ಕರೆ ಕಳಿಸಿದರು. ಶ್ರೀಧರಸ್ವಾಮೀಜಿಯವರ ಆದೇಶವೆಂದರಿತು, ಕೀಲಕ ಸಂವತ್ಸರದಲ್ಲಿ ರಾಮಾನಂದರು ವರದಳ್ಳಿಗೆ ಸಾಗಿದರು. ಶೀಧರರು ರಾಮಾನಂದರನ್ನು ಆದರದಿಂದ ಬರಮಾಡಿಕೊಂಡರು. ಭಕ್ತರ ಸೇವಾಕಾರ್ಯ, ಸನ್ಯಾಸಧರ್ಮ ಇವನ್ನು ಕುರಿತು ಬೋಧನೆ ನೀಡಿದರು. ಹೀಗೆ ಒಂದು ವರ್ಷವೇ ಕಳೆಯಿತು. ಭಗವಾನ್ ಶ್ರೀಧರಸ್ವಾಮಿಗಳು ತಮ್ಮ ಜೀವನದ ನಿರ್ಯಾಣ ಸಮೀಪಿಸಿದಂತೆ ಸಮಾಧಿಸ್ಥರಾಗಿ, ಮುಕ್ತರಾದರು ಪರಬ್ರಹ್ಮನೊಂದಿಗೆ ಒಂದಾದರು. ವರದಪುರದ ಮಹಾಯೋಗಿ ಶ್ರೀಧರರು "ರಾಮಾನಂದರೇ ತಮ್ಮ ಉತ್ತರಾಧಿಕಾರ' ಎಂದು ಸ್ಪಷ್ಟಪಡಿಸಿದ್ದರು. ಗುರುಗಳ ಹೇಳಿಕೆ ಧ್ವನಿ ಮುದ್ರಿಕೆಯಲ್ಲಿ ಮುದ್ರಿತವೂ ಆಗಿತ್ತು, ಅಂದು ಭಗವಾನರ ಮಾತನ್ನು ಕಡೆಗಣಿಸಲಾಗದೇ ರಾಮಾನಂದರು ಒಪ್ಪಿಕೊಂಡಿದ್ದರು. ಆದರೆ ಹೀನ ಮಾನವರ ಬುದ್ಧಿ ಕೊಳಗಿಬೀಸಿನಂತೆ ಇಲ್ಲಿಯೂ ಪ್ರಕಟವಾಯಿತು. ವರದಳ್ಳಿಯಲ್ಲಿ ಮೊದಲಿನಿಂದಲೂ ಇದ್ದ ಕೆಲ ವ್ಯಕ್ತಿಗಳಿಗೆ ಕ್ಷೇತ್ರದ ಆಡಳಿತದ ಮೇಲೆ ಕಾಕದೃಷ್ಟಿ ಇತ್ತು. ಶ್ರೀಧರಸ್ವಾಮಿಯವರ ಕಲ್ಪನೆಯ ವರದಳ್ಳಿಯನ್ನು ಮುನ್ನಡೆಸಿಕೊಂಡು ಹೋಗಲು ಸಮರ್ಥರಾಗಿದ್ದ ರಾಮಾನಂದರಿಗೆ ಆಡಳಿತದಲ್ಲಿ ಹಸ್ತಕ್ಷೇಪ, ರಾಜಕೀಯದ ವಾತಾವರಣ ತಿಳಿದಾಗ ತಕ್ಷಣ ಅದನ್ನು ತೊರೆಯಲು ನಿರ್ಧರಿಸಿದರು. ಸ್ವಾಮೀಜಿಯವರು ವರದಳ್ಳಿಯಿಂದ ನಿರ್ಗಮಿಸುತ್ತಾರೆ ಎಂಬ ವಿಚಾರ ಭಕ್ತ ಸಮುದಾಯಕ್ಕೆ ತಿಳಿದುಬಂತು. ಕೂಡಲೇ ದೀವಗಿಯಲ್ಲಿರುವಾಗ ರಾಮಾನಂದರ ತಪಃ ಪ್ರಭಾವ ಅರಿತಿದ್ದ ಕೆಲವು ಸದ್ಭಕ್ತರು ವರದಳ್ಳಿಗೆ ಧಾವಿಸಿ, ತಮ್ಮಲ್ಲಿಗೇ ಬಂದು ನೆಲೆಸಬೇಕೆಂದು ವಿನಂತಿಸಿಕೊಂಡರು. ಭಕ್ತವತ್ಸಲ, ಭಕುತಜನ ಪ್ರೀತ ರಾಮಾನಂದರು ದೀವಗಿಗೆ ಬಂದು ನೆಲೆಸಲು ಒಪ್ಪಿ, ವರದಳ್ಳಿಯ ಸಮಸ್ತ ಜವಾಬ್ದಾರಿಯನ್ನೂ ಅಲ್ಲಿನವರಿಗೇ ಒಪ್ಪಿಸಿ, ಹೊರಟುಬಿಟ್ಟರು(1971). ಕೊಳಗಿಬೀಸಿನಿಂದ ಬರುವಾಗ ತಂದುದು ಕೇವಲ ಅವಧೂತರ ಭಾವಚಿತ್ರ, ಈಗ ವರದಳ್ಳಿಯಿಂದ ಶ್ರೀಧರರು ನೀಡಿದ ಪಾದುಕೆ ಮತ್ತು ಅವರ ಭಾವಚಿತ್ರ ಇವಿಷ್ಟೇ. ಅವನ್ನೆಲ್ಲ ಮಲ್ಲಿಕಾರ್ಜುನನ ಆಲಯದಲ್ಲೇ ಇಟ್ಟು ಪೂಜಿಸಿ, ಅಲ್ಲಿಗೆ ಬರುವ ಭಕ್ತರನ್ನು ಪ್ರೀತಿಯಿಂದ ಉದ್ಭರಿಸಿದರು. ಚಿಕ್ಕದಾದ ಆಶ್ರಮದಲ್ಲಿ ಸ್ವಾಮೀಜಿಯವರು ರಾಮದೂತ ಮಾರುತಿಯ ಜೊತೆಗೆ ವಾಸಿಸುತ್ತ, ಭಕ್ತರಿಂದ ಭಿಕ್ಷೆ ಪಡೆದು ಶರಣರನ್ನುದ್ಧರಿಸುತ್ತಲಿದ್ದರು.
ಭಗವಾನ್ ಶ್ರೀಧರಸ್ವಾಮೀಜಿಯವರ ಕರೆ
ಅವಧೂತರ ಜೊತೆ ಶ್ರೀ ರಾಮಾನಂದರು
ಆಶ್ರಮ ನಿರ್ಮಾಣ: ಸದ್ಗುರು ಶ್ರೀರಾಮಾನಂದರು ದೀವಗಿಯ ಮಲ್ಲಿಕಾರ್ಜುನನಲ್ಲಿ ನೆಲೆಸಿರುವಾಗ ಗದ್ದೆ ಬಯಲಿನಲ್ಲಿ ಹಾಕಿದ್ದ, ತಟ್ಟಿ ಕಟ್ಟಿದ ಚಪ್ಪರವೇ ಆಶ್ರಮವಾಗಿತ್ತು. ಗುರುಗಳ ಸ್ನಾನಕ್ಕೆ ಡಬ್ಬಿಯಲ್ಲಿ ನೀರು ಕಾಯಿಸುತ್ತಿದ್ದರು. ಗದ್ದೆ ಬೈಲಿನಲ್ಲೇ ಭಿಕ್ಚವಾಗುತ್ತಿತ್ತು. ಅಂತಹ ಅನನುಕೂಲ ಪರಿಸರದಲ್ಲೂ ರಾಮಾನಂದ ಅವಧೂತರು ಚಿನ್ಮಯರಾಗಿ ಭಕ್ತಾದಿಗಳ ಸಂಕಷ್ಟ ನಿವಾರಣೆಗೈಯುತ್ತಿದ್ದರು. ಹೀಗಿರುವಾಗ ಭಕ್ತನೊಬ್ಬನು ಮಲ್ಲಿಕಾರ್ಜುನ ದೇಗುಲದ ಪಕ್ಕದಲ್ಲಿ ಹಾಗೂ ಶಾಂತಿಕಾಪರಮೇಶ್ವರಿ ದೇವಾಲಯದ ಮುಂಭಾಗದಲ್ಲಿರುವ ಚಿಕ್ಕ ಜಾಗವೊಂದನ್ನು ಸ್ವಾಮೀಜಿಯವರಿಗೆ ಆಶ್ರಮ ಕಟ್ಟಿಕೊಳ್ಳಲು ನೀಡಿದನು. ಹೀಗಾಗಿ ಅಲ್ಲಿ ಆಶ್ರಮವನ್ನು ನಿರ್ಮಿಸಲು ತೀರ್ಮಾನವಾಯಿತು. ಗುರುಗಳ ಮನದಲ್ಲಿ ಈ ಯೋಚನೆ ಬಂದದ್ದೇ ತಡ, ಯಾರೋ ಭಕ್ತರೊಬ್ಬರು ನಾರಾಯಣ ಶೆಟ್ಟಿಯ ಹೆಸರನ್ನು ಸೂಚಿಸಿದರು. ವಿಷಯ ತಿಳಿದು ನಾರಾಯಣನೇ ಅಲ್ಲಿಗೆ ಬಂದು ಸ್ವಾಮಿಯ ಪಾದಕ್ಕೆರಗಿದನು. ಸ್ವಾಮಿಯ ಅಪ್ಪಣೆ ಪಡೆದು, ಆ ಸ್ಥಳದಲ್ಲಿ ಪಾಯ ತೋಡಿ, ನೆಲಗಟ್ಟು, ಗೋಡೆ ಹಾಕಿ ಹುಲ್ಲಿನ ಛಾವಣಿಯಿಂದ ಆಶ್ರಮವನ್ನು ಸಿದ್ದಪಡಿಸಿದನು. ಗುರುವರ್ಯರು ಅಲ್ಲಿಯೇ ವಾಸಮಾಡಿದರು. ವೀರ ಮಾರುತಿ ಆಶ್ರಮ ನಿರ್ಮಾಣವಾಗುವುದನ್ನೇ ಕಾಯುತ್ತಿದ್ದ ನೋ ಎಂಬಂತೆ ಅದೊಂದು ದಿನ ಭಕ್ತನೊಬ್ಬನು ಬಂದು, ತನಗೆ ಜಲದಲ್ಲಿ ದೊರೆತ ಮೂರ್ತಿಯಿದೆಂದು ಮಾರುತಿಯ ಮೂರ್ತಿಯನ್ನು ಗುರುಗಳಿಗೆ ನೀಡಿದ. "ಮೂರ್ತಿಯನ್ನು ಅರ್ಚಿಸಲಿಕ್ಕಾಗಿ ದೇವಾಲಯಕ್ಕೆ ನೀಡಿದ್ದಲ್ಲದೆ, ಪೂಜಿಸಲಿಕ್ಕಾಗಿ ಖರ್ಚಿಗೆಂದು ಈ ವರೆಗೆ ಬಹಳಷ್ಟು ನೀಡ ಬಸವಳಿದಿದ್ದೇನೆ. ಈಗ ನೀವೇ ರಕ್ಷಿಸಬೇಕು'' ಎಂದು ಕಾಲಿಗೆರಗಿದನು. ಸ್ವಾಮೀಜಿ ಹನುಮನ ಮೂರ್ತಿಯನ್ನೇ ನೋಡಿದರು. ಎಷ್ಟು ಸಂತಸವಾಯ್ತೋ ಅದನ್ನು ನೋಡಿ. ಆದರೂ ಮೂರ್ತಿಯನ್ನು ತಂದ ಸುಬ್ರಾಯ ದೇಶಭಂಡಾರಿಯನ್ನು ಹತ್ತಿರಕ್ಕೆ ಕರೆದು "ನೋಡು ನನಗೇ ಸರಿಯಾದ ನೆಲೆಯಿಲ್ಲ. ಅದರಲ್ಲಿ ಇವನನ್ನು ಹೇಗೆ ಇಟ್ಟು ಕೊಳ್ಳು ವುದು? ಆದರೂ ನೀನು ಪ್ರೀತಿಯಿಂದ ನೀಡಿದರೆ ನಾನಿಟ್ಟು ಪೂಜಿಸುತ್ತೇನೆ'' ಎಂದರು. ಮನದಲ್ಲಿ ಯೋಚನೆ ಬಂತು. "ಸೀತಾದೇವಿಯು ಮಾರುತಿಯಲ್ಲಿ ನೀನೆಲ್ಲಿರುವೆಯೋ ಅಲ್ಲಿ ತಾನು ರಾಮಚಂದ್ರನೊಟ್ಟಿಗೆ ವಾಸ ಮಾಡುವೆನು ಎಂದು ಹೇಳಿದ ಮಾತು. ಅಂದರೆ ಇವನನ್ನು ಮುಂದು ಮಾಡಿ, ಸೀತಾರಾಮಚಂದ್ರರೇ ಇಲ್ಲಿ ವಾಸ ಮಾಡಲು ಬರುತ್ತಿದ್ದಾರೆ' ಎಂದು. ಎಲ್ಲಿ ರಾಮನೋ ಅಲ್ಲಿ ಹನುಮನು ಎಂಬ ಮಾತು ನಿಜವಾಗಿತ್ತು. ಅಂದು ಕೀಲಕ ಸಂವತ್ಸರ (1969)ದಲ್ಲಿ ಕೊಳಗಿಬೀಸಿನಿಂದ ದೀವಗಿಗೆ (ದಕ್ಷಿಣದೆಡೆ) ಬಂದು, ಶ್ರೀಧರರ ಕರೆಬಂದು, ವರದಳ್ಳಿಗೆ ಹೋಗಿ ಮತ್ತೆ ದೀವಗಿಗೆ ಬರುವ ಹೊತ್ತಿಗೆ (1972) ಮೂರು ವರ್ಷಗಳು ಸಂದಿದ್ದವು. ಸುಬ್ರಾಯ ದೇಶಭಂಡಾರಿ ಸ್ವಾಮೀಜಿಯವರ ಬಳಿ ಹೇಳಿದ್ದು ಮೂರು ವರ್ಷಗಳ ಹಿಂದೆ ತನಗೆ ಬಗ್ಗೋಣದಲ್ಲಿ ಸೇತುವೆ ನಿರ್ಮಿಸುವಾಗ ಜಲದಲ್ಲಿ ದೊರಕಿದ ಮೂರ್ತಿಯೆಂದು. ಸ್ವಾಮೀಜಿಯವರು ಉತ್ತರದಿಂದ ಬಂದು ಅಫನಾಶಿನಿ ತೀರದಲ್ಲಿ ನಿಂತಿರುವಾಗ ಹನುಮ ಬಗ್ಗೋಣಿನಿಂದ ಉತ್ತರದ ಅಫನಾಶಿನೀ ತೀರದಲ್ಲಿ ಬಂದು ಸೇರಿದ. ಹೀಗೆ ಇಬ್ಬರೂ (ಮೂರು ವರ್ಷದ ಬಳಿಕ) ದೀವಗಿಯಲ್ಲಿ ನೆಲೆನಿಂತರು. ರಾಮನ ಗುಣ ಸಂಕೀರ್ತನೆ ಹಾಡು, ಭಜನೆ ಇವನ್ನೆಲ್ಲ ಕೇಳುತ್ತ ಪ್ರಸನ್ನನಾದ ರಾಮದೂತನು ದೀಪಿಕಾಪುರದಲ್ಲಿ ನಿಂತ. ಹೀಗೆ ನಿಂತ ಮಾರುತಿಯನ್ನು ಅನುದಿನವೂ ಪೂಜಿಸಿ, ಸೇವಿಸುತ್ತಾ ಶ್ರೀಧರರ ಪಾದುಕೆಗಳನ್ನು ಪ್ರೀತ್ಯಾದರಗಳಿಂದ ಸೇವಿಸಿ, ತಮ್ಮೆಡೆಗೆ ಬಂದ ಭಕ್ತರನ್ನು ಉದ್ದರಿಸುತ್ತ ಭಕ್ತರು ನೀಡಿದ ಭಿಕ್ಷಗಳನ್ನು ಪಡೆಯುತ್ತ ದೀಪಿಕಾಪುರದ ದೀಪಕನಾಗಿ' ಗುರು ಶೋಭಿಸುತ್ತಿದ್ದರು.
ಗುರುವರ್ಯರ ದರ್ಶನ ಪಡೆದು ಪುನೀತರಾಗುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಿತು... ಬರುವ ಜನರಿಗೆ. ದೇವಾಲಯದ ಸ್ಥಳವು ಚಿಕ್ಕದಾದ್ದರಿಂದ ತೊಂದರೆಯಾಗುವುದನ್ನು ಮನಗಂಡು, ದೇವಸ್ಥಾ ನದ ಪಕ್ಕದ ಜಾಗದ ಯಜಮಾನನನ್ನು ಮಾತನಾಡಿಸಿದರು. ಆತ ಒಪ್ಪಿಕೊಂಡಾಗ ಅರ್ಧ ಎಕರೆ ಜಾಗವನ್ನು ಕ್ರಯಕ್ಕೆ ಪಡೆದರು. ಈಗ ಮಾರುತಿಗುಡಿ, ಚಂದ್ರಶಾಲೆ, ಮುಖಮಂಟಪ ಇವನ್ನೆಲ್ಲ ಮಾಡುವ, ಭಕ್ತರಿಗೆ ನಿರಾಳವಾಗಿ ಬಂದು ಹೋಗಲು ಅನುಕೂಲವಾಗುವ ರೀತಿಯಲ್ಲಿ ಆಶ್ರಮ ರಚಿಸುವ ಸಂಕಲ್ಪ ಮಾಡಿ, ಕಟ್ಟುವ ಕೆಲಸವನ್ನು ನಾರಾಯಣ ಶೆಟ್ಟಿಗೇ ವಹಿಸಿದರು. ಗೋಸೇವೆಗಾಗಿ ಆಶ್ರಮಕ್ಕೆ ತಾಗಿಯೇ ಗೋಶಾಲೆಯನ್ನು ಸ್ವಾಮೀಜಿ ನಿರ್ಮಿಸಿದರು. ಸ್ವಾಮೀಜಿಯವರಿಗೆ ಗೋವುಗಳ ಮೇಲೆ ಅತೀವ ಪ್ರೀತಿ. ಗೋಸಂಪತ್ತು ಆಶ್ರಮವನ್ನೇ ತುಂಬಿತು. “ಸ್ವಾಮೀಜಿಯವರು ಮನಸ್ಸಿನಲ್ಲಿ ಸಂಕಲ್ಪ ಮಾಡುವುದೊಂದೇ ತಡ ನಿರ್ಮಾಣ ಕೆಲಸ ಆಗಿಬಿಟ್ಟಿತು'' ಎಂದು ನಾರಾಯಣ ಶೆಟ್ಟಿ ಹೇಳುತ್ತಾರೆ. ಗುರುಗಳ ಸಂಕಲ್ಪ, ಮಾರುತಿಯ ಸಂಕಲ್ಪ ಬೇರೆಯಲ್ಲ. ಕೆಲಸ ಪ್ರಾರಂಭವಾಗಿ, ಮಾರುತಿಯ ಮಂದಿರ, ಅದರ ಬಲಗಡೆ ಭಿಕ್ಪಕ್ಕಾಗಿ ಕೊಠಡಿ ಹೀಗೆ ಎಲ್ಲ ಅಗತ್ಯಗಳೂ ಪೂರೈಸಲ್ಪಟ್ಟವು. ಭಕ್ತರೂ ತಮ್ಮ ತನು-ಮನ-ಧನಗಳಿಂದ ಮಂದಿರ ಕಾರ್ಯದಲ್ಲಿ ನೆರವಾದರು. ಭಕ್ತರ ಸಂಖ್ಯೆಯೂ ಅಧಿಕವಾಯಿತು. ಸದ್ಗುರು ರಾಮಾನಂದರು ಬರುವ ಭಕ್ತರನ್ನು ಪ್ರೀತಿಯಿಂದ ಬರಮಾಡಿಕೊಂಡು, ಅವರ ಸಂಕಷ್ಟ ನಿವಾರಣೆಗೆ ಎಂದಿನಂತೆ ತೊಡಗಿಕೊಂಡಿದ್ದರು. ಗುರುವು ಮಂದಸ್ಥಿ ತರಾಗಿ ಒಮ್ಮೆ ಭಕ್ತನ ಕಡೆ ನೋಡಿದರೆ ಸಾಕು, ಅದು ಆತನ ಬಾಳಿನುದ್ದಕ್ಕೂ ಕರುಣಾ ಶರಧಿಯಾಗಿ ಕಾಯುವುದು. ಸರ್ವ ಸಂಪದವೂ ಅಲ್ಲಿ ಸಾಕಾರವಾಗುವುದು. ಸದ್ಗುರು ಶ್ರೀ ರಾಮಾನಂದಾವಧೂತ ಸ್ವಾಮೀಜಿಯವರ ಮಹಿಮೆ ಅಪಾರ. ತಮ್ಮ ಜೀವನದಲ್ಲಿ ಅನುಗ್ರಹ ಹೊಂದಿದವರು ಒಮ್ಮೆ ಸ್ವಾಮಿಯ ಪಾದಕಮಲಗಳಲ್ಲಿ ಬಿದ್ದು ಬೇಡಿದವನು ತನ್ನ ಜೀವನದಲ್ಲಾದ ಅತಿಶಯವಾದ ಪರಿವರ್ತನೆ ಸಂತಸವನ್ನು ಎಂದೂ ಮರೆಯದಿರುವನು. ಆಗಾಗ ಸ್ವಾಮೀಜಿಯವರನ್ನು ಕಾಣಲು ಪ್ರಸಾದ ಕೃಪೆ ಪಡೆಯಲು ಬಂದು ಶ್ರೇಯೋಭಾಗಿಗಳಾಗುತ್ತಿದ್ದಾರೆ.
ಗುರು ಮಹಿಮೆ: ಗುಂಡಬಾಳೆ ಮುಖ್ಯಪ್ರಾಣ - ಹಡಿನಬಾಳದ ಸತ್ಯ ಹೆಗಡೆಯವರು ಯಕ್ಷಗಾನ ಕಲಾವಿದರಾಗಿ ಗುಂಡಬಾಳೆಯಲ್ಲಿ ಮೇಳದ ಯಜಮಾನರಾಗಿದ್ದ ರು. ಪ್ರತಿ ಭರ್ಷ ಐವತ್ತು, ಅರವತ್ತು ಹರಕೆ ಆಟಗಳು ಸಿಗುತ್ತಿ ದ್ಡವು. ಹಾಗೆ ಒಂದು ವರ್ಷ” ಸಿಕ್ಕಿದ್ದು ಕೇವಲ ಹದಿನೆಂಟು ಇಪ್ಪತ್ತು ಆಟಗಳು! ಸಂಕಟ ಬಂದದ್ದು ಮೇಳದ ಯಜಮಾನನಿಗೆ, ಈ ತೊಳಲಾಟವನ್ನು ಯಾರಲ್ಲಿ ಹೇಳುವುದು? ತಾನು ನಂಬಿದ ಪ್ರತ್ಯಕ್ಷ ಆಂಜನೇಯ ಸ್ವರೂಪಿಗಳಾದ ಸದ್ಗುರು ರಾಮಾನಂದರಲ್ಲೇ ಹೇಳುವುದೆಂದು ತೀರ್ಮಾನಿಸಿ, ಸದ್ಗುರುಗಳಲ್ಲಿ ತನ್ನ ಸಂಕಟವನ್ನು ನಿವೇದಿಸಿಕೊಂಡರು. ಆ ವರ್ಷ ಹೆಗಡೆಯವರು ತನ್ನ ಹರಕೆ ಆಟಕ್ಕೆ ಸ್ವತಃ ರಾಮಾನಂದರನ್ನೇ ಕರಕೊಂಡು ಹೊರಟರು. ಆಗ ಗುಂಡಬಾಳೆಗೆ ರಸ್ತೆ ವಾಹನಗಳಿಲ್ಲದ್ದರಿಂದ (1973) ಗುಂಡಬಾಳ ಹೊಳೆಯಲ್ಲಿ ದೋಣಿಯ ಮೇಲೆ ಗುರುಗಳನ್ನು ಕರೆದುಕೊಂಡು ಹೋದರು. ಗುಂಡಬಾಳೆಗೆ ತಲುಪಿದ ಸದ್ಗುರುಗಳು ಮಾರುತಿಯ ಬಳಿ ಸಾರಿ ಅಕ್ಬತೆಯನ್ನು ಮಾರುತಿಯ ಮೇಲೆರಚಿದರು. ಆಮೇಲೆ ಬೆಳತನಕ ಆಟ ನೋಡಿ ಬಂದರು. (ನಂತರ ಪ್ರತಿ ವರ್ಷವೂ ಸತ್ಯ ಹೆಗಡೆಯವರ ಆಟಕ್ಕೆ ಅವರ ಮೇಳ ಇರುವತನಕವೂ (1984) ಗುರುಗಳು ಗುಂಡಬಾಳೆಗೆ ಹೋಗಿ ಬರುತ್ತಿದ್ದರು.) ಮಾರನೆಯ ವರ್ಷಕ್ಕೆ ನೂರಾ ಇಪ್ಪತ್ತು ಸೇವೆ ಆಟಗಳಾದವು. ಅಲ್ಲದೇ ಮುಂದಿನ ವರ್ಷಕ್ಕಾಗಿ ಅರವತ್ತು - ಅರವತ್ತೈದು ಆಟಗಳು ಉಳಿದವು! ಪ್ರತಿ ವರ್ಷವೂ ಹರಕೆಆಟಗಳ ಸಂಖ್ಯೆ ವೃದ್ಧಿಯಾಗುತ್ತ ಹೋಯಿತು. ಆಟಗಳೇ ಇಲ್ಲದೆ ಭಣಗುಡುತ್ತಿದ್ದ ರಂಗಸ್ಥಳ ನಿರಂತರ ಆಟದಿಂದ ಯಕ್ಷಗಾನ ಕಾಶಿಯೆಂದೇ ಗುಂಡಬಾಳೆ ಪ್ರಸಿದ್ಧವಾಯ್ತು
ಚಂದಾವರದ ಆಂಜನೇಯ - ಚಂದಾವರದಲ್ಲಿಯೂ ಮಾರುತಿಯ ಸೇವೆ ಹೆಚ್ಚಾಗಲು ಶ್ರೀಗುರು ಕಾರಣರಾಗಿದ್ದಾರೆ. ತಿಂಗಳುಗಳ ಕಾಲ ಚಂದಾವರ ಮಾರುತಿ ದೀವಗಿಯಲ್ಲಿ ನೆಲೆಸುತ್ತಿದ್ದನು. ಆಶ್ರಮದಲ್ಲಿ ಬಂದುಳಿದ ಹನುಮಂತನ ಪಲ್ಲಕ್ಕಿಯನ್ನು ಹೊತ್ತುಕೊಂಡು ಹೊರಟರೆ ಅಂಗಳದವರೆಗೆ ಹೋಗಿ ಪುನಾ ಆಶ್ರಮದೊಳಗೇ ಬಂದು ಕುಳಿತುಕೊಳ್ಳು ತ್ತಿತ್ತು. ಚಂದಾವರದ ' ಹನುಮನಿಗೆ ರಾಮಾನಂದರನ್ನು ಬಿಟ್ಟು ಹೋಗುವ ಮನಸ್ಸೇ ಇರುತ್ತಿರಲಿಲ್ಲ. ಹೀಗೆ ತಿಂಗಳುಗಟ್ಟಲೆ ಉಳಿದರೂ ಬೇರೆಡೆ ಹೋಗಲೊಪ್ಪದ ಹನುಮನಿಗೆ 'ಹೋಗಿ ಬಾರೊ' ಎಂದು ಗುರುಗಳು ಅಪ್ಪಣೆ ಕೊಡಿಸಿದ ಮೇಲೆ ಅನಿವಾರ್ಯವಾಗಿ ಪಲ್ಲಕ್ಕಿ ಹೊರಡುತ್ತಿತ್ತು. ಪ್ರತಿ ಸಲವೂ ಈ ದೃಶ್ಯವನ್ನು ಕಂಡು ಭಕ್ತರು ಆನಂದ ಆಶ್ಚರ್ಯಗೊಳ್ಳುತ್ತಿದ್ದರು.
ಗೇರುಸೊಪ್ಪೆಯ ವೀರಮಾರುತಿ - ಗೇರುಸೊಪ್ಪಾ ಸೀಮೆಯ ಮಾರುತಿರಾಯ ಗೇರುಸೊಪ್ಪಾದಲ್ಲಿ ಹೊಳೆಯಾಚೆ ನಿಂತಿದ್ದ. ಸಹಸ್ರಾರು ಜನರಿಂದ ಪೂಜೆ ಪಡೆಯುತ್ತಿದ್ದ. ಕಾರಣಾಂತರದಿಂದ 1980ರಲ್ಲಿ ಶ್ರೀಗಣೇಶ ಭಟ್ಟರು (ಸ್ವಾಮೀಜಿಯವರ ಸದ್ಭಕ್ತರು) ಸೀಮೆ ದೇವಸ್ಥಾನ ತೊರೆದು ಬರಬೇಕಾಗಿ ಬಂತು. ಗಣೇಶ ಭಟ್ಟರಿಗೆ ಊಟಕ್ಕೂ ಇಲ್ಲದ ಸ್ಥಿತಿ ಜತೆಗೆ ಮೂವರು ಮಕ್ಕಳನ್ನೊಳಗೊಂಡ ಸಂಸಾರ. (ಆಗ ಸ್ವಾಮೀಜಿಯವರೇ ಈ ಸಂಸಾರವನ್ನು ಸಲಹಿದ್ದರು. 1982ರಲ್ಲಿ ಗುರುಗಳೇ ಸ್ವತಃ ಮಾರುತಿಯ ಮೂರ್ತಿಯೊಂದನ್ನು ನೀಡಿದ್ದರು. ನಂತರ 1980ರಲ್ಲಿ ಸ್ವಾಮೀಜಿಯವರ ಹಸ್ತದಿಂದಲೇ ಮಾರುತಿಯ ಪ್ರತಿಷ್ಠೆಯಾಯಿತು.) ಬಂಗಾರಮಕ್ಕಿಯಲ್ಲಿ ಆಂಜನೇಯ ನೆಲೆ ನಿಂತು ಅನೇಕ ವರ್ಷಗಳಾಗಿತ್ತು. ಅದೊಂದು ದಿನ ಬಂಗಾರಮಕ್ಕಿಯ ಮಾರುತಿಯ ಅರ್ಚಕರಾದ ಗಣೇಶಭಟ್ಟರು ಸ್ವಾಮೀಜಿಯವರಲ್ಲಿ ಹನುಮನ ಮೂರ್ತಿ ಪ್ರತಿಷ್ಠೆಮಾಡಿದ ಜಾಗದಲ್ಲಿ ಬಿರುಕುಗೊಂಡಿದ್ದು, ಮೂರ್ತಿಯ ಪುನರ್ ಪ್ರತಿಷ್ಠಾಪನೆಯನ್ನು ತಾವೇ ನೆರವೇರಿಸಿಕೊಡಬೇಕು ಎಂದು ಕೇಳಿಕೊಂಡರು. ಸ್ವಾಮೀಜಿ ಆದೀತು ಎಂದು, ಇಂಥ ದಿನ ಬರುತ್ತೇನೆ ಎಂದರು. ನಿಶ್ಚಯವಾದ ದಿನದಂದು ಸ್ವಾಮೀಜಿ ಕಾರಿನಲ್ಲಿ ಹೊರಟರು. ವಾಹನ ಅಘನಾಶಿನಿ ಸೇತುವೆಯನ್ನು ಮಾತ್ರ ದಾಟಿತ್ತು. ಅಲ್ಲೊಂದು ತಿರುವು. ಮುಂದಿನಿಂದ ಬಸ್ಸೊಂದು ವೇಗವಾಗಿ ಬಂತು. ಸ್ವಾಮೀಜಿ ಚಾಲಕನನ್ನು ಕೂಡಲೇ ಎಚ್ಚರಿಸಿದ್ದರು. ಬಸ್ಸು ಸುಂಯ್ಯೆಂದು ಬಲಬದಿಯಿಂದಲೇ ದಾಟಿ ಹೋಯಿತು. ಯಾವ ಚಮತ್ಕಾರದಲ್ಲಿ ಆ ಅವಘಡ ತಪ್ಪಿತು ಎಂಬುದೇ ಚಾಲಕನಿಗೆ ' ಅರ್ಥವಾಗಲಿಲ್ಲ. ಕಾರು ಎಡಗಡೆಯ ಕೊರಕಲಲ್ಲೂ ಬಿಳಲಿಲ್ಲ. ಚಾಲಕನಂತೂ ದಿಗ್ಭ್ರಾಂತನಾಗಿದ್ದ. ಪ್ರತಿಷ್ಠಾದಿನದ ಮುನ್ನಾದಿನವೇ ಸ್ವಾಮಿಗಳು ಬಂಗಾರಮಕ್ಕಿ ಸೇರಿದ್ದರು. ವಿಪ್ರರು ಅದಾಗಲೇ ನಾಳಿನ ಕಾರ್ಯದ ಸಿದ್ಧತೆಯಲ್ಲಿದ್ದರು. ಇದ್ದಕ್ಕಿದ್ದಂತೆ ವಿಪ್ರ ಗಣೇಶ ಭಟ್ಟರಿಗೆ ಭಾರ ಬಂತು. ಓಡಿ ಬಂದು ಸ್ವಾಮೀಜಿಯವರ ಕೈ ಹಿಡಿದು ದೇವಾಲಯದ ಒಳಮಂಟಪಕ್ಕೆ ಕರೆದುಕೊಂಡು ನಡೆದರು. ಮಾರನೇ ದಿನ ಮಾರುತಿಯನ್ನು ಸ್ಥಾಪಿಸಬೇಕೆಂದಿರುವ ಸ್ಥ ಳವನ್ನು ಎತ್ತರವಾಗಿ ಕಟ್ಟಿದ್ದರು. ನಾಳೆ ಹನುಮನನ್ನು ಕೂಡ್ರಿಸುವ ಜಾಗದಲ್ಲಿ ಸ್ವಾಮೀಜಿಯವರನ್ನು ಕೂಡ್ರಿಸಿಬಿಟ್ಟರು. ಹನುಮನಂತೆ ತನ್ನ ಬಲಗಾಲನ್ನು ಊರಿ, ಎಡ ಮಂಡಿಯ ಮೇಲೆ ತನ್ನ ಕೈಯಿಟ್ಟುಕೊಂಡು ""ಅಪಾರ ಮಹಿಮಾ ಸಂಪನ್ನ ಗುರು ನೀನು, ಗುರುಣಾಂ ಗುರು. ಸಾಕ್ಷಾತ್ತ್ ಶ್ರೀ ರಾಮಚಂದ್ರನು , ನಾನು ರಾಮದೂತ. ಭೇದವೇಕೆ, ಇಂದು ನೀನು ಈ ಸ್ಥಳದಲ್ಲಿ ಕುಳಿತುಕೋ. ಆ ಪವಿತ್ರ ಸ್ಥಳದಲ್ಲಿ ನಾಳೆ ನಾನು ನಿಂತು ಬಿಡುತ್ತೇನೆ'' ಎಂದು ಕುಣಿದಾಡುತ್ತಾ ಸ್ವಾಮೀಜಿಯವರ ಪ್ರದಕ್ಷಿಣೆ ಹಾಕಿದರು. ಮಾರನೆಯ ದಿನ ದೀವಗಿ ಸ್ವಾಮೀಜಿಯವರ ಮತ್ತು ಗೋಸ್ವಾಮಿಗಳ ಹಸ್ತದಿಂದಲೇ ವೀರಮಾರುತಿಯ ಮೂರ್ತಿಯ ಪ್ರತಿಷ್ಠಾಪನಾಕಾರ್ಯ ನೆರವೇರಿತು. ಒಂದೆಡೆ ಕಲಾವೃದ್ಧಿ ಹವನ ನಡೆಯುತ್ತಿದ್ದಂತೆ ಇನ್ನೊಂದೆಡೆ ಕಲಶಾಭಿಷೇಕ ಕಾರ್ಯಕ್ರಮ ಜರುಗಿತು. ಮಾರುತಿದೇವನಿಗೆ ಕಳೆಯೇರುತ್ತಿದ್ದಂತೆ ಮಾರುತಿದೇವನ ಉಪಾಸಕರಾದ ಪರಮಹಂಸನೆ, ಸಜ್ಜನರ ಮನವನ್ನು ಸೂರೆಗೊಳ್ಳುವ ನಿನ್ನನ್ನೇ ಸದಾ ಭಜಿಸುವ ಭಕ್ತಜನರ ಹೃದಯವನ್ನು ಅಪಹರಿಸುವ, ದುರ್ಜನರ ಮನೋಮಂಡಲದಲ್ಲಿರುವ ದೌಷ್ಟ್ಯವೆಂಬ ಮತ್ತನ್ನು ಹಿಂಡಿಬಿಡುವ ಶ್ರೀ ರಾಮಚಂದ್ರ ನೀನು. ಈ ಬಂಗಾರ ಮಕ್ಕಿಯೇ ಕೈಲಾಸ. ಈ ಕೈಲಾಸಗಿರಿಯಲ್ಲಿ ಶೋಭಿಸುತ್ತಿರುವ ನೀನೇ ಪರಮೇಶ್ವರನು. ನಾನು ಸದಾ ನಿನ್ನನ್ನೇ ನೆನೆಯುವೆನು ಎಂದೂ ನನ್ನನ್ನು ಅಗಲದಿರು ದೇವಾ” “ರಾಮ (ಪರಬ್ರಹ್ಮ)ನೆಂಬ ಪದ, ಆ ತತ್ವದ ಎರಡೂ ದಡ (ಆರಂಭ- ಅಂತ್ಯ) ನೀನೇ ಆಗಿರುವೆ. ಬ್ರಹ್ಮರ್ಷಿಯಾದ ವಿಶ್ವಾಮಿತ್ರರ ಕುಲೋದ್ಭವನಾಗಿ, ಇಂದು ಕಲಿಮಲ ವಿಧ್ವಂಸಕನಾಗಿ, ಒಗಟಾಗಿರುವ ಜೀವ-ಭಾವದ ರಹಸ್ಯ ಭೋದಿಸುವವನಾಗಿ ಪರಿಶುದ್ಧ ಅಂತಃಕರಣವುಳ್ಳವನಾಗಿದ್ದೀಯಾ ಹೇ ಪರಮಹಂಸ, ರಘುಕುಲೋದ್ಭವ ಶ್ರೀ ರಾಮಚಂದ್ರ, ಶರಣರನ್ನು ಪೊರೆಯುವ ಆತುರದಲ್ಲಿ ನಿನ್ನ ಕಿಂಕರನಾದ ನನ್ನನ್ನು ಮರೆಯದಿರು. ನನ್ನೊಡೆಯನಾಗಿ, ನನ್ನ ಸಹಾಯಕನಾಗಿ ಉದ್ಧರಿಸಿ ಪೊರೆ ದೇವಾ” ಎಂದು ಭಾರ ಬಂದಿರುವಾಗಲೇ ಗುರುಗಳನ್ನು ಆಲಂಗಿಸಿಕೊಂಡು ಸಂಭ್ರಮದಿಂದ “ಜಗತ್ತನ್ನೇ ಪೊರೆಯುವ ರಾಮಚಂದ್ರ ನೀನು. ನಾನು ನಿನ್ನ ದಾಸ'' ಎಂದು ಭಾವುಕತೆಯಿಂದ ರಾಮಾನಂದ ಸ್ವಾಮಿಗಳನ್ನು ಮನದುಂಬಿ ಕೊಂಡಾಡಿದರು.
ಗೇರುಸೊಪ್ಪೆಯ ವೀರಮಾರುತಿ ದೇವಸ್ಥಾನ
ಭಕ್ತರ ಭವತಾಪವನ್ನು ಹರಿದೊಗೆದ ಮಹಿಮಾ ಸಂಪನ್ನರಾದ ಗುರುವು ಸ್ವತಃ ಕವಿಯೂ ಕವಿಗಳಿಗೆ ಕಾಮಧೇನುವೂ ಆಗಿದ್ದಾರೆ. ಭಕ್ತರ ಭವತಾಪವನ್ನು ಹರಿದೊಗೆದ ಮಹಿಮಾ ಸಂಪನ್ನರಾದ ಗುರುವು ಸ್ವತಃ ಕವಿಯೂ ಕವಿಗಳಿಗೆ ಕಾಮಧೇನುವೂ ಆಗಿದ್ದಾರೆ. ಸಕಲ ಪತಿತರನ್ನು ಪಾವನಗೊಳಿಸಿದ ದತ್ತಾತ್ರೇಯನ ಅವತಾರವೇ ಆದ ಶ್ರೀಧರಸ್ವಾಮಿಗಳ ಶಿಷ್ಯೋತ್ತಮರಾದ ರಾಮಾನಂದಸ್ವಾಮಿಗಳು ಐವತ್ನೂರು ಅಧ್ಯಾಯಗಳಿರುವ ಶ್ರೀ ದತ್ತಗುರು ಚರಿತ್ರೆಯನ್ನು ಮುಮುಕ್ಷುಗಳಿಗೆ ಅನುಕೂಲವಾಗುವಂತೆ ಸಂಕ್ಷಿಪ್ತವಾಗಿ ಐವತ್ತ್ಮೂರು ಷಟ್ಪದಿಯಲ್ಲಿ (ಭಾಮಿನಿ) ಬರೆದು ಭಕ್ತರಿಗೆ ನೀಡಿದ್ದಾರೆ. ಈವತ್ತಿನ ಅವಸರದ ದಿನದಲ್ಲಿ ದೊಡ್ಡ ಗಾತ್ರದ ಪುಸ್ತಕ ಪಠಣ ಮಾಡಲು ಜನರಿಗೆ ಪುರುಸೊತ್ತೆಲ್ಲಿ? ಹೀಗಾಗಿ ಸಂಕ್ಸಿಪ್ತ ಗುರುಚರಿತ್ರೆ, ನಿತ್ಯಪಠಣಕ್ಕೂ ಅನುಕೂಲವಾಗಿದೆ.
ತ್ರಿವೇಣಿಸಂಗಮದ ಸನ್ನಿವೇಶ ಮಧುರ ಕ್ಷಣಗಳು
ರಾಮ ರಾಮರ ಸಮಾಗಮ:ಪರಬ್ರಹ್ಮ ಧ್ಯಾನ ನಿರತರಾದ ಸ್ವಾಮೀಜಿ ಭಜನಾ ಪ್ರಿಯರು, ಮಾರುತಿಯೊಂದಿಗೆ ಶ್ರೀ ರಾಘವೇಶ್ವರನನ್ನು ನುತಿಸಿದರು. ಅವತಾರಿ ಪುರುಷ ಶ್ರೀ ರಾಮಚಂದ್ರನೇ ವಿಪ್ರರನ್ನು ಕಂಡು, ಪೂಜಿಸಿ. ಅವರ ಅನುಗ್ರಹ ಪಡೆಯಲು ಯೋಚಿಸಿದ್ದ; ಬ್ರಾಹ್ಮಣರಿಗೆ ಮಣಿದು ಸೇವಿಸಿದ್ದ. ಶ್ರೀ ರಾಮಾನಂದ ಸ್ವಾಮೀಜಿ ಶ್ರೀ ಮದ್‌ಶಂಕರಾಚಾರ್ಯಪೀಠದ ಸದ್ಗುರು ಶ್ರೀ ರಾಘವೇಶ್ವರ ಸ್ವಾಮೀಜಿಯವರನ್ನು ಪಾದಪೂಜೆ ಮಾಡೋಣವೆಂದು ಆಮುತ್ರಿಸಿದ್ದ ರು. ಚಿತ್ರಭಾನ ಸಂವತ್ಸರ ಶಿಶಿರ ಋತುವಿನ ಮಾಘಮಾಸ ಶುಕ್ಲ ಪಕ್ಷದ ನವಮಿ. ಶುಭ ಕುಜವಾಸರ. ಯೋಗಿವರ್ಯರೂ, ಅವಧೂತರೂ ಆಗಿರುವ ರಾಮಾನಂದ ಸ್ವಾಮೀಜಿ ಬೆಳಿಗ್ಗೆ ಒಂಭತ್ತು ಗಂಟೆಯಿಂದಲೇ ಉತ್ಸುಕರಾಗಿ ಶ್ರೀ ರಾಘವೇಶ್ವರರನ್ನು ಬರಮಾಡಿಕೊಳ್ಳುವ ಆತುರದಿಂದ ಆಚೀಚೆ ಓಡಾಡಿಕೊಂಡಿದ್ದರು. ಭಕ್ತರೆಲ್ಲ ಸಮಾವೇಶರಾಗಿ ತಳಿರುತೋರಣಗಳಿಂದ ಸಿಂಗರಿಸಿದ್ದರು. ರಂಗವಲ್ಲಿ ಎಲ್ಲೆಲ್ಲೂ ಸೌಂದರ್ಯವನ್ನು ಸೂಸಿತ್ತು. ಬಾಳೆಯ ಹಂಬೇ(ಹೊರ ಕವಚ)ಗಳನ್ನು ತೆಗೆದು ಅವುಗಳಿಂದ ಅಲಂಕೃತವಾದ. ದಂಡಾವಳಿ ಮಂಟಪ ಸಿದ್ಧವಾಗಿತ್ತು. ಸದಾ ರಾಮದೂತ ಹನುಮಂತನನ್ನು ಸೇವಿಸಿ, ಆತನೇ ತಾನಾಗಿ (ಅಭೇದ) ಬೆರೆತುಬಿಟ್ಟಿದ್ದ ರಾಮಾನಂದವಧೂತ ಸ್ವಾಮೀಜಿ ಬೆಳಗಿನಿಂದಲೇ ರಾಘವೇಶ್ವರನ ಆಗಮನದ ನಿರೀಕ್ಷೆಯಲ್ಲಿದ್ದರು. ರಾಮ ಬರುತ್ತಾನೆ, ರಾಘವೇಶ್ವರ ಬರುತ್ತಾನೆ ಅವರನ್ನು ಒಳಗೆ ಕರೆ ತಂದು ಎಂದು ಪೂಜಿಸೇನು ಎಂಬ ಲವಲವಿಕೆ ಕಾತರಗಳು ಸ್ವಾಮೀಜಿಯವರ ಮುಖದಲ್ಲಿ ಕಾಣುತ್ತಿದ್ದವು. ನೋಡನೋಡುತ್ತಿದ್ದ೦ತೆ ಜೈ ಜೈ ಕಾರಗಳ ಮಧ್ಯೆ ಅದ್ವೈ ತ ಸಿದ್ಧಾ ೦ತ ಪ್ರತಿಪಾದಕ, ಶ್ರೀ ಮದ್ ಶಂಕರಾಜಾರ್ಯಪೀಠದ ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶ್ರೀ ರಾಘವೇಶ್ವರ ಸ್ವಾಮೀಜಿಯವರು ತೋರಣದ ಸಮೀಪ ಬಂದರು. ಎಳೆ ತುಳಸಿಯಿಂದ ತಯಾರಿಸಿದ ಹಾರವನ್ನು ಕೈಯಲ್ಲಿ ಹಿಡಿದು ನಿಂತಿದ್ದ ರಾಮಾನಂದ ಸ್ವಾಮೀಜಿ, ರಾಘವೇಶ್ವರರನ್ನು ಕಂಡು ಕಣ್ಣುಗಳಲ್ಲಿ ಆನಂದಬಾಷ್ಪ ತುಂಬಿ ಬಂದು ನಗುಮುಖದಿಂದ ಭಾವಪರವಶರಾಗಿ ಕೈಯಲ್ಲಿದ್ದ ಆ ಮಾಲಿಕೆಯನ್ನು ರಾಘವದೇವನಿಗೆ ಅರ್ಪಿಸಿದರು. ರಾಮಾನಂದ ಸ್ವಾಮೀಜಿಯವರ ಆ ಭಾವಪೂರ್ಣ ಮುಖ ನೋಡುತ್ತ ನಿಂತ ಶ್ರೀ ರಾಘವೇಶ್ವರರು ತಮ್ಮ ಕೊರಳಿನಲ್ಲಿ ವಿರಾಜಿಸುವ ತುಳಸೀ ಮಾಲಿಕೆಯನ್ನು ತೆಗೆದು ರಾಮಾನಂದರ ಕೊರಳಿಗೆ ಅರ್ಪಿಸಿದರು.
ಯಾರು ಯಾರನ್ನು ಆಮಂತ್ರಿಸಿದರು? ಯಾರು ಯಾರನ್ನು ಸೇವಿಸಿದರು? ಇವರು ಯಾರು? ನೋಡಿದರೆ ರಾಮಾನಂದ ತುಂದಿಲರಾದ ಪರಮಾನಂದದಲ್ಲಿ ವಿಹರಿಸುತ್ತಿರುವ ಅವಧೂತರು ಒಂದು ಬ್ರಹ್ಮವಾದರೆ, ಅದ್ವೈತ ಸಿದ್ಧಾಂತ ಪ್ರತಿಪಾದಕ, ಹವ್ಯಕ ಪೀಠಾಧೀಶರಾಘವೇಶ್ವರರು ಇನ್ನೊಂದು ಬ್ರಹ್ಮ, ಅವರಲ್ಲಿ ಭೇದವೇ ಇಲ್ಲ. ತಮ್ಮ ತಮ್ಮಲ್ಲೇ ಒಂದಾಗಿ, ಸುಂದರವಾಗಿ ಹಾಸಿದ್ದ ರಂಗವಲ್ಲಿ ದಾಟುತ್ತ ಬಂದರು. ಮೊದಲೇ ಸಿಂಗರಿಸಿಟ್ಟ ಮಂಟಪದಲ್ಲಿ ಹನುಮನೆದುರು' ಶ್ರೀ ರಾಘವೇಶ್ವರರು ಅಂದಣವನ್ನೇರಿದರು. ರಾಮ-ಸ್ವಾಮಿಯನ್ನು ನೋಡುತ್ತ ನಿಂತ ಭಕ್ತ ಪರಿವಾರ ತಮಗರಿವಿಲ್ಲದಂತೆಯೇ ಎರಡೂ ಕೈಗಳನ್ನು ಜೋಡಿಸಿ ವಂದಿಸಿದರು. ಸುಂದರೇ ಸುಂದರೋ ರಾಮಃ ಸುಂದರೇ ಸುಂದರೋ ಕಪಿಃ ಸುಂದರೇ ಸುಂದರೀ ಸೀತಾ ಸುಂದರೇ ಕಿಂ ನ ಸುಂದರಂ ॥ ಎನ್ನುವಂತೆ ಪರಮಾನಂದ ಭರಿತ ರಾಮಾನಂದ ಸ್ವಾಮೀಜಿ, ಹಸನ್ಮುಖಿಯಾದ ರಾಘವೇಶ್ವರ ಸ್ವಾಮೀಜಿ, ಒಳಗೊಳಗೇ ಖುಷಿಯಿಂದ ನಗುತ್ತಿರುವ ರಾಮಧೂತ ಮಾರುತಿ ಸುಂದರದ ಪಾರಮ್ಯದಲ್ಲಿ ಲೀನವಾಗಿದ್ದನ್ನು ನೋಡಿದ ಶರಣರ ಮನೋ ಕುಸುಮ ಸುಂದರವಾಗಿ ಅರಳಿತು. ರಾಘವೇಶ್ವರ ಸ್ವಾಮೀಜಿಯವರ ಪಾದಗಳನ್ನು ಒತ್ತುತ್ತಾ, ಕೈಹಿಡಿದು ಕುಲುಕುತ್ತಾ ತಮ್ಮ ಭಾಷೆಯಲ್ಲಿ ಏನೇನೋ ಮಾತನಾಡಿಕೊಳ್ಳು ತ್ತಿದ್ದಾರೆ. ತುಲಸೀ ದಳಗಳ ಮಾಲೆ “ರಾಮಾನಂದ ಸ್ವಾಮೀಜಿಯವರು ರಾಘವೇಶ್ವ ರರ ಕೊರಳಿಗೆ ಹಾಕುತ್ತಿದ್ದಾರೆ. ಹನುಮ, ರಾಮರ ಭಾವವೋ, ಪರಬ್ರಹ್ಮ ಪರಬ್ರಹ್ಮ ದಿ ಭಾವವೋ ಅಥೈ ೯ಸುವುದೇ ಅಸಾಧ್ಯವಾಗಿತ್ತು. ಭಕ್ತರಿಗೆ ಮಧುವನದಲ್ಲಿ ಶ್ರೀ ಹರಿಯನ್ನು ಕಂಡು ಪುಲಕಿಕಳಾದ ರಾಧೆಯಂತೆ ಮೈಮನವೆಲ್ಲ ಸದ್ಗುರು ಅವಧೂತರನ್ನು ನೋಡುತ್ತಾ ಮೈಮರೆತು ಸವಿಯನ್ನು ಸವಿಯುತ್ತಿ ದ್ದ ರು. ಭಕ್ತ ರು. ಭಜನೆ ಮಾಡುತ್ತಾ ಹಾಡು ಹಾಡುತ್ತಾ ಗುರುದ್ವ ಯರನ್ನು ನೋಡುತ್ತಾ. ನಿಂತಿದ್ದರು. ರಾಘವೇಶ್ವ ರ ಸ್ವಾಮೀಜಿಯವರ ಪಕ್ಕದಲ್ಲಿ ಗೋರೆಯ ಶ್ರೀ ನಿರ್ಮಲಾನಂದ ಸ್ವಾಮೀಜಿ ನಿರ್ಮಲವಾದ. ಭಾವಪೂರ್ಣ ರಸ "ಘಳಿಗೆಗಳನ್ನು ನೋಡುತ್ತಾ ಅಲುಗಾಡದೆ ಏಕಚಿತ್ತ ರಾಗಿ ಕುಳಿತಿದ್ದ ರು. ರಾಘವೇಶ್ವ ರರು ಪುನಃ ತಮ್ಮ ಕೊರಳಿನಲ್ಲಿರುವ ತುಳಸೀಮಾಲೆಗಳನ್ನು ತೆಗೆಯತೊಡಗಿದರು. ರಾಮಾನಂದಸ್ವಾಮೀಜಿ ತಮ್ಮ, ಕೈಮುಂದೆ ಮಾಡಿ ಬಾಚಿ ತೆಗೆದುಕೊಂಡರು. ಒಂದೆರಡು ಮಾಲಿಕೆ ತಮ್ಮ ಕೊರಳಲ್ಲಿ ಧರಿಸಿದರು. ಪ್ರಸಾದವೆಂಬಂತೆ ಹಾಗೆಯೇ ಒಂದೆರಡು ಮಾಲಿಕೆಯನ್ನು ನಿರ್ಮಲಾನಂದ ಸ್ವಾಮೀಜಿಯವರ ಕೊರಳಿಗೆ ಹಾಕಿದರು. ಕಾರಣಪುರುಷನ ಪಾದಸೇವೆಯಲ್ಲಿ ಪರಮಾನಂದ ಆನಂದ ಸ್ವರೂಪ ಎದ್ದು ತೋರುತ್ತಿದೆ. ಜತೆ ನಿರ್ಮಲಾಂತಃಕರಣ ಆನಂದ ಅವನ್ನು ಸವಿಯುತ್ತಾ ಇದೆ. ಇಂತಹ ಸನ್ನಿವೇಶವನ್ನು ನೋಡುತ್ತಿ ದ್ದ ಮಾರುತಿಯು ತನಗಾದ ಆನಂದ ಸಂತೋಷಗಳನ್ನು ತನ್ನನ್ನೇ ನಂಬಿ ಬಂದ ಶರಣರಿಗೆ ದಯಪಾಲಿಸಿದ. ಜನರು ಧನ್ಯತೆಯನ್ನು ಹೊಂದಿದರು. ನಿರ್ಮಲ ಅದ್ವೈತ ಆನಂದ ಸ್ವರೂಪವೇ ದೀವಗಿಯ ಆಶ್ರಮದಲ್ಲಿ ವ್ಯಾಪಿಸಿತ್ತು. ಆನೋಟ ಅಲ್ಲಿ ಸೇರಿದ ಶರಣರನ್ನು ಅಪೂರ್ವ ಲೋಕಕ್ಕೆ ಸೆಳೆದೊಯ್ದಿತ್ತು. ಈ ಮಹಾಜನಗಳ ಮಧ್ಯೆ ಶ್ರೀ ರಾಘವೇಶ್ವ ರರ ಅಮೃತ ತುಲ್ಯವಾದ ವಾಣಿ ಭಕ್ತರ ಕಿವಿಗೆ ಇಂಪನ್ನೂ ಮನಸ್ಸಿಗೆ ತಂಪನ್ನೂ ನೀಡುತ್ತಿತ್ತು. ಸೀತಾರಾಮರನ್ನು ಸೇರಿಸುವ ಕಾರ್ಯದಲ್ಲಿ ಮಾರುತಿದೇವ ಶ್ರಮಿಸಿದ ಪರಿಯನ್ನು ಹೇಳುತ್ತಾ ರಾಘವದೇವರು, ಮುಖ್ಯಪ ಪ್ರಾಣನಿಗೂ, ರಾಮನಿಗೂ ಇರುವ ಅನೊನ್ಯವಾದ ಸಾಮೀಪ್ಯ ಹಾಗೂ ಮಮತಾ ಭಾವಗಳನ್ನು ಕೊಂಡಾಡಿದರು. ಪ್ರಭು ರಾಮಚಂದ್ರನ ಆಶಯ ಸ್ವಾಮಿಯ ಮುಖಾರವಿಂದದಿಂದ ಹೊರಹೊಮ್ಮಿತ್ತು “ ರಾಮನ ಜೊತೆಗೆ ಮಾರುತಿಯು ಸಕಲ ಭಕ್ತರನ್ನೂ ಪೊರೆಯುವನು ಈ ಮಾತನ್ನು ಮಹಾಜನಗಳ ಸಾಕ್ಷಿಯಾಗಿ ಹೇಳುತ್ತೇನೆ'' ಎಂದರು. ಈ ದೀವಿಗಿ ಇನ್ನೂ ಅಭಿವೃದ್ಧಿ ಹೊಂದಿ ಸುಕ್ಷೇತ್ರವಾಗಿ ಮೆರೆಯುವುದೆಂಬ ಆಶಯ ವ್ಯಕ್ತ ಪಡಿಸಿದರು. ಶರಣು ಬಂದ ಭಕ್ತರಿಗೆಲ್ಲ ಅಭಯವನ್ನಿತ್ತು, ಶ್ರೀ ರಾಘವೇಶ್ವರರು ಮತ್ರಾಕ್ಷತೆ ಪ್ರಸಾದವನ್ನಿತ್ತು ಕ್ರಪಾಶ್ರಯವಿತ್ತು ಸಲಹಿದರು. ಸದ್ಭಕ್ತರು ರಾಮಾನಂದ ಸ್ವಾಮೀಜಿಯವರಿಗೂ ವಂದಿಸಿ, ಅವರ ಮಂತ್ರಾಕ್ಷತೆ ಸ್ವಿ ಕರಿಸಿ ಧನ್ಯರಾದರು. ಎಡದ ಪಾಶ್ವ೯ದಲ್ಲಿ ನಿರ್ಮಲಾನಂದ ಸ್ವಾಮೀಜಿ, ಬಲದ ಪಾರ್ಶ್ವದಲ್ಲಿ ರಾಮಾನಂದ ಸ್ವಾಮೀಜಿ ನಡುವೆ ಶ್ರೀ ರಾಘವೇಶ್ವರ ಸ್ವಾಮೀಜಿ ಈ ತ್ರಿವೇಣಿಸಂಗಮದ ಸನ್ನಿವೇಶ ಮಧುರ ಕ್ಷಣಗಳನ್ನು ಸವಿದು, ಸದಾನಿತ್ಯನೂತನವಾದ ಆ ಭಾವಪೂರ್ಣ ಸಮಯವನ್ನು ಮನಸ್ಸಿನಲ್ಲಿ ಮನನ ಮಾಡಿಕೊಳ್ಳುತ್ತಾ 200-250 ಭಾಗ್ಯವಂತರು ಸವಿಯನ್ನು ಮೆದ್ದು ಇಂದಿಗೂ ಹಂಬಲಿಸುತ್ತಲಿದ್ದಾರೆ. ಭಗವಾನ್. ರಾಮಾನಂದ ಸ್ವಾಮೀಜಿಯವರ ಯೋಜನೆಯಂತೆ ನಡೆದ ಈ ಸನ್ನಿವೇಶ ತಮಗೆ ಆಸ್ವಾದಿಸಲು ಸಿಕ್ಕಿದ್ದನ್ನು ನೆನೆಯುತ್ತ ಭಕ್ತರು ಆನಂದಿಸಿದರು. ಅಂದು ಕೌಶಿಕಮುನಿ (ವಿಶ್ವಾಮಿತ್ರ) ತಾನು ಭಕ್ತಿಪೂರ್ವಕವಾಗಿ ಶ್ರೀರಾಮನನ್ನು ಪರಮಪುರುಷ ಪರಬ್ರಹ್ಮನೆಂದು ಕೊಂಡಾಡಿದ. ಅದರಿಂದಲೇ ಇಂದು ನಮಗೆಲ್ಲ ಶ್ರೀ ರಾಮನನ್ನು ನೆನೆಯುವಂತೆ ಮಾಡಿದ. (ಅಂತಹ ವಿಶ್ವಾಮಿತ್ರ ಗೋತ್ರದಲ್ಲಿ ಜನಿಸಿದವರು ರಾಮಾನಂದಸ್ವಾಮೀಜಿ) ವಿಶ್ವಾಮಿತ್ರ ಋಷಿ ವಿಭಕ್ತಿಯೆಲ್ಲವನ್ನೂ ಸ್ವಾಮಿಯಲ್ಲಿ ಆರೋಪಿಸಿ, ಭಕ್ತಿಯನ್ನು ತಾನು ಇರಿಸಿಕೊಂಡು “ರಾಮೋ ರಾಜಮಣಿಸ್ಸದಾ ವಿಜಯತೇ...” ಎಂದು ಸ್ತುತಿಸಿದ್ದು. ರಾಮನು ರಾಜಶ್ರೇಷ್ಠನು. ಅವನನ್ನು ನುತಿಸಿದವರಿಗೆ ಯಾವಾಗಲೂ ಜಯವುಂಟು. ಸೀತೆಯ ಪತಿಯಾದ (ಒಡೆಯನಾದ) ಅಂತಹ ರಾಮನನ್ನು ಭಜಿಸುವೆನು. ರಾಕ್ಷಸ ಸೈನ್ಯವು ರಾಮನಿಂದ ಕೊಲ್ಲಲ್ಪಟ್ಟಿತು. (ಅಂತಹ) ರಾಮನಿಗೆ ನಮಸ್ಕಾರವು. ನನಗೆ ಶ್ರೀ ರಾಮನ ಹೊರತು ಎರಡನೆಯ ದೊಡ್ಡ ಪರಾಯಣ ವಸ್ತುವಿಲ್ಲ. (ಅವನ ಸ್ಮರಣೆಯಿಂದ ಪರದೊಂದಿಗೆ ಏಕತ್ವವನ್ನು ಹೊಂದುತ್ತೇನೆ) ನಾನು ರಾಮನ ದಾಸನು. ಯಾವಾಗಲೂ ನನ್ನ ಚಿತ್ತವು ರಾಮನಲ್ಲಿ ಲಯಗೊಳ್ಳಲಿ. ಎಲೈ ರಾಮನೇ ನನ್ನನ್ನು ಉದ್ದರಿಸು ಎಂಬುದಾಗಿ ನುತಿಸಿ ಶ್ರೀರಾಮನಲ್ಲಿ ರಮಮಾಣನಾದನು. ಪ್ರತಿಸ್ವರ್ಗವನ್ನೇ ನಿರ್ಮಿಸುವ ಶಕ್ತಿಯನ್ನು ಹೊಂದಿದ (ವಿಶ್ವಾಮಿತ್ರ)ರಾಮಾನಂದಾವಧೂತ ಸ್ವಾಮೀಜಿ ಇಲ್ಲಿ ನೆಲೆ ನಿಂತ ಕೆಲ ಸಮಯದಲ್ಲೇ ಮಾರುತಿರಾಯ ಈ ಅಘನಾಶಿನಿ ತೀರದಲ್ಲಿ ಸ್ವಾಮೀಜಿಯವರೊಂದಿಗೆ ತಾನೂ ಒಂದಾಗಿಬಿಟ್ಟ. ಅಲ್ಲದೇ ತನ್ನೆಲ್ಲ ಕಾರ್ಯಗಳನ್ನೂ ಶ್ರೀ ರಾಮಾನಂದರ ಮುಖೇನ ಮಾಡಿಸುತ್ತಿದ್ದಾ ನೆ ಶ್ರೀ ರಾಘವೇಶ್ವರರು “ 'ಶ್ರೀ ರಾಮನೊಂದಿಗೆ ಮಾರುತಿಯು ಸಕಲರನ್ನೂ ಕಾಯುವ ಎಂದಿದ್ದಾರೆ. ಇಲ್ಲಿ ಮಾರುತಿಯೊಂದಿಗಿರುವ ಶ್ರೀ ರಾಮಾನಂದ ಸ್ವಾಮೀಜಿ ಶ್ರೀ ರಾಮನೇ ಎಂಬುದು ಉಕ್ತವಾಗುತ್ತದೆ. (ಸ್ವಾಮೀಜಿಯವರಿಗೆ ತಂದೆ ನಾಮಕರಣ ಮಾಡಿದ್ದು ರಾಮಚಂದ್ರನೆಂತಲೇ, ಇಂದು ರಾಮಾನಂದ ಸ್ವಾಮೀಜಿಯಾಗಿದ್ದಾ ರೆ. ರಾಮ ರಾಜಮಣಿಯಾದರೆ ಸ್ವಾಮೀಜಿ ಯೋಗಿರಾಜಮಣಿ.) ಹೀಗೆ ಅಘನಾಶಿನಿ ತೀರದಲ್ಲಿ ಭಕ್ತಜನರ ಅಘನಿವಾರಕನಾದ ಸ್ವಾಮೀಜಿ ಶರಣ ಜನರನ್ನು ಉದ್ದರಿಸುತ್ತ ತಮ್ಮ ದಿವ್ಯವಾದ ತೀರ್ಥ, ಮಂತ್ರಾಕ್ಷತೆಗಳನ್ನು ನೀಡಿ, ಪತಿತರನ್ನು ಭವಜಲಧಿಯಿಂದ ದಾಟಿಸುತ್ತ ಆನಂದ ತುಂದಿಲರಾಗಿ ನಿಂತಿದ್ಧಾರೆ. ಜಯ ನಮೋ ಶ್ರೀ ರಾಮಾನಂದಾವಧೂತ ಸ್ವಾಮೀಜಿ.
